ಲಖನೌ:“ಒಂದು ಜಿಲ್ಲೆ ಒಂದು ಉತ್ಪನ್ನ” ಯೋಜನೆಯ ರಾಯಭಾರಿಯನ್ನಾಗಿ ಬಾಲಿವುಡ್​ ನಟಿ ಕಂಗನಾ ರಣಾವತ್ ಅವರನ್ನು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ನೇತೃತ್ವದ ಉತ್ತರ ಪ್ರದೇಶದ ಸರ್ಕಾರ ಶುಕ್ರವಾರ ಹೆಸರಿಸಿದೆ.
ನಟಿ ಕಂಗನಾ ಮುಖ್ಯಮಂತ್ರಿಗಳು ಅಧಿಕೃತ ನಿವಾಸದಲ್ಲಿ ಸಿಎಂ ಆದಿತ್ಯನಾಥ್​ ಅವರನ್ನು ಭೇಟಿ ಮಾಡಿ ಯೋಜನೆಯ ಬಗ್ಗೆ ಚರ್ಚಿಸಿದರು.
ರಾಜ್ಯದ 75 ಜಿಲ್ಲೆಗಳಾದ್ಯಂತ ಉತ್ಪನ್ನ ಹಾಗೂ ನಿರ್ದಿಷ್ಟ ಸಾಂಪ್ರದಾಯಿಕ ಕೈಗಾರಿಕಾ ಕೇಂದ್ರಗಳನ್ನು ರಚಿಸುವ ಉದ್ದೇಶದಿಂದ ಉತ್ತರ ಪ್ರದೇಶ ಸರ್ಕಾರವು ಒಂದು ಜಿಲ್ಲೆ ಒಂದು ಉತ್ಪನ್ನ (ಒಡಿಒಪಿ) ಕಾರ್ಯಕ್ರಮವನ್ನು ಆರಂಭಿಸಿದೆ.
ಈ ಬಗ್ಗೆ ಟ್ವೀಟ್​ ಮಾಡಿರುವ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಮಾಹಿತಿ) ನವನೀತ್​ ಸೆಹಗಾಲ್​, ಪ್ರಖ್ಯಾತ ನಟಿ ಕಂಗನಾ ಅವರು ಯುಪಿ ಸಿಎಂ ಯೋಗಿ ಅವರನ್ನು ಭೇಟಿ ಮಾಡಿದರು. ಇನ್ನು ಮುಂದೆ ಕಂಗನಾ ಅವರು ನಮ್ಮ ಒಡಿಒಪಿ ಯೋಜನೆ ರಾಯಭಾರಿ ಆಗಲಿದ್ದಾರೆಂದು ತಿಳಿಸಿದ್ದಾರೆ.
Famous Actress Kangana Ranawat met@myogiadityanathHon’ble Chief Minister UP, who presented her with an@UP_ODOPproduct. Kangna ji will be our Brand Ambassador for ODOP@CMOfficeUPpic.twitter.com/XUJTiStRqv
— Navneet Sehgal (@navneetsehgal3)October 1, 2021

ಹಿರಿಯ ಅಧಿಕಾರಿಯ ಪ್ರಕಾರ, ಭೇಟಿಯ ವೇಳೆ ಮುಖ್ಯಮಂತ್ರಿ ಮಾಡುತ್ತಿರುವ ಕೆಲಸಗಳನ್ನು ನಟಿ ಕಂಗನಾ ಶ್ಲಾಘಿಸಿದರು ಎಂದು ತಿಳಿದುಬಂದಿದೆ. ಇದೇ ಸಂದರ್ಭದಲ್ಲಿ ಅಯೋಧ್ಯೆಯಲ್ಲಿ ರಾಮ ಮಂದಿರಕ್ಕೆ ಭೇಟಿ ನೀಡುವಂತೆ ಸಿಎಂ, ಕಂಗನಾರ ಬಳಿ ವಿನಂತಿಸಿದರು ಎಂದು ಹೇಳಲಾಗಿದೆ.(ಏಜೆನ್ಸೀಸ್​)
ಚಂದ್ರ ಗ್ರಹದಲ್ಲಿ ಸೈಟು ಆಮಿಷ: ಹಣ ಕಳ್ಕೊಂಡು ಕಣ್ಣೀರಿಡುತ್ತಿರುವ ಬೆಂಗ್ಳೂರು ಮಹಿಳೆ..!

ರಾಜ್ಯದ 31ನೇ ಜಿಲ್ಲೆ ವಿಜಯನಗರ ಇಂದು ಅಧಿಕೃತ ಮುದ್ರೆ; ನನಸಾದ ದಶಕಗಳ ಕನಸು, ಸಿಎಂ ಅವರಿಂದ ಚಾಲನೆ..

ನಿಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಿ; ಸಲಗ, ಕೋಟಿಗೊಬ್ಬನಿಗೆ ಸೂರಜ್ ಮನವಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen + 5 =
Remember me
