ಚೆನ್ನೈ:ಹಿರಿಯ ನಟ ಕಮಲ್​ ಹಾಸನ್​ ಇಂದು 67ನೇ ಹುಟ್ಟಿದಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಚಿತ್ರರಂಗದ ಗಣ್ಯರಿಂದ ಹಾಗೂ ಅಭಿಮಾನಿಗಳಿಂದ ಅವರಿಗೆ ಶುಭಾಶಯಗಳು ಹರಿದುಬರುತ್ತಿವೆ. ಈ ಸಂದರ್ಭಕ್ಕೆ ಅವರು ತಮ್ಮ ಅಭಿಮಾನಿಗಳಿಂದ ಒಂದು ವಿಶೇಷ ಉಡುಗೊರೆಯನ್ನು ಕೇಳಿದ್ದಾರೆ.
ತಮಿಳುನಾಡಿನ ರಾಜಧಾನಿ ಚೆನ್ನೈನಲ್ಲಿ 2015 ರ ನಂತರದ ಅತಿ ಹೆಚ್ಚು ಪ್ರಮಾಣದ ಮಳೆ ಸುರಿಯುತ್ತಿದೆ. ಭಾನುವಾರದಂದು ಸ್ಥಳೀಯ ಆಡಳಿತ ಜನರಿಗೆ ಪ್ರವಾಹದ ಎಚ್ಚರಿಕೆಯನ್ನೂ ನೀಡಿದೆ. ಹೀಗಿರುವಾಗ, ಪ್ರವಾಹಗಳಿಂದಾಗಿ ನರಳುತ್ತಿರುವ ಬಡವರಿಗೆ ಮತ್ತು ಅಗತ್ಯವಿರುವ ಜನರಿಗೆ ಸಹಾಯ ಮಾಡಿ ಎಂದು ಕಮಲ್​​​ ಟ್ವಿಟರ್​​ ಮೂಲಕ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ. ಇದೇ ನನಗೆ ನೀವು ನೀಡಬಲ್ಲ ಅತ್ಯುತ್ತಮ ಉಡುಗೊರೆ ಎಂದೂ ಹೇಳಿದ್ದಾರೆ.
A small gift from me to you@ikamalhaasansir ❤️Happy Birthday Ulaganayagan 🙏https://t.co/hmoRIZAktJ#VikramFirstGlance#HBDKamalHaasan#KamalHaasan#Vikram_April2022#Vikram
— Lokesh Kanagaraj (@Dir_Lokesh)November 6, 2021

ಪ್ರಸ್ತುತ ಲೋಕೇಶ್​ ಕನಕರಾಜ್​ ನಿರ್ದೇಶನದ ವಿಕ್ರಮ್​ ಚಿತ್ರದಲ್ಲಿ ನಟಿಸುತ್ತಿರುವ ಕಮಲ್​, ಆ್ಯಕ್ಷನ್​ ಹೀರೋ ಪಾತ್ರ ವಹಿಸುತ್ತಿದ್ದಾರೆ. ಅವರ ಜನ್ಮದಿನಕ್ಕೆ ಪುಟ್ಟ ಉಡುಗೊರೆ ಎಂದು ಹೇಳಿ ಶನಿವಾರ ಆ ಚಿತ್ರದ ಹೊಸ ಪ್ರೋಮೋ ಬಿಡುಗಡೆ ಮಾಡಲಾಗಿದೆ. ರಾಜ್​ ಕಮಲ್​ ಫಿಲಂಸ್​ ಇಂಟರ್​ನ್ಯಾಷನಲ್​ ನಿರ್ಮಿಸುತ್ತಿರುವ ಈ ಚಿತ್ರ 2022 ರಲ್ಲಿ ತೆರೆ ಕಾಣಲಿದೆ.(ಏಜೆನ್ಸೀಸ್)
ಬಾಕ್ಸ್​ ಆಫೀಸಲ್ಲಿ ‘ಸೂರ್ಯವಂಶಿ’ಗೆ ಬಂಪರ್​! ಮೊದಲನೇ ದಿನದ ಕಲೆಕ್ಷನ್​ ಎಷ್ಟು ಗೊತ್ತಾ?

“ಆ ದಿನ ಪುನೀತ್​ ಮೊದಲು ಹೋದ ಕ್ಲಿನಿಕ್​​ನ ಸಿಸಿಟಿವಿ ಫೂಟೇಜ್​ ಬಿಡುಗಡೆ ಮಾಡಿ”

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 2 =
Remember me
