ಚೆನ್ನೈ:ನಟ ಕಮಲ್ ಹಾಸನ್ ಅವರು, ಇತ್ತೀಚೆಗಷ್ಟೇ ಕೆಲಸ ಕಳೆದುಕೊಂಡಿದ್ದ ಮಹಿಳಾ ಬಸ್ ಡ್ರೈವರ್‌ಗೆ ಕಾರ್ ಗಿಫ್ಟ್ ನೀಡುವ ಮೂಲಕ ಸುದ್ದಿಯಾಗಿದ್ದರು. ಇದೀಗ ನಿರ್ದೇಶಕ ಶಂಕರ್​​ಗೆ ದುಬಾರಿ ವಾಚ್ ಗಿಫ್ಟ್ ಕೊಟ್ಟಿದ್ದಾರೆ.
ಖ್ಯಾತ ನಿರ್ದೇಶಕ ಶಂಕರ್‌ಗೆ ದುಬಾರಿ ವಾಚ್ ಗಿಫ್ಟ್ ಆಗಿ ನೀಡಿದ್ದಾರೆ. ಸಾಮಾನ್ಯವಾಗಿ ಸಿನಿಮಾ ಸೂಪರ್ ಹಿಟ್ ಆಗಿದ್ದರೆ ನಿರ್ಮಾಪಕರು, ಹೀರೋಗಳು ನಿರ್ದೇಶಕರಿಗೆ ಒಂದಿಷ್ಟು ದುಬಾರಿ ಗಿಫ್ಟ್ ಕೊಡುತ್ತಾರೆ. ಅವರು ಹೆಚ್ಚಾಗಿ ಕಾರುಗಳು ಮತ್ತು ಕೈಗಡಿಯಾರಗಳನ್ನು ನೀಡುತ್ತಾರೆ. ಇತ್ತೀಚೆಗಷ್ಟೇ ಕಮಲ್ ಹಾಸನ್ ಚಿತ್ರ ಬಿಡುಗಡೆಗೂ ಮುನ್ನ ನಿರ್ದೇಶಕ ಶಂಕರ್​ಗೆ ದುಬಾರಿ ಗಿಫ್ಟ್ ಒಂದನ್ನು ನೀಡಿದ್ದರು.
ಕಮಲ್ ಹಾಸನ್ ಸದ್ಯ ಇಂಡಿಯನ್ -2 ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಶಂಕರ್ ಸಾರಥ್ಯದಲ್ಲಿ ಸಿನಿಮಾ ಮೂಡಿಬರುತ್ತಿದೆ.ಸದ್ಯ ಯಶಸ್ವಿಯಾಗಿ ಚಿತ್ರೀಕರಣ ಮುಗಿಯುತ್ತಿರುವ ಬೆನ್ನಲ್ಲೇ ಕಮಲ್ ಹಾಸನ್ ದುಬಾರಿ ವಾಚ್ ಉಡುಗೊರೆಯಾಗಿ ನೀಡಿದ್ದಾರೆ.
ಕಮಲ್ ಈ ಉಡುಗೊರೆ ಕೊಡಲು ಕಾರಣ:ಇಂಡಿಯನ್ -2 ಸಿನಿಮಾ. ಚಿತ್ರದ ಕೆಲವು ದೃಶ್ಯಗಳನ್ನು ಇಂಪ್ರೆಸ್ ಆದ ಕಮಲ್ ಈ ಗಿಫ್ಟ್ ನೀಡಿದ್ದಾರೆ ಎನ್ನಲಾಗಿದೆ.
‘இந்தியன் 2’ படத்தின் பிரதான காட்சிகளை இன்று பார்த்தேன். என் உளமார்ந்த வாழ்த்துகள்@shankarshanmugh
இதுவே உங்கள் உச்சமாக இருக்கக் கூடாது என்பதும் என் அவா. காரணம், இதுதான் உங்கள் கலை வாழ்வின் மிக உயரமான நிலை. இதையே உச்சமாகக் கொள்ளாமல் திமிறி எழுங்கள். பல புதிய உயரங்கள் தேடி.…pic.twitter.com/Mo6vDq7s8B
— Kamal Haasan (@ikamalhaasan)June 28, 2023

ಶಂಕರ್‌ ಕೈಗೆ ಸ್ವತಃ ಕಮಲ್ ಹಾಸನ್ ವಾಚ್ ಕಟ್ಟುವ ಫೋಟೋವನ್ನು ಶೇರ್ ಮಾಡಿ ಬಹಿರಂಗ ಪಡಿಸಿದ್ದಾರೆ. ‘ನಾನು ಇಂದು ಇಂಡಿಯನ್ 2 ಚಿತ್ರದ ಪ್ರಮುಖ ದೃಶ್ಯಗಳನ್ನು ನೋಡಿದೆ. ಶಂಕರ್‌ಗೆ ನನ್ನ ಶುಭಾಶಯಗಳು. ಇದು ನಿಮ್ಮ ದೊಡ್ಡ ಸಿನಿಮಾ ಆಗಬಹುದು ಎಂಬುದು ನನ್ನ ಸಲಹೆ. ಏಕೆಂದರೆ ಇದು ನಿಮ್ಮ ಕಲಾ ಜೀವನದ ಅತ್ಯುನ್ನತ ಹಂತವಾಗಿದೆ. ಹೆಮ್ಮೆಯಿಂದಿರಿ. ಅನೇಕ ಹೊಸ ಎತ್ತರಗಳ ಹುಡುಕಾಟದಲ್ಲಿರಿ’ ಎಂದು ತಮಿಳಿನಲ್ಲಿ ಬರೆದುಕೊಂಡಿದ್ದಾರೆ.
ಇಂಡಿಯಾ -2 ಕೂಡ ಭಾರಿ ನಿರಿಕ್ಷೆ ಮೂಡಿಸಿದ ಸಿನಿಮಾಗಳಲ್ಲಿ ಒಂದಾಗಿದೆ. ‘ಇಂಡಿಯನ್ 2’ ಬಿಡುಗಡೆ ದಿನಾಂಕ ಇನ್ನೂ ಘೋಷಿಸಲಾಗಿಲ್ಲ. ಆದರೆ ಈ ಸಿನಿಮಾ 2024 ರ ಪೊಂಗಲ್‌ಗೆ ಬಿಡುಗಡೆಯಾಗುವ ಸಾಧ್ಯತೆ ಇದೆ.
ಕೊಯಮತ್ತೂರಿನ ಮೊದಲ ಮಹಿಳಾ ಬಸ್ ಚಾಲಕಿ ಶರ್ಮಿಳಾ ಅವರಿಗೆ ನಟ ಕಮಲ್ ಹಾಸನ್ ಸೋಮವಾರ ಹೊಸ ಕಾರು ಉಡುಗೊರೆಯಾಗಿ ನೀಡಿದ್ದಾರೆ. ಕಮಲ್ ಹಾಸನ್ ಅವರು ಶರ್ಮಿಳಾ ಅವರನ್ನು ಅವರ ಕುಟುಂಬದೊಂದಿಗೆ ಸೋಮವಾರ ಬೆಳಿಗ್ಗೆ ಅಲ್ವಾರ್‌ಪೇಟ್‌ನಲ್ಲಿರುವ ಅವರ ಚೆನ್ನೈ ಕಚೇರಿಗೆ ಆಹ್ವಾನಿಸಿ, ಹೊಸ ಕಾರು ಖರೀದಿಗೆ ಮತ್ತು ಉದ್ಯಮಿಯಾಗಿ ಅವರ ಪ್ರಯಾಣವನ್ನು ಮುಂದುವರಿಸಲು ಚೆಕ್ ಅನ್ನು ಹಸ್ತಾಂತರಿಸಿದರು.
“ವಿಶ್ವ ಕನ್ನಡಿಗ 2023 ಪ್ರಶಸ್ತಿ” ಸ್ವೀಕರಿಸಿದ ಡಿವೈನ್​ ಸ್ಟಾರ್​ ರಿಷಬ್​​ ಶೆಟ್ಟಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen + 16 =
Remember me
