ಬಾಲಿವುಡ್ ನಟಿ ಕಂಗನಾ ರಣಾವತ್ ನಿರ್ದೇಶಿಸುತ್ತಿರುವ ‘ಎಮರ್ಜೆನ್ಸಿ’ ಚಿತ್ರದಲ್ಲಿ ಖುದ್ದು ಅವರೇ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಪಾತ್ರದಲ್ಲಿ ನಟಿಸುತ್ತಿರುವುದು ಗೊತ್ತೇ ಇದೆ. ಹಾಗೆಯೇ ಕೆಲವು ದಿನಗಳ ಹಿಂದಷ್ಟೇ ಜಯಪ್ರಕಾಶ್ ನಾರಾಯಣ್ ಅವರ ಪಾತ್ರದಲ್ಲಿ ನಟಿಸುತ್ತಿರುವ ಅನುಪಮ್ ಖೇರ್ ಅವರ ಲುಕ್ ಕೂಡ ರಿಲೀಸ್ ಆಗಿತ್ತು. ಈಗ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಯವರ ಪಾತ್ರಕ್ಕೆ ಶ್ರೇಯಸ್ ತಲ್ಪಾಡೆ ಆಯ್ಕೆ ಯಾಗಿದ್ದು, ಅವರ ಲುಕ್ ಕೂಡ ಬಿಡುಗಡೆಯಾಗಿದೆ.
ಈ ಕುರಿತು ಮಾತನಾಡಿರುವ ನಟಿ- ನಿರ್ದೇಶಕಿ ಕಂಗನಾ ರಣಾವತ್, ‘ಇಂದಿರಾ ಗಾಂಧಿಯವರು ಮೊದಲ ಬಾರಿ ಪ್ರಧಾನಿಯಾದಾಗ ಯುವ, ಉದಯೋನ್ಮುಖ ರಾಜಕಾರಣಿಯಾಗಿ ಮುಖ್ಯವಾಹಿನಿಗೆ ಬಂದವರು ಅಟಲ್ ಬಿಹಾರಿ ವಾಜಪೇಯಿ. ಅವರು ಎಮರ್ಜೆನ್ಸಿ ವಿರುದ್ಧ ಹೋರಾಡಿದ ಹೀರೋ ಆಗಿದ್ದರು. ಶ್ರೇಯಸ್ ಅವರು ಬಹುಮುಖ ಪ್ರತಿಭೆ, ಅದ್ಭುತ ನಟ. ಅಟಲ್​ಜೀ ಪಾತ್ರದಲ್ಲಿ ಅವರ ನಟನೆ ಎಲ್ಲರ ನೆನಪಿನಲ್ಲಿ ಉಳಿಯಲಿದೆ’ ಎಂದಿದ್ದಾರೆ.(ಏಜೆನ್ಸೀಸ್)
ಒಂದೇ ಸಿರಿಂಜ್​ನಿಂದ 39 ಮಕ್ಕಳಿಗೆ ವ್ಯಾಕ್ಸಿನ್​! ಕೋವಿಡ್​​ ಲಸಿಕೆ ಅಭಿಯಾನದಲ್ಲಿ ಮಹಾ ಪ್ರಮಾದ, ಆರೋಪಿ ಪರಾರಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − eleven =
Remember me
