ನವದೆಹಲಿ:ಚುನಾವಣೆ ಎಂದಮೇಲೆ ವಾಗ್ದಾಳಿ, ಟೀಕೆ-ಪ್ರತಿಟೀಕೆ, ಆರೋಪ-ಪ್ರತ್ಯಾರೋಪಗಳು ಸಾಮಾನ್ಯ. ಆದರೆ ಇಂಥದ್ದರ ಮಧ್ಯೆ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಕಮಲ್​ನಾಥ್ ಅವರ ಸ್ಟಾರ್ ಕ್ಯಾಂಪೇನರ್ ಪಟ್ಟ ‘ಮಾಫಿಯಾ’ಗೆ ಬಲಿಯಾಗಿದೆ.
ಹಾಗಂತ ಅದು ಯಾವ ಮಾಫಿಯಾ ಎಂದು ಅಚ್ಚರಿ ಆಗುವುದು ಸಹಜ. ಈಗ ಎಲ್ಲೆಡೆ ಡ್ರಗ್ಸ್​ ಮಾಫಿಯಾ ಸುದ್ದಿಯಲ್ಲಿರುವುದರಿಂದ ಡ್ರಗ್ಸ್​ ಮಾಫಿಯಾದಲ್ಲಿ ಅವರ ಹೆಸರೇನಾದರೂ ಕೇಳಿ ಬಂತಾ? ಎಂಬ ಪ್ರಶ್ನೆಯೊಂದು ಮೂಡಿಹೋದರೂ ಅಚ್ಚರಿಯೇನಲ್ಲ. ಆದರೆ ಅವರ ಸ್ಟಾರ್​ಗಿರಿಯನ್ನು ಕಿತ್ತುಕೊಂಡ ಈ ಮಾಫಿಯಾನೇ ಬೇರೆ.
ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್​ ಚೌಹಾಣ್ ಅವರ ವಿರುದ್ಧ ಕಮಲ್​ನಾಥ್​ ಮಾಫಿಯಾ ಎಂಬ ಪದ ಬಳಸಿದ್ದಕ್ಕೆ ಅವರ ಸ್ಟಾರ್ ಪ್ರಚಾರಕ ಪಟ್ಟ ತಪ್ಪಿಹೋಗಿದೆ. ಚೌಹಾಣ್ ವಿರುದ್ಧ ಮಾಫಿಯಾ ಎಂಬ ಪದ ಬಳಸಿದ್ದಕ್ಕಾಗಿ ಭಾರತೀಯ ಚುನಾವಣಾ ಆಯೋಗ ಮಧ್ಯಪ್ರದೇಶದ ಉಪ ಚುನಾವಣಾ ಹಿನ್ನೆಲೆಯಲ್ಲಿ ಕಾಂಗ್ರೆಸ್​ ಸ್ಟಾರ್ ಪ್ರಚಾರಕ್ ಪಟ್ಟಿಯಲ್ಲಿದ್ದ ಕಮಲ್​ನಾಥ್ ಹೆಸರನ್ನು ರದ್ದು ಪಡಿಸಿದೆ.
‘ಕಲಬೆರಕೆ ಮಾಫಿಯಾನೇ ನಿಮ್ಮ ದೇವರು, ಅದರ ಮೂಲಕ ನೀವು ಮಧ್ಯಪ್ರದೇಶ ಗುರುತಿಸಿಕೊಳ್ಳುವಂತೆ ಮಾಡಿದ್ದೀರಿ’ ಎಂದು ಅ.13ರಂದು ಚೌಹಾಣ್​ ವಿರುದ್ಧ ಕಮಲ್​ನಾಥ್ ಕಮೆಂಟ್ ಮಾಡಿದ್ದರು. ಈ ಹಿಂದೆ ಬಿಜೆಪಿ ನಾಯಕಿ ಇಮರ್ತಿ ದೇವಿ ಅವರನ್ನು ಐಟಂ ಎಂದು ಕಮಲ್​ನಾಥ್ ಕರೆದಿದ್ದು ವಿವಾದವಾಗಿತ್ತು. ಮಧ್ಯಪ್ರದೇಶದಲ್ಲಿನ 25 ಶಾಸಕರ ರಾಜೀನಾಮೆ ಹಾಗೂ ಮೂವರ ಮರಣದಿಂದಾಗಿ 28 ಸ್ಥಾನಗಳಿಗೆ ಉಪ ಚುನಾವಣೆ ನಡೆಯಲಿದೆ. (ಏಜೆನ್ಸೀಸ್​)
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:2 × three =
Remember me
