ನವದೆಹಲಿ:ನಿನ್ನೆ (ಸೆ.19) ಕೇಂದ್ರ ಸರ್ಕಾರ ಮಂಡಿಸಿದ ಮಹಿಳಾ ಮೀಸಲಾತಿ ಮಸೂದೆ​​ಗೆ ಇಂಡಿಯನ್​ ಸೂಪರ್​ಸ್ಟಾರ್​ ಮತ್ತು ರಾಜಕಾರಣಿ ಕಮಲ್​ ಹಾಸನ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ​
ಇಂದು ಬೆಳಗ್ಗೆ ಟ್ವೀಟ್​​ ಮಾಡಿರುವ ಕಮಲ್​ ಹಾಸನ್​,​ ಮೆಚ್ಚುಗೆಯ ಜತೆಗೆ ಸರ್ಕಾರಕ್ಕೆ ಕೆಲವು ಸಲಹೆಗಳನ್ನು ಸಹ ನೀಡಿದ್ದಾರೆ. ಈ ಮಸೂದೆಯನ್ನು ರಾಜ್ಯ ವಿಧಾನಸಭೆ ಹಾಗೂ ರಾಜ್ಯ ವಿಧಾನಪರಿಷತ್ತಿಗೂ ವಿಸ್ತರಿಸಬೇಕು ಎಂದಿದ್ದಾರೆ. ಮುಂದಿನ ಜನಗಣತಿಯ ನಂತರ ಮಸೂದೆ ಜಾರಿ ಬರುವುದಕ್ಕೆ ಅಸಮಾಧಾನ ಹೊರಹಾಕಿದ್ದು, ಇದರಿಂದ ವಿಳಂಬವಾಗುತ್ತದೆ ಎಂದಿದ್ದಾರೆ.
ಗಣರಾಜ್ಯದ ಇತಿಹಾಸದಲ್ಲಿ ಇದೊಂದು ಹೆಗ್ಗುರುತು ದಿನವಾಗಿದೆ. ಅಲ್ಪಸಂಖ್ಯಾತ ಭಾರತದ ಮಹಿಳೆಯರ ವಿರುದ್ಧದ ದೀರ್ಘಕಾಲದ ಅನ್ಯಾಯ ಸರಿಪಡಿಸಲಾಗಿದೆ ಎಂದು ಕೊಂಡಾಡಿದ್ದಾರೆ.
ಇದನ್ನೂ ಓದಿ:ಕೆನಡಾ-ಭಾರತ ರಾಜತಾಂತ್ರಿಕ ಸಂಬಂಧದಲ್ಲಿ ಬಿರುಕು: ಪ್ರಚೋದನೆಗೆ ಯತ್ನಿಸುತ್ತಿಲ್ಲ ಎಂದ ಜಸ್ಟಿನ್ ಟ್ರುಡೊ
ನಮ್ಮ ಗಣರಾಜ್ಯದ ಇತಿಹಾಸದಲ್ಲಿ ಒಂದು ಹೆಗ್ಗುರುತು ದಿನವಾಗಿದೆ. ನಮ್ಮ ಪ್ರಜಾಪ್ರಭುತ್ವದ ಸ್ಥಾನವು ಅದರ ಹೊಸ ಮನೆ(ಸಂಸತ್ತು)ಗೆ ಸ್ಥಳಾಂತರಗೊಂಡಿತು. ಈ ಹೊಸ ಸಂಸತ್ತಿನಲ್ಲಿ ಮಂಡಿಸಲಾದ ಮೊದಲ ಮಸೂದೆಯು ನಮ್ಮ ರಾಷ್ಟ್ರದ ಅತಿ ದೊಡ್ಡ ಅಲ್ಪಸಂಖ್ಯಾತರಾದ ಭಾರತದ ಮಹಿಳೆಯರ ವಿರುದ್ಧದ ದೀರ್ಘಕಾಲದ ಅನ್ಯಾಯವನ್ನು ಸರಿಪಡಿಸಿದೆ ಎಂದು ನಾನು ಸಂತೋಷಪಡುತ್ತೇನೆ. ನಿನ್ನೆ ಮಂಡಿಸಲಾದ ಮಹಿಳಾ ಮೀಸಲಾತಿ ಮಸೂದೆಯನ್ನು ನಾನು ಹೃತ್ಪೂರ್ವಕವಾಗಿ ಶ್ಲಾಘಿಸುತ್ತೇನೆ. ಲಿಂಗ ಸಮಾನತೆಯನ್ನು ಖಾತ್ರಿಪಡಿಸುವ ರಾಷ್ಟ್ರಗಳು ಯಾವಾಗಲೂ ಏಳಿಗೆ ಹೊಂದುತ್ತವೆ.
ಮಸೂದೆಯ ಮೇಲಿನ ಸಂಸತ್ತಿನ ಚರ್ಚೆಯ ಸಮಯದಲ್ಲಿ, ಈ ಕೆಳಗಿನ ಕಾಳಜಿಗಳನ್ನು ಸರಿಪಡಿಸಲು ನಾನು ಎಲ್ಲ ಪಕ್ಷಗಳಿಗೆ ಕರೆ ನೀಡುತ್ತೇನೆ. ಮೊದಲನೆಯದಾಗಿ ಮುಂದಿನ ಜನಗಣತಿ ಮತ್ತು ಡಿಲಿಮಿಟೇಶನ್ ನಂತರವೇ ಮಸೂದೆ ಜಾರಿಗೆ ಬರುತ್ತದೆ. ಇವೆರಡೂ ಈ ಹಿಂದೆಯೇ ವಿಳಂಬವಾಗಿವೆ. ಹೀಗಾಗಿ ಇಂತಹ ವಿಳಂಬ ಸಮಯವೂ ಮಹತ್ವದ ನಿರ್ಧಾರದ ಬಗ್ಗೆ ಕೇವಲ ಮಾತಿಗೆ ಸೀಮಿತವಾಗುವಂತೆ ಮಾಡುವ ಸಾಧ್ಯತೆ ಇದೆ. ಆದ್ದರಿಂದ ಇದನ್ನು ತೆಗೆದುಹಾಕಬೇಕು. ಎರಡನೆಯದಾಗಿ ಮಸೂದೆಯು ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಿಗೆ ಮಾತ್ರ ಅನ್ವಯಿಸುತ್ತದೆ ಮತ್ತು ರಾಜ್ಯಸಭೆ ಮತ್ತು ರಾಜ್ಯ ವಿಧಾನ ಪರಿಷತ್ತುಗಳಿಗೆ ವಿಸ್ತರಿಸಬೇಕು. ಯಾವುದೇ ದೃಢೀಕರಣದ ನೆರವು ಇಲ್ಲದೆ ಶಾಸಕಾಂಗ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಅನುಪಾತದ ಪ್ರಾತಿನಿಧ್ಯವನ್ನು ನೀಡುವ ದಿನವನ್ನು ನಾನು ಎದುರು ನೋಡುತ್ತಿದ್ದೇನೆ ಎಂದು ಕಮಲ್​ ಹಾಸನ್​ ಹೇಳಿದ್ದಾರೆ.(ಏಜೆನ್ಸೀಸ್​)
A landmark day in the history of our Republic, as the seat of our democracy moved into its new home. I’m delighted that the first Bill tabled in this new Parliament corrects a longstanding injustice perpetrated against the largest minority in our nation, the women of India. I…
— Kamal Haasan (@ikamalhaasan)September 20, 2023

ಎಚ್​.ಡಿ. ಕೋಟೆಯಲ್ಲಿ ಬಾಲಕನನ್ನು ಕೊಂದು ತಿಂದು ಆತಂಕ ಸೃಷ್ಟಿಸಿದ್ದ ಹುಲಿ ಕೊನೆಗೂ ಸೆರೆ

EMI ಪಾವತಿಸಲು ಒಪ್ಪದಿದ್ದಕ್ಕೆ ಪ್ರಿಯಕರನ ಮನೆಯಲ್ಲೇ ಸಾವಿಗೆ ಶರಣಾದ ಟೆಕ್ಕಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × five =
Remember me
