ಹೈದರಾಬಾದ್​:ವಿಚಿತ್ರ ಲುಕ್​ನಿಂದ ಮಾತ್ರವಲ್ಲದೇ ಕಡಿಮೆ ಕೊಬ್ಬಿನಂಶದೊಂದಿಗೆ ಮಾಂಸದ ಬಗೆಗಳಲ್ಲಿ ಆರೋಗ್ಯಕರ ಎನಿಸಿಕೊಂಡಿರುವ ಕಡಕ್​ನಾಥ್​ ಚಿಕನ್​ ಇದೀಗ ಹೈದರಾಬಾದ್​ನಲ್ಲಿ ತುಂಬಾ ದುಬಾರಿಯಾಗಿದೆ.
ಕಡಕ್​ನಾಥ್​ ಕೋಳಿ ಮಾಂಸ ಕೆಜಿಗೆ 1000 ರೂಪಾಯಿಯಿಂದ 1200 ರೂ. ವರೆಗೂ ಮಾರಾಟವಾಗುತ್ತದೆ. ಈಗಾಗಲೇ ದುಬಾರಿ ಎನಿಸಿಕೊಂಡಿರುವ ಮಟನ್​ ಸಹ ಕಡಕ್​ನಾಥ್​ ಮುಂದೆ ಅಗ್ಗ ಎನಿಸಿಕೊಂಡಿದೆ. ಒಂದು ಕೆಜಿ ಮಟನ್​ಗೆ ತಗಲುವ ಖರ್ಚಿನಲ್ಲಿ ಅರ್ಧ ಕೆಜಿ ಕಡಕ್​ನಾಥ್​​ ಚಿಕನ್​ ಬರುತ್ತದೆ.

ಇನ್ನು ಈ ಕಡಕ್​ನಾಥ್​ ತಳಿಯ ಮೂಲ ಮಧ್ಯಪ್ರದೇಶ ಮತ್ತು ಛತ್ತೀಸ್​ಗಢ ಮತ್ತು ಗುಜರಾತ್​ ಹಾಗೂ ರಾಜಸ್ಥಾನದ ಕೆಲವು ಭಾಗಗಳು. ಅದರಲ್ಲೂ ಇಂತಹ ಕೋಳಿಗಳು ಹೆಚ್ಚು ಬುಡಕಟ್ಟು ಸಮುದಾಯದಲ್ಲಿ ಕಂಡುಬರುತ್ತವೆ. ಈ ಕೋಳಿಯ ವಿಶೇಷ ಕೊಕ್ಕಿನಿಂದ ಹಿಡಿದು ಕಾಲ ತುದಿಯವರೆಗೂ ಕಪ್ಪು ಬಣ್ಣದಿಂದ ಕೂಡಿದೆ. ಅಲ್ಲದೆ, ಅದರ ಮಾಂಸ ಮತ್ತು ಮೊಟ್ಟೆಯು ಸಹ ಕಪ್ಪು ಬಣ್ಣವೇ.
ಇದನ್ನೂ ಓದಿರಿ:ಪ್ರತಿ ರಾತ್ರಿ ಮಲಗುವಾಗ ಇದನ್ನು ತಪ್ಪದೇ ಮಾಡಿ… ಸುಳ್ಳು ಖುಷಿ ಕೊಟ್ಟಿತಾ ನೋಡಿಕೊಳ್ಳಿ…
ಈ ಕೋಳಿಗಳನ್ನು ಮೊಟ್ಟೆ ಮತ್ತು ಮಾಂಸಕ್ಕಾಗಿ ಸಾಕಲಾಗುತ್ತದೆ. ಬೆಳೆದು ಸಾಮಾನ್ಯ ಗಾತ್ರಕ್ಕೆ ಬರಲು 8 ತಿಂಗಳು ತೆಗೆದುಕೊಳ್ಳುತ್ತದೆ. ಆದರೆ, ಬಾಯ್ಲರ್​ ಕೋಳಿಗಳು ಕೇವಲ 45 ದಿನಗಳಲ್ಲಿ ದಪ್ಪದಾಗುತ್ತವೆ. ಅನೇಕ ನಗರಗಳಿಗೆ ಕಡಕ್​ನಾಥ್​ ಮಾಂಸವನ್ನು ಪೂರೈಸುವ ಕಡಕ್​ನಾಥ್​ ಚಿಕನ್​ ಫಾರ್ಮ್ಸ್​ ಹೇಳುವಂತೆ ಪ್ರತಿ ಕೋಳಿಯ ಸಂತಾನೋತ್ಪತ್ತಿಗೆ 500 ರೂ. ವೆಚ್ಚವಾಗುತ್ತದೆ. ಈ ಕೋಳಿ ಪ್ರತಿದಿನ 100 ಗ್ರಾಂ ಆಹಾರ ತಿನ್ನುತ್ತದೆ ಎಂದಿದ್ದಾರೆ.

ಹೀಗಾಗಿ ಕೋಳಿ ಮಾಂಸ ತುಂಬಾ ದುಬಾರಿಯಾಗಿದೆ. ಇನ್ನು ಮೊಟ್ಟೆಯು ಕೂಡ ಕಡಿಮೆಯೇನಲ್ಲ. ಒಂದು ಮೊಟ್ಟೆಗೆ 30 ರೂ. ದರವಿದೆ. ಕಡಕ್​ನಾಥ್​ ಕೋಳಿಯ ಮಾಂಸ ಮತ್ತು ಮೊಟ್ಟೆ ಪೌಷ್ಟಿಕಾಂಶಗಳ ಆಗರವೆಂದೇ ನಂಬಲಾಗಿದೆ. ಅದರಲ್ಲೂ ಅಧಿಕ ರಕ್ತದೊತ್ತಡ ಇರುವ ಹಿರಿಯ ನಾಯಕರಿಗೆ ತುಂಬಾ ಉಪಯುಕ್ತವಂತೆ. ಹೀಗಾಗಿ ಈ ಕೋಳಿಗೆ ಇವು ಡಿಮ್ಯಾಂಡ್​ ಮೇಲೆ ಮಾರುಕಟ್ಟೆಯಲ್ಲಿ ಅಧಿಕ ಬೆಲೆ ಇದೆ.(ಏಜೆನ್ಸೀಸ್​)
ಮೋದಿಯವರ ಭಾಷಣ ಬರೆಯುವವರು ಯಾರು? ಅವರಿಗೆ ಎಷ್ಟು ಸಂಬಳ ಕೊಡಲಾಗುತ್ತಿದೆ?

ಎಎಪಿ ಜಯಭೇರಿ! ಐದರಲ್ಲಿ ನಾಲ್ಕು ಸ್ಥಾನ ಎಎಪಿ ಪಾಲು; ಕಾಂಗ್ರೆಸ್​ಗೆ ಒಂದು ಸ್ಥಾನದಲ್ಲಿ ಗೆಲುವು

10 ಸೆಕೆಂಡ್​ ಈ ವಿಡಿಯೋ ಬೆಲೆ ₹48 ಕೋಟಿ! ಇದರಲ್ಲಿರೋದು ಮಲಗಿರುವ ಟ್ರಂಪ್- ನೀವೂ ನೋಡಿ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 + 7 =
Remember me
