ನವದೆಹಲಿ:ದೆಹಲಿಯ ಕೆಂಪುಕೋಟೆಯ ಲವ್ ಕುಶ್ ರಾಮಲೀಲಾ ಮೈದಾನದಲ್ಲಿ ಅದ್ದೂರಿಯಾಗಿ ವಿಜಯದಶಮಿಯನ್ನು ಆಚರಿಸಲಾಯಿತು. ಈ ವೇಳೆ ನಟಿ ಕಂಗನಾ ರಣಾವತ್ ರಾವಣನ ಪ್ರತಿಕೃತಿಗೆ ಬೆಂಕಿ ಹಚ್ಚಲು ಪ್ರಯತ್ನಿಸುವ ಮೂಲಕ ನೆರೆದವರ ಗಮನಸೆಳೆದರು.
ನಟಿ ಕಂಗನಾ ರಣಾವತ್ ಕೆಂಪು ಕೋಟೆಯಲ್ಲಿ ದೆಹಲಿಯ ಪ್ರಸಿದ್ಧ ಲವ್ ಕುಶ ರಾಮಲೀಲಾದಲ್ಲಿ ರಾವಣನ ಪ್ರತಿಕೃತಿಯನ್ನು ದಹಿಸಲು ಬಾಣ ಬಿಡಲು ಪ್ರತ್ನಿಸಿದ್ದಾರೆ. ಈ ಘಟನೆಯ 50 ವರ್ಷಗಳ ಇತಿಹಾಸದಲ್ಲಿ ಮೊದಲ ಮಹಿಳೆಯಾಗಿದ್ದಾರೆ.
ಕಳೆದ 50 ವರ್ಷಗಳಲ್ಲಿ ರಾವಣನ ದಹನವನ್ನು ಪುರುಷರೇ ಮಾಡುತ್ತಾ ಬರುತ್ತಿದ್ದರು. ಈ ವರ್ಷ ಕಂಗನಾ ಅವರಿಗೆ ಅವಕಾಶ ನೀಡಲಾಯಿತು. ಆದರೆ, ಅವರಿಂದ ಇದು ಸಾಧ್ಯವಾಗಿಲ್ಲ. ಅವರು ಮೂರು ಬಾರಿ ಪ್ರಯತ್ನಿಸಿದರೂ ಬಾಣ ಬಿಡಲು ಬರಲೇ ಇಲ್ಲ. ಸದ್ಯ ಈ ವಿಚಾರ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗುತ್ತಿದೆ.
#WATCH| Delhi: Bollywood actor Kangana Ranaut attends 'Ravan Dahan' at Red Fort#Dussehrapic.twitter.com/skbsc2Pj4T
— ANI (@ANI)October 24, 2023

ಕಂಗನಾ ಅವರು ಟ್ರೆಡಿಷನಲ್ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ. ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಹಾಗೂ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಕೂಡ ಇದ್ದರು. ಅವರು ಬಿಲ್ಲನ್ನು ಕೈಗೆ ಎತ್ತಿಕೊಂಡಿದ್ದಾರೆ. ಬಾಣ ಬಿಡಲು ನೋಡಿದರೂ ಅದು ಸಾಧ್ಯವಾಗಿಲ್ಲ. ಆಗ ಕಂಗನಾ ನಕ್ಕಿದ್ದಾರೆ. ಬೇರೆಯವರು ಬಾಣ ಬಿಟ್ಟಿದ್ದಾರೆ. ಆ ಬಳಿಕ ಅವರು ‘ಜೈ ಶ್ರೀ ರಾಮ್’ ಎಂದು ಕೂಗಿದ್ದಾರೆ.
ಕೆಂಪು ಕೋಟೆಯ ರಾಮಲೀಲಾ ಮೈದಾನದಲ್ಲಿ ಪ್ರತೀ ವರ್ಷ ರಾವಣನ ಪ್ರತಿಕೃತಿ ದಹನ ಮಾಡುವ ಮೂಲಕ ವಿಜಯದಶಮಿಯನ್ನು ಆಚರಿಸಲಾಗುತ್ತದೆ. ಹೀಗೆ 50 ವರ್ಷಗಳ ಇತಿಹಾಸದಲ್ಲಿ ಮಹಿಳೆಯೊಬ್ಬರು ರಾವಣನ ಪ್ರತಿಕೃತಿಗೆ ಬೆಂಕಿ ಹಚ್ಚಿದ್ದು ಇದೇ ಮೊದಲು ಎಂದು ದೆಹಲಿಯ ಲವ್ ಕುಶ್ ರಾಮಲೀಲಾ ಸಮಿತಿಯ ಅಧ್ಯಕ್ಷ ಅರ್ಜುನ್ ಸಿಂಗ್ ಹೇಳಿದ್ದಾರೆ.
Reel Life Kangana Vs Real Life Kangana 😂😂Saheb ki cheli 😁🤫Kangana Ranaut claims she does stunts better than Tom Cruise😂😂🤡🤡Neither here nor there…the arrow did not fire.No problem…well only truth can kill untruth.#Dussehra#KanganaRanaut
Wish you all a very Happy…pic.twitter.com/OucRpO9ECf
— 𝑺𝒖𝒎𝒊𝒕 𝑺𝒊𝒏𝒈𝒉 𝑹𝒂𝒋𝒑𝒖𝒕 (@BeingSumit007)October 25, 2023

ಕಂಗನಾ ರಣಾವತ್ ತಮ್ಮ ತೇಜಸ್ ಸಿನಿಮಾದ ಪ್ರಚಾರದಲ್ಲಿದ್ದಾರೆ. ಅದು ಅಕ್ಟೋಬರ್ 27 ರಂದು ಬಿಡುಗಡೆಯಾಗಲಿದೆ. ಈ ಚಲನಚಿತ್ರವು ಭಾರತೀಯ ಸೈನಿಕರ  ಜೀವನವನ್ನು ಆಧರಿಸಿದೆ.
ಹುಲಿ ಉಗುರಿನ ಪ್ರಕರಣ: ಬಿದನಗೆರೆಯ ಶನಿಮಹಾತ್ಮ ದೇವಾಲಯದ ಧನಂಜಯ ಗುರೂಜಿಗೆ ಎದುರಾಯ್ತು ಸಂಕಷ್ಟ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 3 =
Remember me
