ಬೆಂಗಳೂರು:ಕಾಂತಾರ ಸಿನಿಮಾ ಜಗತ್ತಿನಾದ್ಯಂತ ಜನರ ಗಮನ ಸೆಳೆಯುತ್ತಾ ಕೋಟಿ ಕೋಟಿ ಬಾಚುತ್ತಿದೆ. ಇನ್ನೂ ಈ ಸಿನಿಮಾ ಬಗ್ಗೆ ಮಾತುಗಳು ನಿಲ್ಲುತ್ತಿಲ್ಲ. ಇತ್ತೀಚೆಗಷ್ಟೆ ಜಯಾ ಬಚ್ಚನ್​, ರಿಷಭ್ ಶೆಟ್ರ ಡ್ರೆಸ್​ ಕೋಡ್​ ಬಗ್ಗೆ ಅಸಮಾಧಾನ ಹೊರಹಾಕಿದ್ದರು. ಕೆಲ ದಿನಗಳ ಹಿಂದೆ, ಸಂದರ್ಶನ ಒಂದರಲ್ಲಿ ಖ್ಯಾತ ನಿರ್ದೇಶಕ ಅನುರಾಗ್​ ಕಶ್ಯಪ್​ ಕಾಂತಾರ ಹಾಗೂ ಪುಷ್ಪಾ ಸಿನಿಮಾಗಳ ಬಗ್ಗೆ ಅಸಮಾಧಾನ ಹಾಕಿದ್ದಾರೆ.
ಇದೀಗ ಬಾಲಿವುಡ್​ನೊಳಗೇ ನಿರ್ದೇಶಕರ ನಡುವೆ ಜಟಾಪಟಿಗೆ ಕಾರಣವಾಗಿದೆ. ಈಗ ಕಾಶ್ಮೀರ್​ ಫೈಲ್ಸ್​ ನಿರ್ದೇಶಕ ವಿವೇಕ್​ ರಂಜನ್​ ಅಗ್ನಿಹೋತ್ರಿ ಹಾಗೂ ಅನುರಾಗ್​ ಕಶ್ಯಪ್​ ನಡುವೆ ಕಿತ್ತಾಟ ಶುರುವಾಗಿದೆ.
ಸಂದರ್ಶದಲ್ಲಿ ಅನುರಾಗ್​ ಕಶ್ಯಪ್​ ‘ಎಲ್ಲರೂ ಈಗ ಪ್ಯಾನ್ ಇಂಡಿಯಾ ಸಿನಿಮಾಗಳನ್ನೇ ಮಾಡಲು ಪ್ರಯತ್ನಿಸುತ್ತಿದ್ದಾರೆ. ಆದ್ರೆ ಯಶಸ್ಸಿನ ಪ್ರಮಾಣ ಕೇವಲ 5-10 ಪರ್ಸೇಂಟ್​​​​ ಅಷ್ಟೆ. ‘ಕಾಂತಾರ’ ಹಾಗೂ ‘ಪುಷ್ಪ’ದಂತಹ ಸಿನಿಮಾಗಳು ಬಾಲಿವುಡ್​ ಇಂಡಸ್ಟ್ರಿಯನ್ನ ಹಾಳು ಮಾಡುತ್ತವೆ’ ಎಂದು ಸಂದರ್ಶನವೊಂದ್ರಲ್ಲಿ ಹೇಳಿಕೊಂಡಿದ್ದರು.
ಇದಕ್ಕೆ ವಿವೇಕ್​ ಅಗ್ನಿಹೋತ್ರಿ ಕೌಂಟರ್​ ಕೊಟ್ಟಿದ್ದು ‘ಈ ಅಭಿಪ್ರಾಯವನ್ನು ನಾನು ಒಪ್ಪೋದಿಲ್ಲ. ‘ನೀವಿದನ್ನ ಒಪ್ಪುತೀರಾ’ ಅಂತ ವಿವೇಕ್​ ಟ್ವೀಟ್​ ಮೂಲಕ ಅಭಿಮಾನಿಗಳಲ್ಲಿ ಕೇಳಿದ್ದರು.
ಇದನ್ನು ಇನ್ನೂ ಮುಂದುವರೆಸಿದ ಅನುರಾಗ್​ ಕಶ್ಯಪ್​, ‘ಸರ್, ಇದು ನಿಮ್ಮ ತಪ್ಪಲ್ಲ. ನಮ್ಮ ಸಂಭಾಷಣೆಯ ರೀತಿಯಲ್ಲೇ ನಿಮ್ಮ ಚಲನಚಿತ್ರಗಳ ರಿಸರ್ಚ್​ ಕೂಡ ಇದೆ. ನಿಮ್ಮ ಮತ್ತು ನಿಮ್ಮ ಮಾಧ್ಯಮದ ಸ್ಥಿತಿಯೂ ಅದೇ. ಮುಂದಿನ ಬಾರಿ ಸ್ವಲ್ಪ ಗಂಭೀರವಾದ ಸಂಶೋಧನೆ ಮಾಡಿ’ ಎಂದಿದ್ದಾರೆ.
Sir aapki galti nahin hai, aap ki filmon ki research bhi aisi hi hoti hai jaise aapki mere conversations pe tweet hai. Aapka aur aapki media ka bhi same haal hai. Koi nahin next time thoda serious research kar lena ..https://t.co/eEHPrUeH9u
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × five =
Remember me
