ಬೆಂಗಳೂರು:ಡ್ರಗ್ಸ್​ ವಿಷಯದಲ್ಲಿ ದೀಪಿಕಾ ಪಡುಕೋಣೆ ಕಾಲೆಳೆದಿದ್ದ ನಟಿ ಕಂಗನಾ ರಣಾವತ್​, ಇದೀಗ ಕ್ರಿಕೆಟ್​ ವಿಷಯದಲ್ಲಿ ನಟಿ ಅನುಷ್ಕಾ ಶರ್ಮಾ ಕಾಲೆಳೆದಿದ್ದಾರೆ. ಆ ಮೂಲಕ ಗಂಡ-ಹೆಂಡತಿ ಮತ್ತು ಗಾವಸ್ಕರ್​ ಮಧ್ಯೆ ಕಂಗನಾ ಪ್ರವೇಶಿಸಿದ್ದಾರೆ.
ಆರ್‌ಸಿಬಿ ವಿರುದ್ಧ ಪಂಜಾಬ್ ತಂಡ ಆಡಿದ 2ನೇ ಪಂದ್ಯದ ವೀಕ್ಷಕ ವಿವರಣೆ ವೇಳೆ ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ದಂಪತಿ ಬಗ್ಗೆ ಹಿರಿಯ ಕ್ರಿಕೆಟಿಗ ಸುನೀಲ್ ಗಾವಸ್ಕರ್ ಆಡಿದ್ದ ಮಾತುಗಳ ಹಿನ್ನೆಲೆಯಲ್ಲಿ ಕಂಗನಾ ಪ್ರತಿಕ್ರಿಯಿಸಿದ್ದಾರೆ.
ಪಂಜಾಬ್ ವಿರುದ್ಧ ಪಂದ್ಯದಲ್ಲಿ ಕೇವಲ 1 ರನ್ ಗಳಿಸಿ ಕೊಹ್ಲಿ ಔಟಾದಾಗ, ‘ಲಾಕ್‌ಡೌನ್ ವೇಳೆ ಕೊಹ್ಲಿ ಕೇವಲ ಅನುಷ್ಕಾ ಶರ್ಮಾ ಬೌಲಿಂಗ್ ಎದುರು ಮಾತ್ರ ಅಭ್ಯಾಸ ಮಾಡಿದ್ದಾರೆ’ ಎಂದು ವೀಕ್ಷಕ ವಿವರಣೆಯಲ್ಲಿ ಗಾವಸ್ಕರ್​ ತಮಾಷೆಯಾಗಿ ಹೇಳಿದ್ದರು. ಇದು ಕೊಹ್ಲಿ ಅಭಿಮಾನಿಗಳನ್ನು ಕೆರಳಿಸಿತ್ತು. ಅಲ್ಲದೆ ಸುನೀಲ್ ಗಾವಸ್ಕರ್ ತಮ್ಮ ವಿರುದ್ಧ ‘ಅಗೌರವ’ದ ಮಾತನ್ನಾಡಿದ್ದಾರೆ ಎಂದು ಕಿಡಿ ಕಾರಿರುವ ಅನುಷ್ಕಾ ಶರ್ಮಾ, ಗಂಡನ ಆಟದ ವಿಷಯದಲ್ಲಿ ನನ್ನ ಹೆಸರನ್ನು ತಂದ ಬಗ್ಗೆ ವಿವರಣೆ ನೀಡಬೇಕೆಂದೂ ಕೇಳಿಕೊಂಡಿದ್ದಾರೆ.
ಇಷ್ಟೆಲ್ಲ ಬೆಳವಣಿಗೆ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಕಂಗನಾ, ನನಗೆ ಬೆದರಿಕೆ ಬಂದಿದ್ದಾಗ, ನನ್ನನ್ನು ಹರಾಮ್​ಕೋರ್ ಎಂದು ಕರೆದಿದ್ದಾಗ ಇದೇ ಅನುಷ್ಕಾ ಸುಮ್ಮನಿದ್ದರು. ಈಗ ಅದೇ ಸ್ತ್ರೀದ್ವೇಷ ಅವರನ್ನೇ ಕುಟುಕಲು ಬಂದಿದೆ. ಕ್ರಿಕೆಟ್ ವಿಷಯದಲ್ಲಿ ಅನುಷ್ಕಾ ಹೆಸರನ್ನು ಗಾವಸ್ಕರ್​ ಎಳೆತಂದಿದ್ದನ್ನು ಖಂಡಿಸುತ್ತೇನೆ ಎಂದಿರುವ ಕಂಗನಾ, ಸೆಲೆಕ್ಟಿವ್​ ಫೆಮಿನಿಸಂ ಒಳ್ಳೆಯದಲ್ಲ ಎನ್ನುವ ಮೂಲಕ ಅನುಷ್ಕಾ ಅವರನ್ನು ಪರೋಕ್ಷವಾಗಿ ಕುಟುಕಿದ್ದಾರೆ. ವಿಕೃತ ಕಾಮಿಗಳು ಮಾತ್ರ ಗಾವಸ್ಕರ್​ ಹೇಳಿಕೆಯಲ್ಲಿ ಲೈಂಗಿಕವಾದದ್ದನ್ನು ಕಾಣುತ್ತಾರೆ. ಆದಾಗ್ಯೂ ಗಾವಸ್ಕರ್​ ಅನುಷ್ಕಾ ಹೆಸರನ್ನು ಉಲ್ಲೇಖಿಸಬಾರದಿತ್ತು ಎಂದು ಕೂಡ ಕಂಗನಾ ಹೇಳಿದ್ದಾರೆ.
https://twitter.com/KanganaTeam/status/1309499964469387265?s=20
ಲಾಕ್‌ಡೌನ್ ವೇಳೆ ಕೊಹ್ಲಿ ತಮ್ಮ ಮನೆಯ ಆವರಣದಲ್ಲಿ ಅನುಷ್ಕಾ ಶರ್ಮಾ ಎಸೆತದ ಎದುರು ಬ್ಯಾಟಿಂಗ್ ಮಾಡಿದ ವಿಡಿಯೋ ವೈರಲ್ ಆಗಿತ್ತು. ಅದನ್ನೇ ಉಲ್ಲೇಖಿಸಿ ಗಾವಸ್ಕರ್ ಕಾಮೆಂಟರಿ ನೀಡಿದಂತಿತ್ತು. ಆದರೆ ಗಾವಸ್ಕರ್ ದ್ವಂದ್ವಾರ್ಥದಲ್ಲಿ ಈ ಹೇಳಿಕೆ ನೀಡಿದ್ದಾರೆ ಎಂದು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 − five =
Remember me
