ಮುಂಬೈ:ಇತ್ತೀಚಿನ ದಿನಗಳಲ್ಲಿ ಹಲವಾರು ಕಾಂಟ್ರವರ್ಸಿಗಳ ಮೂಲಕ ಸುದ್ದಿಯಾಗುತ್ತಿರುವ ನಟಿ ಕಂಗನಾ ರಣಾವತ್​ ಇದೀಗ ಅಮೆರಿಕ ಅಧ್ಯಕ್ಷ ಜೋ ಬಿಡೆನ್​ ಅವರನ್ನೂ ಬಾಲಿವುಡ್​ಗೆ ಕರೆತಂದಿದ್ದಾರೆ. ಬಾಲಿವುಡ್​ನ ಪ್ರಸಿದ್ಧ ಸಿನಿಮಾ ಗಜನಿಯಲ್ಲಿ ಅಮಿರ್​ ಖಾನ್​ ಪಾತ್ರಕ್ಕೂ, ಅಧ್ಯಕ್ಷ ಜೋ ಬಿಡೆನ್​ಗೂ ಯಾವುದೇ ವ್ಯತ್ಯಾಸವಿಲ್ಲ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ:ಐಪಿಎಲ್ ಬೆಟ್ಟಿಂಗ್ ನಡೆಸುತ್ತಿದ್ದ ಮುಂಬೈ ರಣಜಿ ತಂಡದ ಮಾಜಿ ಆಟಗಾರ ಬಂಧನ
ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಟಿಕ್​ ಪಕ್ಷದ ಜೋ ಬಿಡೆನ್​ ಜಯಭೇರಿ ಬಾರಿಸಿದ್ದಾರೆ. ಇವರು ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರೆ, ಭಾರತ ಮೂಲದ ಕಮಲಾ ಹ್ಯಾರಿಸ್​ ಅವರು ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಅಲ್ಲಿನ ಚುನಾವಣಾ ಫಲಿತಾಂಶದ ಬೆನ್ನಲ್ಲೇ ಭಾರತದಲ್ಲಿ ಭಾರಿ ಪ್ರಮಾಣದ ಪರ, ವಿರೋಧ ಮಾತುಗಳು ಕೇಳಿಬಂದಿವೆ. ಕಮಲಾ ಬಗ್ಗೆ ಬಹುತೇಕರು ಸಂತಸ ವ್ಯಕ್ತಪಡಿಸಿದ್ದರೆ, ಟ್ರಂಪ್​ ಅಭಿಮಾನಿಗಳು ಬಿಡೆನ್​ ಗೆದ್ದಿದ್ದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ. ಇದೇ ಹಾದಿಯಲ್ಲಿ ನಟಿ ಕಂಗನಾ ಕೂಡ, ಬಿಡೆನ್​ ಅವರನ್ನು ಹೀಯಾಳಿಸಿ, ಕಮಲಾ ಅವರನ್ನು ಹೊಗಳಿದ್ದಾರೆ.
ಜೋ ಬಿಡೆನ್​ ಗಜನಿ ಇದ್ದಂತೆ. ಅವರು ಪ್ರತಿ ಐದು ನಿಮಿಷಕ್ಕೆ ಎಲ್ಲವನ್ನೂ ಮರೆತುಬಿಡುತ್ತಾರೆ. ಅವರಿಗೆ ವರ್ಷಕ್ಕಿಂತ ಹೆಚ್ಚು ಕಾಲ ನೆನಪುಗಳು ಉಳಿಯುವುದು ಖಚಿತವಿಲ್ಲ. ಆದರೆ ಕಮಲಾ ಹ್ಯಾರಿಸ್​ ಸ್ಪಷ್ಟವಾಗಿ ಅಧಿಕಾರವನ್ನು ನಡೆಸುತ್ತಾರೆ. ಒಬ್ಬ ಮಹಿಳೆ ಮೇಲೇರಿದರೆ ಆಕೆ ಬೇರೆಲ್ಲ ಮಹಿಳೆಯರಿಗೂ ದಾರಿ ಮಾಡಿಕೊಡುತ್ತಾಳೆ ಎಂದು ಕಂಗನಾ ಟ್ವಿಟ್ಟರ್​ನಲ್ಲಿ ಹೇಳಿದ್ದಾರೆ.
ಇದನ್ನೂ ಓದಿ:ನನ್ನ ಸಾವಿಗೆ ಉದ್ಧವ್​ ಠಾಕ್ರೆಯೇ ಕಾರಣ ಎಂದು ಹೇಳಿ ಆತ್ಮಹತ್ಯೆ ಮಾಡಿಕೊಂಡ ಕಂಡಕ್ಟರ್​!
ಅದರ ಜತೆಯಲ್ಲಿ ಕಮಲಾ ಹ್ಯಾರಿಸ್​ ಅವರ ಭಾಷಣದ ತುಣುಕನ್ನೂ ಕಂಗನಾ ಹಂಚಿಕೊಂಡಿದ್ದಾರೆ. ಕಂಗನಾ ಅವರ ಈ ಹೋಲಿಕೆಗೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್​)
https://twitter.com/KanganaTeam/status/1325288675056312325?s=20
ಡೇರಿಯ ಹಾಲು ಕೊಳ್ಳುವ ಮುನ್ನ ಎಚ್ಚರ! ಡೇರಿಯ ಹಾಲಿನಲ್ಲೇ ಸ್ನಾನ ಮಾಡಿದ್ದಾನೆ ಈ ಭೂಪ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × three =
Remember me
