ಕಲ್ಯಾಣ್​ (ಮಹಾರಾಷ್ಟ್ರ):ಬಹು ಅಂತಸ್ತಿನ ಕಟ್ಟಡವೊಂದರಲ್ಲಿನ ಲಿಫ್ಟ್​ ಮಧ್ಯೆಯೇ ನಿಂತು ಸುಮಾರು ಮೂರು ಗಂಟೆಗಳ ಕಾಲ ಮೂವರು ಮಕ್ಕಳು ಸಿಲುಕಿಕೊಂಡಿದ್ದ ಘಟನೆ ಮಹಾರಾಷ್ಟ್ರದ ಕಲ್ಯಾಣ್​ನಲ್ಲಿ ನಡೆದಿದೆ.
ಗಾಂಧಿ ಚೌಕ್‌ನ ಮೋಹನ್ ಚೆಡ್ಡಾ ಅವೆನ್ಯೂ ಸೊಸೈಟಿಯಲ್ಲಿರುವ ಲಿಫ್ಟ್​ ಕೆಟ್ಟಿದ್ದರಿಂದ ಈ ಅನಾಹುತ ಸಂಭವಿಸಿದೆ. ಐದು ಅಂತಸ್ತಿನ ಕಟ್ಟಡದ ಮೂರನೇ ಮಹಡಿಯಲ್ಲಿರುವ ಲಿಫ್ಟ್‌ನೊಳಗೆ ಮಕ್ಕಳು ಸಿಲುಕಿಕೊಂಡಿದ್ದರು. ಲಿಫ್ಟ್​ ಒಳಗಿನಿಂದ ಮಕ್ಕಳು ಕೂಗಿಕೊಂಡರೂ, ಮೊದಲು ಅದನ್ನು ಯಾರೂ ಕೇಳಿಸಿಕೊಳ್ಳಲಿಲ್ಲ. ಸಹಾಯಕ್ಕಾಗಿ ಅಂಗಲಾಚಿದ ಮಕ್ಕಳು ಆರಂಭದಲ್ಲಿ ಕೂಗಿ ಕೂಗಿ ಸುಸ್ತಾದರು.
ಇದನ್ನೂ ಓದಿ:ಮಿತ್ರೋ ಆ್ಯಪ್​ ತನ್ನದೇ ಎಂದು ಹಸಿಸುಳ್ಳು ಹೇಳಿರುವ ಪಾಕ್​ನಿಂದೀಗ ನಕಲಿ ಆರೋಗ್ಯ ಸೇತು ಆ್ಯಪ್​!
ನಂತರ ಲಿಫ್ಟ್​ ಕೆಟ್ಟಿರುವ ಬಗ್ಗೆ ಅಲ್ಲಿಯ ನಿವಾಸಿಗಳಿಗೆ ತಿಳಿದಿದೆ. ತಮ್ಮ ಮಕ್ಕಳು ಮನೆಗೆ ಮರಳದ ಕಾರಣ, ಆತಂಕಗೊಂಡಿದ್ದ ಮಕ್ಕಳ ಪಾಲಕರಿಗೆ ನಂತರ ವಿಷಯ ತಿಳಿದಿದೆ. ಇದಾಗುವ ಹೊತ್ತಿಗೆ ಸುಮಾರು ಮೂರು ಗಂಟೆ ಕಳೆದಿತ್ತು. ಸೊಸೈಟಿಯ ತಂತ್ರಜ್ಞ ಎಷ್ಟೇ ಹರಸಾಹಸ ಪಟ್ಟರೂ ಲಿಫ್ಟ್‌ನ ಬಾಗಿಲು ತೆರೆಯಲು ಸಾಧ್ಯವಾಗಲಿಲ್ಲ, ಕೂಡಲೇ ಅಗ್ನಿಶಾಮಕ ದಳಕ್ಕೆ ಕರೆ ಮಾಡಲಾಗಿತ್ತು.
ಅಗ್ನಿಶಾಮಕ ಕೇಂದ್ರದ ಉಸ್ತುವಾರಿ ವಿನಾಯಕ್ ಲೋಖಂಡೆ ಅವರ ನಾಲ್ಕು ಸದಸ್ಯರ ತಂಡದೊಂದಿಗೆ ಸ್ಥಳಕ್ಕೆ ಧಾವಿಸಿದರು. ಅದಾಗಲೇ ಮೂರು ಗಂಟೆ ಸಿಲುಕಿ ಅಳುತ್ತಿದ್ದ ಮಕ್ಕಳು ಕಂಗೆಟ್ಟು ಹೋಗಿದ್ದರು. ವೆಂಟಿಲೇಟರ್​ ಲಿಫ್ಟ್​ನಲ್ಲಿ ಇದ್ದುದರಿಂದ ಮಕ್ಕಳ ಜೀವಕ್ಕೆ ಅಪಾಯವಾಗಿಲ್ಲ ಎಂದು ಖಾತ್ರಿಪಡಿಸಿಕೊಂಡ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ಮುಂದುವರೆಸಿದರು.
ಇದನ್ನೂ ಓದಿ:ತೆಲಂಗಾಣದಲ್ಲಿ ಎಸ್​ಎಸ್​ಎಲ್​ಸಿ ಪರೀಕ್ಷೆ ರದ್ದು: ಎಲ್ಲರೂ ಪಾಸ್​ ಎಂದ ಸರ್ಕಾರಅದಾಗಲೇ ಮಕ್ಕಳು ವಿಪರೀತ ಭಯಗೊಂಡಿದ್ದರಿಂದ ಹೈಡ್ರಾಲಿಕ್ ಕಟ್ಟರ್ ಅನ್ನು ಬಳಸಲು ನಿರ್ಧರಿಸಿದ ಸಿಬ್ಬಂದಿ, ಅದರಿಂದ ಲಿಫ್ಟ್​ ಬಾಗಿಲನ್ನು ಮುರಿದು ಮೂವರು ಮಕ್ಕಳನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ. ಸಂಪೂರ್ಣ ಕಾರ್ಯಾಚರಣೆಗೆ ಕೇವಲ 10 ನಿಮಿಷ ತೆಗೆದುಕೊಂಡು ಮಕ್ಕಳನ್ನು ರಕ್ಷಿಸಿದ ಸಿಬ್ಬಂದಿಗೆ ಎಲ್ಲರೂ ಅಭಿನಂದಿಸಿದ್ದಾರೆ. ನಮನ್ ಜೈನ್ (12), ದಕ್ಷಿಣ ಜೈನ್ (8) ಮತ್ತು ವೀರ್ತಿ ಜೈನ್ (8) ಸುರಕ್ಷಿತವಾಗಿ ಪಾಲಕರ ಮಡಿಲು ಸೇರಿದ್ದಾರೆ.
ಮಾತು ಕೇಳಿಲ್ಲ ಅಂದ್ರೆ ಉದ್ಧವ್​ ಕಾಕಾಗೆ ಹೇಳ್ತೇನೆ ಅಂದಿದ್ದ ಅಮ್ಮನಿಗೆ ಖುದ್ದು ಫೋನ್​ ಮಾಡಿದ ಸಿಎಂ ಠಾಕ್ರೆ!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:2 + seventeen =
Remember me
