ವಾಷಿಂಗ್ಟನ್:ಅಮೆರಿಕದ ಉಪಾಧ್ಯಕ್ಷ ಹುದ್ದೆಯ ಅಭ್ಯರ್ಥಿಯಾಗಿ ಆಯ್ಕೆಯಾಗಿರುವ ಭಾರತ ಮೂಲದ ಕಮಲಾ ಹ್ಯಾರಿಸ್, ತಮ್ಮ ತಾಯಿಯೊಂದಿಗೆ ಚೆನ್ನೈ ಬೀಚ್​ನಲ್ಲಿ ನಡೆದಾಡಿದ ದಿನಗಳನ್ನು ನೆನಪಿಸಿಕೊಂಡಿದ್ದಾರೆ.
ದಕ್ಷಿಣ ಭಾರತದ ಜನಪ್ರಿಯ ತಿನಿಸು ಇಡ್ಲಿಯ ಸ್ವಾದವಿನ್ನೂ ಅವರ ಸ್ಮತಿಪಟಲದಿಂದ ಮರೆಯಾಗಿಲ್ಲ. ‘ಬಿಡೆನ್​ಗಾಗಿ ದಕ್ಷಿಣ ಏಷ್ಯನ್ನರು’ ಕಾರ್ಯಕ್ರಮದಲ್ಲಿ ಮಾತನಾಡಿದ ಕಮಲಾ ತಮ್ಮ ತಾಯಿ ಶ್ಯಾಮಲಾ, ಸೋದರಿ ಮಾಯಾ ಹಾಗೂ ತಮ್ಮನ್ನು ಚೆನ್ನೈನ ಸಾಗರ ತೀರದಲ್ಲಿ ವಾಯು ವಿಹಾರಕ್ಕೆ ಕರೆದುಕೊಂಡು ಹೋಗುತ್ತಿದ್ದರು. ತಾತನೂ ಜೊತೆಗಿರುತ್ತಿದ್ದರು ಎಂದು ಹೇಳಿದರು. ಇಡ್ಲಿ ಕುರಿತು ಪ್ರೀತಿ ಬೆಳೆಸಿಕೊಳ್ಳಲು ತಾಯಿ ಶ್ಯಾಮಲಾ ಹೇಳಿಕೊಟ್ಟಿದ್ದರು ಎಂದು ವಿವರಿಸಿದರು.
ತಾತ ಪಿ.ವಿ. ಗೋಪಾಲನ್ ಕಲಿಸಿದ ಪಾಠಗಳೇ ತಾನು ಇಂದಿನ ಸ್ಥಿತಿಯಲ್ಲಿರಲು ಕಾರಣ ಹಾಗೂ ಪ್ರೇರಣೆ ಎಂದು ಕಮಲಾ ನುಡಿದರು. 19 ವರ್ಷದವರಿದ್ದಾಗ ಅಮೆರಿಕಕ್ಕೆ ಆಗಮಿಸಿದ್ದ ತಮಳುನಾಡಿನ ಶ್ಯಾಮಲಾ, ಕ್ಯಾನ್ಸರ್ ಸಂಶೋಧಕಿ ಹಾಗೂ ಹೋರಾಟಗಾರ್ತಿಯಾಗಿ ರೂಪುಗೊಂಡಿದ್ದರು.
ಭಾರತ ಪ್ರಮುಖ ಪಾಲುದಾರ:ಜೋ ಬಿಡೆನ್ ಅಮೆರಿಕ ಅಧ್ಯಕ್ಷರಾಗಿ ಆಯ್ಕೆಯಾದರೆ ಅವರ ಆಡಳಿತದಲ್ಲಿ ಭಾರತಕ್ಕೆ ಒಂದು ಪ್ರಮುಖ ಪಾತ್ರ ಸಿಗಲಿದೆ. ವಿಶ್ವಸಂಸ್ಥೆ ಭದ್ರತಾ ಮಂಡಳಿಯಂಥ ಜಾಗತಿಕ ವೇದಿಕೆಗಳಲ್ಲಿ ಭಾರತ ಮಹತ್ವದ ಪಾತ್ರ ವಹಿಸಬೇಕೆಂದು ಬಿಡೆನ್ ಆಡಳಿತ ಪ್ರತಿಪಾದಿಸಲಿದೆ ಎಂದು ಬಿಡೆನ್ ಪ್ರಚಾರ ಕಾರ್ಯದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ದೀಪಾವಳಿ ವೇಳೆಗೆ 70 ಸಾವಿರ ರೂ.ಗೆ ತಲುಪುತ್ತೆ ಚಿನ್ನದ ಬೆಲೆ; ಬೇಡಿಕೆ ಕುಸಿದಿದ್ದರೂ ಆಗಸಕ್ಕೇಕೆ ಮುಖ ಮಾಡಿದೆ ಹಳದಿ ಲೋಹ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × two =
Remember me
