ನವದೆಹಲಿ:ಕಾಂಗ್ರೆಸ್ ಪಕ್ಷದ ಅಧ್ಯಕ್ಷರು ಯಾರಾಗುತ್ತಾರೆ ಎನ್ನುವ ಕುತೂಹಲ ದೇಶದ ಜನರಿಗೆ ಇದ್ದೇ ಇದೆ. ಅನೇಕರು ರಾಹುಲ್ ಗಾಂಧಿ ಅಧ್ಯಕ್ಷರಾಗಬೇಕು ಎನ್ನುತ್ತಿದ್ದರೆ ಇನ್ನೂ ಕೆಲವರು ರಾಜೀವ್ ಗಾಂಧಿ ಕುಟುಂಬದ ಹೊರೆತಾಗಿ ಬೇರೆಯವರಿಗೆ ಸ್ಥಾನ ಸಿಗಬೇಕು ಎಂದು ಹೇಳಲಾರಂಭಿಸಿದ್ದಾರೆ. ಈ ಮಧ್ಯೆ ಕಾಂಗ್ರೆಸ್ ಮುಖಂಡ ಹಾಗೂ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಕಮಲ್ ನಾಥ್ ಅವರು ಕಾಂಗ್ರೆಸ್​ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿದ್ದು, ಕುತೂಹಲ ಕೆರಳಿಸಿದೆ.
ಕಮಲ್​ ನಾಥದ್ ಅವರು ಗುರುವಾರ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿದ್ದಾರೆ. ಪಕ್ಷದಲ್ಲಿನ ಅನೇಕ ಬದಲಾವಣೆಗಳ ಕುರಿತಾಗಿ ಅವರೊಂದಿಗೆ ಚರ್ಚೆ ಆಗಿರುವುದಾಗಿ ಮೂಲಗಳು ತಿಳಿಸಿವೆ. ಪಕ್ಷದಲ್ಲಿ ಹಿರಿಯ ಸ್ಥಾನದಲ್ಲಿರುವ ಅವರಿಗೆ ಅಧ್ಯಕ್ಷ ಸ್ಥಾನ ಸಿಕ್ಕರೂ ಸಿಗಬಹುದು ಎಂದು ಅನೇಕರು ಮಾತನಾಡಿಕೊಳ್ಳಲಾರಂಭಿಸಿದ್ದಾರೆ. ಮಳೆಗಾಲದ ಅಧಿವೇಶನ ಮುಗಿದ ನಂತರ ಪಕ್ಷದ ಅಧ್ಯಕ್ಷರ ನೇಮಕವಾಗುವ ಸಾಧ್ಯತೆಯಿದೆ ಎನ್ನಲಾಗಿದೆ.
ಕಮಲ್​ನಾಥ್ ಅವರು 1980ರಲ್ಲಿ ಮೊದಲ ಬಾರಿಗೆ ಲೋಕಸಭೆಗೆ ಆಯ್ಕೆಯಾದವರು. ಗಾಂಧಿ ಕುಟುಂಬಕ್ಕೆ ಹತ್ತಿರವಾಗಿರುವ ಅವರು, ಈವರೆಗೆ ಒಂಬತ್ತು ಬಾರಿ ಸಂಸದರಾಗಿ ಚುನಾಯಿತರಾಗಿದ್ದಾರೆ. ಕೇಂದ್ರ ಸಚಿವರಾಗಿಯೂ ಸೇವೆ ಸಲ್ಲಿಸಿದ್ದಾರೆ.
ಕಾಂಗ್ರೆಸ್ ಪಕ್ಷವು ಕೆಲವು ಸಮಯದಿಂದ ನಾಯಕತ್ವದ ಬದಲಾವಣೆ ಮಾಡುವ ಮಾತನ್ನು ಆಡುತ್ತಿದೆ. ಮೇ ತಿಂಗಳಲ್ಲಿ ಕೋವಿಡ್ -19 ಸಾಂಕ್ರಾಮಿಕ ರೋಗವನ್ನು ಉಲ್ಲೇಖಿಸಿ ಕಾಂಗ್ರೆಸ್ ಮೂರನೇ ಬಾರಿಗೆ ಪಕ್ಷದ ಅಧ್ಯಕ್ಷರ ಚುನಾವಣೆಯನ್ನು ಮುಂದೂಡಲಾಗಿದೆ. (ಏಜೆನ್ಸೀಸ್)
ಈ ನೋಟು ನಿಮ್ಮ ಬಳಿ ಇದ್ದರೆ ನಿಮಗೂ ಸಿಗಬಹುದು 3 ಲಕ್ಷ ರೂಪಾಯಿ!

ವೇದಿಕೆಯಲ್ಲಿ ವಧು ಪಕ್ಕವಿರುವಾಗಲೇ ನಿದ್ರೆಗೆ ಜಾರಿದ ವರ! ಈ ವಿಡಿಯೋ ನೋಡಿದರೆ ನೀವೂ ನಗುತ್ತೀರ..

ರೈಲ್ವೆ ನಿಲ್ದಾಣದ ಮೇಲೇ ಫೈವ್​ ಸ್ಟಾರ್ ಹೋಟೆಲ್! ವಿನೂತನ ನಿರ್ಮಾಣಕ್ಕೆ ದೇಶದ ಮೆಚ್ಚುಗೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 1 =
Remember me
