ನವದೆಹಲಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಗಮನಕ್ಕೆ ದಿನಗಣನೆ ಶುರುವಾಗಿದೆ. ಫೆ.24-25ರಂದು ಅವರು ಭಾರತ ಪ್ರವಾಸ ಮಾಡಲಿದ್ದು, ಅವರಿಗಾಗಿ ಅಹಮದಾಬಾದ್​ನ ಮೊಟೇರಾ ಸ್ಟೇಡಿಯಂನಲ್ಲಿ ಬೃಹತ್ ಕಾರ್ಯಕ್ರಮವೂ ಆಯೋಜಿತವಾಗಿದೆ.
ನಮಸ್ತೆ ಟ್ರಂಪ್ ಕಾರ್ಯಕ್ರಮವನ್ನು ಅಭೂತಪೂರ್ವವಾಗಿ ನಡೆಸಿಕೊಡುವುದಕ್ಕೆ ಎಲ್ಲ ರೀತಿಯ ಸಿದ್ಧತೆಗಳೂ ಸಾಗಿವೆ. ಮೊಟೇರಾ ಸ್ಟೇಡಿಯಂ ಕಾರ್ಯಕ್ರಮಕ್ಕೆ ಅಮೆರಿಕ ಅಧ್ಯಕ್ಷ ಟ್ರಂಪ್ ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಪ್ರವೇಶಿಸುವ ವೇಳೆ ಭರ್ಜರಿ ಹಾಡು ಮೊಳಗಲಿದೆ. ಕಾರ್ಯಕ್ರಮದ ನಡುವೆಯೂ ಹಾಡುಗಳು ಇರಲಿದ್ದು, ಅಂತ್ಯದಲ್ಲೂ ಹಾಡು ಇರಲಿದೆ. ಎಲ್ಲವನ್ನೂ ಯೋಜನಾಬದ್ಧವಾಗಿ ಮಾಡುವುದರ ಹೊಣೆಗಾರಿಕೆಯನ್ನು ಪ್ರಸಿದ್ಧ ಸಂಗೀತಗಾರ ಕೈಲಾಶ್ ಖೇರ್ ಅವರಿಗೆ ನೀಡಲಾಗಿದೆ.
ಯಾವುದೇ ಪ್ಲಾನಿಂಗ್ ಇಲ್ಲದೇ ಹೊಣೆಗಾರಿಕೆಯನ್ನು ನಿವರ್ಹಿಸುತ್ತೇನೆ ಎಂದಿರುವ ಖೇರ್, ಆರಂಭದಲ್ಲಿ ಯಾವ ರೀತಿ ಹಾಡು ಮೊಳಗಲಿದೆ. ಅಂತ್ಯದಲ್ಲಿ ಯಾವ ಹಾಡು ಎಂಬಿತ್ಯಾದಿ ವಿವರಗಳನ್ನು ಎಎನ್​ಐ ಜತೆ ಮಾತನಾಡುತ್ತ ಬಹಿರಂಗಪಡಿಸಿದ್ದಾರೆ. (ಏಜೆನ್ಸೀಸ್)
#WATCH"The performance to start with the song 'Jai-Jai-Kara, Swami saath dena humara' and end with 'Bam Bam Lahiri', if I have my way I would make him(Trump) also dance on this song,"Kailash Kher on his performance at 'Namaste Trump' event at Motera Stadium in Ahmedabad on Feb24pic.twitter.com/rOlr5W6368
— ANI (@ANI)February 22, 2020

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × three =
Remember me
