ನವದೆಹಲಿ:ಬಾಲಿವುಡ್ ಇಂಡಸ್ಟ್ರಿಯ ಕ್ವೀನ್ ಎಂದೇ ಜನಪ್ರಿಯವಾಗಿರುವ ಕಂಗನಾ ರನೌತ್ ಯಾವಾಗಲೂ ಯಾವುದಾದರೊಂದು ಕಾರಣಕ್ಕಾಗಿ ಸುದ್ದಿಯಲ್ಲಿರುತ್ತಾರೆ. ತಮ್ಮ ಬಹಿರಂಗ ಹೇಳಿಕೆಗಳಿಂದಾಗಿ ಹೆಚ್ಚು ಸುದ್ದಿಯಾಗುವ ಕಂಗನಾ ಕೆಲವು ದಿನಗಳಿಂದ ತಮ್ಮ ಮುಂಬರುವ ಚಿತ್ರ ‘ಎಮರ್ಜೆನ್ಸಿ’ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ವಿಶೇಷವಾಗಿ ರಾಜಕೀಯ ವಿಷಯಗಳ ಬಗ್ಗೆ ಮುಕ್ತವಾಗಿ, ಬಹಿರಂಗವಾಗಿ ಮಾತನಾಡುವ ಕಂಗನಾಗೆ ಕಾರ್ಯಕ್ರಮವೊಂದರಲ್ಲಿ “ನೀವು ದೇಶದ ಪ್ರಧಾನಿಯಾಗಲು ಆಕಾಂಕ್ಷೆ ಹೊಂದಿದ್ದೀರಾ” ಎಂದು ಕೇಳಲಾಯಿತು. ಈ ಪ್ರಶ್ನೆಗೆ ನಟಿಯ ಪ್ರತಿಕ್ರಿಯೆ ಹೇಗಿತ್ತು ಗೊತ್ತಾ?
ಕಂಗನಾ ಪ್ರಧಾನಿಯಾಗಲು ಬಯಸುತ್ತಾರಾ?ಇತ್ತೀಚೆಗಷ್ಟೇ ಕಂಗನಾ ತೆಲುಗು ಸಿನಿಮಾ ರಜಾಕರ್ ಟ್ರೇಲರ್ ಬಿಡುಗಡೆಗೆ ತೆರಳಿದ್ದರು. ಈ ಸಮಯದಲ್ಲಿ ಅವರಿಗೆ ಮುಂದಿನ ಪ್ರಧಾನಿಯಾಗುವ ಬಗ್ಗೆ ಕೇಳಲಾಯಿತು. ಆಗ ನಟಿ ತುಂಬಾ ಆಶ್ಚರ್ಯಕರ ಉತ್ತರವನ್ನು ನೀಡಿದ್ದಾರೆ. ಹೌದು, ‘ಎಮರ್ಜೆನ್ಸಿ’ ಚಿತ್ರದಲ್ಲಿರುವಂತೆ ನೀವು ಮುಂದಿನ ಪ್ರಧಾನಿಯಾಗಲು ಬಯಸುತ್ತೀರಾ’ ಎಂದು ಕಂಗನಾಗೆ ಕೇಳಿದಾಗ ಇದಕ್ಕೆ ಪ್ರತಿಕ್ರಿಯಿಸಿದ ಕಂಗನಾ, “ನಾನು ಮಾಡಿರುವ ಎಮರ್ಜೆನ್ಸಿ ಸಿನಿಮಾ ನೋಡಿದ ಮೇಲೆ ನೀವು ಖಂಡಿತ ನಾನು ಪ್ರಧಾನಿಯಾಗಬೇಕೆಂದು ಬಯಸುವುದಿಲ್ಲ”  ಎಂದರು. ಅವರ ಈ ಉತ್ತರ ಕೇಳಿ ಎಲ್ಲರೂ ಜೋರಾಗಿ ನಕ್ಕರು. ಎಮರ್ಜೆನ್ಸಿ ಕಂಗನಾ ರಣಾವತ್ ನಟನೆಯ ಚಲನಚಿತ್ರವಾಗಿದ್ದು, ಇದರಲ್ಲಿ ಅವರು ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರದ ಅವರ ಲುಕ್ ರಿವೀಲ್ ಆಗಿದ್ದು, ಶೀಘ್ರದಲ್ಲೇ ಚಿತ್ರ ಥಿಯೇಟರ್‌ಗೆ ಬರಲಿದೆ.
ಕಳೆದ ವರ್ಷ ಫೆಬ್ರವರಿಯಲ್ಲಿ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಳ್ಳುವಾಗ, ನಟಿ ‘ನಾನು ಸೂಕ್ಷ್ಮ ಮತ್ತು ಬುದ್ಧಿವಂತ ವ್ಯಕ್ತಿ, ರಾಜಕೀಯ ವ್ಯಕ್ತಿಯಲ್ಲ. ರಾಜಕೀಯಕ್ಕೆ ಸೇರುವಂತೆ ಹಲವು ಬಾರಿ ಕೇಳಿಕೊಂಡರೂ ಪ್ರತಿ ಬಾರಿ ನಿರಾಕರಿಸಿದ್ದೆ’ ಎಂದು ತಿಳಿಸಿದ್ದರು. ಆದರೆ, ಕಳೆದ ವರ್ಷ ನವೆಂಬರ್‌ನಲ್ಲಿಯೇ ಕಂಗನಾ ರಣಾವತ್ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವ ಇಚ್ಛೆ ವ್ಯಕ್ತಪಡಿಸಿದ್ದರು.
ಚಿತ್ರ ಯಾವಾಗ ಬಿಡುಗಡೆಯಾಗಲಿದೆ?ಕಂಗನಾ ರಣಾವತ್ ನಟನೆಯ ಚಿತ್ರ ‘ಎಮರ್ಜೆನ್ಸಿ’ ಕಳೆದ ವರ್ಷ ನವೆಂಬರ್ 24 ರಂದು ಬಿಡುಗಡೆಯಾಗಬೇಕಿತ್ತು. ಆದರೆ ಈಗ ಈ ಚಿತ್ರವು ಜೂನ್ 14 ರಂದು ಥಿಯೇಟರ್‌ಗಳಿಗೆ ಬರಲಿದೆ. ಇದರಲ್ಲಿ ಅನುಪಮ್ ಖೇರ್, ಮಹಿಮಾ ಚೌಧರಿ, ಮಿಲಿಂದ್ ಸೋಮನ್, ಶ್ರೇಯಸ್ ತಲ್ಪಾಡೆ ಮತ್ತು ದಿವಂಗತ ನಟ ಸತೀಶ್ ಕೌಶಿಕ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದಕ್ಕೂ ಮೊದಲು ಕಂಗನಾ ರಣಾವತ್ ಅಭಿನಯದ ‘ತೇಜಸ್’ ಚಿತ್ರ ಬಿಡುಗಡೆಯಾಗಿತ್ತು. ಆದರೆ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಹೇಳಿಕೊಳ್ಳುವಷ್ಟು ಯಶಸ್ಸು ಕಾಣಲಿಲ್ಲ.
‘ಶ್ರೀರಾಮ ಮತ್ತು ರಾಷ್ಟ್ರದ ವಿಚಾರದಲ್ಲಿ ರಾಜಿಯಿಲ್ಲ; ಕಾಂಗ್ರೆಸ್‌ನಿಂದ ಉಚ್ಚಾಟಿತರಾದ ನಂತರ ಆಚಾರ್ಯ ಪ್ರಮೋದ್ ಕೃಷ್ಣಂ ಮೊದಲ ಪ್ರತಿಕ್ರಿಯೆ

ರಾಹುಲ್ ಜೊತೆ ಮದುವೆಯಾಗಲು ಕಂಡೀಷನ್ ಹಾಕಿದ್ದ, ಸದಾ ವಿವಾದದಿಂದ ಸುದ್ದಿಯಾಗುವ ಈ ಚೆಲುವೆ ಬಗ್ಗೆ ನಿಮಗೆಷ್ಟು ಗೊತ್ತು?

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:5 + twenty =
Remember me
