ಮುಂಬೈ:ನಟ ಕಮಲ್ ಹಾಸನ್ ಅವರ ಕಿರಿಯ ಪುತ್ರಿ ಅಕ್ಷರಾ ಹಾಸನ್ ಮುಂಬೈನ ಖಾರ್ ನಲ್ಲಿ ಐಷಾರಾಮಿ ಅಪಾರ್ಟ್ ಮೆಂಟ್ ಖರೀದಿಸಿರುವುದು ಭಾರೀ ಚರ್ಚೆಗೆ ಗ್ರಾಸವಾಗಿದೆ.  ಅಪಾರ್ಟ್‌ಮೆಂಟ್​​ಗಾಗಿ ರೂ.15.75 ಕೋಟಿ ಖರ್ಚು ಮಾಡಿದ್ದಾರೆ ಎನ್ನಲಾಗಿದೆ.
ಕಮಲ್ ಹಾಸನ್ ಅವರ ಕಿರಿಯ ಪುತ್ರಿ ಅಕ್ಷರಾ ಹಾಸನ್ ಮುಂಬೈನಲ್ಲಿ ಸ್ವಂತ ಮನೆ ಖರೀದಿಸಿರುವುದು ಇದೀಗ ಹಾಟ್ ಟಾಪಿಕ್ ಆಗಿದೆ. ತನ್ನ ತಾಯಿ ಸಾರಿಕಾ ಜೊತೆ ವಾಸಿಸುತ್ತಿರುವ ಅಕ್ಷರಾ ಮುಂಬೈನ ಖಾರ್ ಪ್ರದೇಶದಲ್ಲಿ 15 ಕೋಟಿ ರೂಪಾಯಿಗೂ ಹೆಚ್ಚು ಖರ್ಚು ಮಾಡಿ ಅಪಾರ್ಟ್‌ಮೆಂಟ್ ಖರೀದಿಸಿದ್ದಾರೆ ಎಂಬ ವರದಿಗಳಿವೆ.
ಮನೆಯ ವಿಶೇಷತೆ:ಖಾರ್ ಸ್ಟ್ರೀಟ್ ನ ನಂ. 16ರಲ್ಲಿ 15 ಅಂತಸ್ತಿನ ಕಟ್ಟಡದಲ್ಲಿ ಅಕ್ಷರ 13ನೇ ಮಹಡಿಯಲ್ಲಿ 2,245 ಚದರ ಮೀಟರ್ ವಿಸ್ತೀರ್ಣದಲ್ಲಿ ಫ್ಲಾಟ್ ಸಂಖ್ಯೆ 1303 ಅನ್ನು ಖರೀದಿಸಿದ್ದಾರೆ. ಫ್ಲಾಟ್ ನೋಂದಣಿ ದಾಖಲೆಗಳನ್ನು ಆಧರಿಸಿ, ಮೂರು ಕಾರುಗಳಿಗೆ ಸ್ಥಳಾವಕಾಶವಿದೆ. ಅಕ್ಷರ ಹಾಸನ್ ಈ ಫ್ಲಾಟ್ ಅನ್ನು ಬಾಂದ್ರಾದ ದಂಪತಿಯಿಂದ ಖರೀದಿಸಿದ್ದಾರೆ. ಸೆಪ್ಟೆಂಬರ್ 27ರಂದು ನೋಂದಾಯಿಸಲಾಗಿದೆ. ಈ ಪ್ಲ್ಯಾಟ್​​ ಏಕ್ತಾ ವರ್ವ್ ಏಕ್ತಾ ವರ್ಲ್ಡ್ ಗ್ರೂಪ್‌ನ ಬಾಟಿಕ್ ಐಷಾರಾಮಿ ಯೋಜನೆಯಾಗಿದೆ. 15 ಅಂತಸ್ತಿನ ಐಷಾರಾಮಿ ಟವರ್ 18 ಅಪಾರ್ಟ್ ಮೆಂಟ್ ಗಳನ್ನು ಹೊಂದಿದೆ.
ಕಮಲ್ ಹಾಸನ್ ಪತ್ನಿ 20 ವರ್ಷಗಳ ಹಿಂದೆ ಬೇರ್ಪಟ್ಟಿದ್ದರು. ಅಕ್ಷರಾ ಹಾಸನ್ ತನ್ನ ತಾಯಿ ಸಾರಿಕಾ ಜೊತೆ ಮುಂಬೈನಲ್ಲಿ ವಾಸಿಸುತ್ತಿದ್ದಾರೆ. ಶೃತಿ ಹಾಸನ್ ಮತ್ತು ಅಕ್ಷರಾ ಹಾಸನ್ ಆಗಾಗ ತಂದೆ ಕಮಲ್ ಅವರನ್ನು ಭೇಟಿಯಾಗುತ್ತಾರೆ.
ಅಮಿತಾಬ್ ಬಚ್ಚನ್ ಅಭಿನಯದ ‘ಶಮಿತಾಬ್’ ಚಿತ್ರದ ಮೂಲಕ ಅಕ್ಷರಾ ಹಾಸನ್ ಚಿತ್ರರಂಗ ಪ್ರವೇಶಿಸಿದರು. ತಮಿಳಿನ ‘ವಿವೇಗಂ’ ಚಿತ್ರದ ಮೂಲಕ ಒಳ್ಳೆಯ ಹೆಸರು ಪಡೆದರು. ಕಳೆದ ವರ್ಷ ತಮಿಳಿನ  ಚಿತ್ರದಲ್ಲಿ ಕಾಣಿಸಿಕೊಂಡಿದ್ದ ಅಕ್ಷರಾ ಮತ್ತೊಂದು ತಮಿಳು ಸಿನಿಮಾ ಬಿಡುಗಡೆಗೆ ಸಜ್ಜಾಗಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 + 19 =
Remember me
