ಚೆನ್ನೈ: ತಮಿಳುನಾಡಿನಲ್ಲಿ 2021ರಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಕಮಲ ಹಾಸನ್​ ಅವರ ಪಕ್ಷವೂ ಸ್ಪರ್ಧಿಸಲಿದೆ. ಮಕ್ಕಳ ನೀದಿಮಯಂ ಪಕ್ಷದ ಸಂಸ್ಥಾಪಕರಾಗಿರುವ ಅವರು ರಜನಿಕಾಂತ್​ ಜತೆ ಮೈತ್ರಿ ಮಾಡಿಕೊಂಡು ಚುನಾವಣೆಯಲ್ಲಿ ಸ್ಪರ್ಧಿಸಬಹುದು ಎನ್ನುವ ಅನುಮಾನಗಳು ಹುಟ್ಟಿಕೊಂಡಿದ್ದವು. ಆದರೆ ರಜನಿಕಾಂತ್​ ಜತೆ ಮೈತ್ರಿ ಮಾಡಿಕೊಳ್ಳುವುದು ಸಾಧ್ಯವಿಲ್ಲ ಎನ್ನುವ ಮಾತುಗಳೂ ಇದೀಗ ಕೇಳಿಬರಲಾರಂಭಿಸಿವೆ.
ಇದನ್ನೂ ಓದಿ:ಈ ವರ್ಷ ಯೂಟ್ಯೂಬ್​ನಲ್ಲಿ ಅತಿ ಹೆಚ್ಚು ವೀಕ್ಷಣೆಯಾದ ವಿಡಿಯೋ ಯಾವುದು ಗೊತ್ತಾ?
ಭಾನುವಾರ ಮಧುರೈನಲ್ಲಿ ಪಕ್ಷದ ಅಭಿಯಾನಕ್ಕೆ ಚಾಲನೆ ನೀಡಿದ ಅವರು ಮಾಧ್ಯಮ ಮಿತ್ರರೊಂದಿಗೆ ಮಾತನಾಡಿದ ಅವರು, ಹೊಸದೊಂದು ಮೈತ್ರಿ ಮಾಡಿಕೊಳ್ಳುವ ಬಗ್ಗೆ ಸೂಚನೆ ನೀಡಿದ್ದಾರೆ. ಮೈತ್ರಿಗಳು ಮುರಿಯುತ್ತವೆ ಹಾಗೂ ಹೊಸ ಮೈತ್ರಿಗಳು ಆಗುತ್ತವೆ ಎಂದು ಹೇಳುವ ಮೂಲಕ ಕುತೂಹಲ ಮೂಡಿಸಿದ್ದಾರೆ. ಇದೀಗ ಕಮಲ ಹಾಸನ್​ ಅವರ ಹೇಳಿಕೆಯ ಬಗ್ಗೆ ಅನೇಕ ಚರ್ಚೆಗಳು ಆರಂಭವಾಗಿವೆ. ಎಐಎಂಐಎಂ ಪಕ್ಷದ ಮುಖ್ಯಸ್ಥ ಓವೈಸಿ ಅವರು ಕಮಲ ಹಾಸನ್​ ಜತೆ ಮೈತ್ರಿ ಮಾಡಿಕೊಳ್ಳಲಿದ್ದು, 25 ಸ್ಥಾನದಲ್ಲಿ ಸ್ಪರ್ಧಿಸಲಿದ್ದಾರೆ ಎನ್ನುವ ಮಾತುಗಳೂ ಕೇಳಿಬಂದಿವೆ.
ಇದನ್ನೂ ಓದಿ:ಕ್ಷಮಿಸು ಭಾರತ್​ಮಾತಾ- ಸೈನ್ಯದ ಸಮವಸ್ತ್ರ ಧರಿಸಿ, ಬಾವುಟ ಹಿಡಿಯುವ ಆಸೆ ಈಡೇರಿಸದೇ ಸಾಯುತ್ತಿರುವೆ…
ತಮಿಳುನಾಡಿನ ಹಲವೆಡೆ ಕಮಲ ಹಾಸನ್​ಗೆ ಪ್ರಚಾರ ಅಭಿಯಾನ ನಡೆಸಲು ಸರ್ಕಾರ ಅನುಮತಿ ನೀಡದಿರುವುದರ ಕುರಿತು ಮಾತನಾಡಿರುವ ಕಮಲ ಹಾಸನ್​, ‘ಇಂತಹ ಅಡೆತಡೆಗಳು ನಮಗೆ ಹೊಸತೇನಲ್ಲ. ನಾವು ಕರೊನಾ ನಿಯಮಗಳನ್ನು ಪಾಲಿಸುತ್ತಲೇ ಜನರನ್ನು ತಲುಪಲು ಸಿದ್ಧರಾಗಿದ್ದೇವೆ’ ಎಂದು ಹೇಳಿದ್ದಾರೆ. (ಏಜೆನ್ಸೀಸ್​)
ಮದುವೆಗೆ ಮೂರು ದಿನವಿದ್ದಾಗ ಮರ್ಮಾಂಗವೇ ಕಟ್! 1 ಲಕ್ಷಕ್ಕಾಗಿ ಜೀವನವನ್ನೇ ಹಾಳು ಮಾಡಿಕೊಂಡ ಯುವಕ

ಇನ್​ಸ್ಟಾಗ್ರಾಂ ಸ್ಟಾರ್​ಗೆ 10 ವರ್ಷ ಜೈಲು! ವಿಚಿತ್ರವಾಗಿ ಕಾಣಲು ಹೋಗಿ ಜೈಲು ಸೇರಿದ ಯುವತಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 5 =
Remember me
