ನವದೆಹಲಿ:ಲೋಕಸಭೆ ಸ್ಪೀಕರ್ ಆಯ್ಕೆ ಸಂದರ್ಭದಲ್ಲಿ ಸಂಸತ್ತಿನ ಪ್ರವೇಶ ದ್ವಾರದಲ್ಲಿ ಬುಧವಾರ(ಜೂ.26) ಕುತೂಹಲಕಾರಿ ಘಟನೆಯೊಂದು ನಡೆದಿದೆ. ಕೇಂದ್ರ ಸಚಿವ ಚಿರಾಗ್ ಪಾಸ್ವಾನ್ ಮತ್ತು ಬಿಜೆಪಿ ಸಂಸದೆ ಕಂಗನಾ ರಣಾವತ್ ಪರಸ್ಪರ ಮುಖಾಮುಕಿಯಾದರು. ಈ ಸಂದರ್ಭ ಇಬ್ಬರೂ ಪರಸ್ಪರ ಶುಭಾಶಯ ಕೋರಿದರು. ಆದರೆ ಈ ಹಿಂದೆ ಬಾಲಿವುಡ್‌ನಲ್ಲಿ ಒಟ್ಟಿಗೆ ಸಿನಿಮಾ ಮಾಡಿದ್ದು ಹಲವರಿಗೆ ಗೊತ್ತಿರಲಿಕ್ಕಿಲ್ಲ. 2011 ರಲ್ಲಿ, ಅವರು ಮಿಲೇ ನಾ ಮಿಲೇ ಹಮ್ ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದರು.
ಇದನ್ನೂ ಓದಿ:ಮೋದಿ, ರಾಹುಲ್ ಹಸ್ತಲಾಘವ.. ಅಪರೂಪದ ದೃಶ್ಯಕ್ಕೆ ಸಾಕ್ಷಿಯಾದ ಲೋಕಸಭೆ
ಮಿಲೇ ನಾ ಮಿಲೇ ಹಮ್ ಚಿತ್ರ ಬಿಡುಗಡೆಯಾದರೂ ಹಿಟ್ ಆಗಲಿಲ್ಲ. ಇದರೊಂದಿಗೆ ಚಿರಾಗ್ ಪಾಸ್ವಾನ್ ಚಿತ್ರರಂಗಕ್ಕೆ ಗುಡ್ ಬೈ ಹೇಳಿದ್ದರು. ನಂತರ ಅವರು ರಾಜಕೀಯ ಪ್ರವೇಶಿಸಿದರು. ಆದರೆ ಕಂಗನಾ ರಣಾವತ್ ಬಾಲಿವುಡ್ ನಲ್ಲಿ ಅದೃಷ್ಟ ಪರೀಕ್ಷೆಗಿಳಿದಿದ್ದರು. ಈಗ ಹಿಮಾಚಲ ಪ್ರದೇಶದ ಮಂಡಿ ಲೋಕಸಭಾ ಕ್ಷೇತ್ರದಿಂದ ಬಿಜೆಪಿಯಿಂದ ಸ್ಪರ್ಧಿಸಿ ಸಂಸದೆಯಾಗಿ ಸಂಸತ್ ಪ್ರವೇಶಿಸಿರುವುದು ತಿಳಿದ ಸಂಗತಿಯೇ.
ಕಂಗನಾ ತಮ್ಮ ಪ್ರತಿಸ್ಪರ್ಧಿ ಕಾಂಗ್ರೆಸ್ ನ ವಿಕ್ರಮಾದಿತ್ಯ ಅವರಿಗಿಂತ 75 ಸಾವಿರ ಮತಗಳ ಬಹುಮತದಿಂದ ಗೆದ್ದಿದ್ದಾರೆ. ಚಿತ್ರರಂಗ ಮಾತ್ರವಲ್ಲದೆ ರಾಜಕೀಯ ಕ್ಷೇತ್ರದಲ್ಲೂ ಮಿಂಚಬಲ್ಲೆ ಎಂಬ ಸ್ಪಷ್ಟ ಸಂದೇಶವನ್ನು ಕಂಗನಾ ವಿರೋಧಿಗಳಿಗೆ ನೀಡಿದ್ದಾರೆ.
ಇನ್ನು ಜನಶಕ್ತಿ ಪಕ್ಷದ ಸಂಸ್ಥಾಪಕ ಅಧ್ಯಕ್ಷ ರಾಮ್ ವಿಲಾಸ್ ಪಾಸ್ವಾನ್ ಅವರ ಪುತ್ರ ಚಿರಾಗ್ ರಾಜಕೀಯದಲ್ಲಿ ತಂದೆಯ ಹಾದಿಯನ್ನೇ ಅನುಸರಿಸಿದರು. ಅವರ ತಂದೆ ನಿಧನದ ನಂತರ, ಚಿರಾಗ್ ಪಕ್ಷದ ಜವಾಬ್ದಾರಿಯನ್ನು ವಹಿಸಿಕೊಂಡರು. ಇತ್ತೀಚೆಗೆ ನಡೆದ ಲೋಕಸಭೆ ಚುನಾವಣೆಯಲ್ಲಿ ಚಿರಾಗ್ ಅವರ ಪಕ್ಷವು ಬಿಹಾರದಲ್ಲಿ 5 ಎಂಪಿ ಸ್ಥಾನಗಳನ್ನು ಗೆದ್ದಿದೆ. ಇದು ಎನ್‌ಡಿಎ ಸರ್ಕಾರದ ರಚನೆಯಲ್ಲಿ ಎಲ್‌ಜೆಪಿಯನ್ನು ಪ್ರಮುಖ ಪಾಲುದಾರರನ್ನಾಗಿ ಮಾಡಿತು.
ಚಿರಾಗ್ ಅವರು ಮೋದಿ ಸಂಪುಟದಲ್ಲಿ ಆಹಾರ ಸಂಸ್ಕರಣಾ ಉದ್ಯಮ ಸಚಿವರಾಗಿ ಮುಂದುವರಿದಿದ್ದಾರೆ. ಚಿರಾಗ್ ಅವರು ಈ ಹಿಂದೆ ಎರಡು ಬಾರಿ ಜುಮಾಯಿಯಿಂದ ಸಂಸದರಾಗಿ ಗೆದ್ದಿದ್ದರು. ಈ ಚುನಾವಣೆಯಲ್ಲಿ ಅವರು ಹಾಜಿಪುರ ಲೋಕಸಭಾ ಕ್ಷೇತ್ರದಿಂದ ಗೆದ್ದಿದ್ದಾರೆ.
ಇದೆಲ್ಲದರ ನಡುವೆ ಈ ಇಬ್ಬರೂ ಎರಡು ದಶಕಗಳ ಹಿಂದೆ ಒಂದೇ ಚಿತ್ರದಲ್ಲಿ ನಟಿಸಿದ್ದರು. ಈಗ ಅವರು ಸಂಸತ್ತಿನ ವೇದಿಕೆಯಲ್ಲಿ ಪರಸ್ಪರ ಭೇಟಿಯಾದರು. ಇದಕ್ಕೆ ಸಂಬಂಧಿಸಿದ ವಿಡಿಯೋ ಮಾಧ್ಯಮಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಶಾಲೆ ಪಠ್ಯದಲ್ಲಿ ನಟಿ ತಮನ್ನಾ ಕುರಿತ ಪಾಠ! ಪಾಲಕರು ಅಸಮಾಧಾನ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × two =
Remember me
