ಚೆನ್ನೈ:ಏಪ್ರಿಲ್ ಆರಂಭದಿಂದ ವಿಧಾನಸಭಾ ಚುನಾವಣೆಗೆ ತಮಿಳುನಾಡು ಸಿದ್ಧವಾಗಿದೆ. ಕಾಂಗ್ರೆಸ್ ಮತ್ತು ಡಿಎಂಕೆ ಜೊತೆಗೆ ಬಿಜೆಪಿ, ಎಐಎಡಿಎಂಕೆ ಪಕ್ಷಗಳು ಮೊದಲ ಹಂತದ ಚುನಾವಣಾ ಕ್ಷೇತ್ರಗಳಿಗೆ ತಮ್ಮ ಅಭ್ಯರ್ಥಿಗಳನ್ನು ಹೆಸರಿಸಿವೆ. ಈ ನಡುವೆ ಹಿರಿಯ ತಮಿಳು ನಟ ಮತ್ತು ಮಕ್ಕಳ್ ನೀದಿ ಮಾಯಮ್ ಪಕ್ಷದ ಸ್ಥಾಪಕ ಅಧ್ಯಕ್ಷ ಕಮಲ್ ಹಾಸನ್, ಕೊಯಂಬತೂರ್ ದಕ್ಷಿಣ ಕ್ಷೇತ್ರದಿಂದ ಸ್ಪರ್ಧಿಸಲು ಇಂದು ನಾಮಪತ್ರ ಸಲ್ಲಿಸಿದ್ದಾರೆ.
ಬಿಜೆಪಿ ಮತ್ತು ಕಾಂಗ್ರೆಸ್​ ಎರಡಕ್ಕೂ ತಮ್ಮದೇ ಆದ ವೋಟ್ ಬ್ಯಾಂಕ್ ಇರುವ ತಮಿಳುನಾಡಿನ ಪಶ್ಚಿಮ ಭಾಗದಲ್ಲಿರುವ ಈ ಕ್ಷೇತ್ರವನ್ನು ಕಮಲ್ ಹಾಸನ್ ಆಯ್ದುಕೊಂಡಿರುವುದು ಅಚ್ಚರಿ ಮೂಡಿಸಿದೆ. 2019ರ ಲೋಕಸಭಾ ಚುನಾವಣೆಯಲ್ಲಿ ನಗರ ಪ್ರದೇಶದ ಮತದಾರರು ಕಮಲ್​ರ ಪಕ್ಷಕ್ಕೆ ಹೆಚ್ಚು ಒಲವು ತೋರಿಸಿದ್ದು, ಅವರು ಚೆನ್ನೈನ ಮೈಲಾಪುರ ಅಥವಾ ಆಲಂದೂರ್ ಕ್ಷೇತ್ರದಿಂದ ಸ್ಪರ್ಧಿಸುವರೆಂಬ ಊಹೆಗಳು ಸಾಗಿದ್ದವು. ಇದೀಗ ಕಮಲ್ ಹಾಸನ್ ತಮ್ಮ ಆಯ್ಕೆಯನ್ನು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ:‘ಕಾರು ಬಾಗಿಲು ಬಡಿದು ದೀದಿ ಕಾಲಿಗೆ ಗಾಯ’ : ಅಧಿಕೃತ ವರದಿ
ಕೊಯಂಬತೂರ್ ದಕ್ಷಿಣ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಬಿಜೆಪಿ ರಾಷ್ಟ್ರೀಯ ಮಹಿಳಾ ವಿಭಾಗದ ಅಧ್ಯಕ್ಷೆ ವನತಿ ಶ್ರೀನಿವಾಸನ್ ​ಇದ್ದರೆ, ಕಾಂಗ್ರೆಸ್​ನಿಂದ ತಮಿಳುನಾಡು ಕಾಂಗ್ರೆಸ್ ಕಮಿಟಿ ಅಧ್ಯಕ್ಷ ಮಯೂರ ಜಯಕುಮಾರ್ ಸ್ಪರ್ಧಿಸಲಿದ್ದಾರೆ.(ಏಜೆನ್ಸೀಸ್)
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

ತಮಿಳುನಾಡು : ಅರವಕುರಿಚಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಅಣ್ಣಾಮಲೈ ಐಪಿಎಸ್

ಸಂಸದರ ಮನೆಯ ಮುಂದೆಯೇ ಆತ್ಮಹತ್ಯೆಗೆ ಪ್ರಯತ್ನಿಸಿದ ಸೊಸೆ… ಪ್ರೇಮಕಥೆಗೆ ಸ್ಫೋಟಕ ತಿರುವು !

ಕ್ರಿಕೆಟ್ ಆಟಗಾರನಂತೆ ಮೈದಾನಕ್ಕೆ ಹೋಗುತ್ತಿದ್ದ… ಆದರೆ ಮಾಡುತ್ತಿದ್ದುದು ಬೇರೆಯೇ ಕೆಲಸ !

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − fifteen =
Remember me
