ನವದೆಹಲಿ:ಚಿತ್ರರಂಗ ಹಾಗೂ ರಾಜಕೀಯ ನಡುವಿನ ಸಂಬಂಧ ದೀರ್ಘಕಾಲದಾಗಿದ್ದು, ಹಲವು ನಟ-ನಟಿಯರು ಅದೃಷ್ಟ ಪರೀಕ್ಷೆಗಿಳಿದು ಸೋಲು-ಗೆಲುವನ್ನು ಕಂಡಿದ್ದಾರೆ. ಇದೀಗ ಈ ಸಾಲಿಗೆ ಹೊಸದಾಗಿ ಸೇರ್ಪಡೆಯಾಗಿರುವುದು ಬಾಲಿವುಡ್​ ನಟಿ ಕಂಗನಾ ರಣಾವತ್​. ಇದನ್ನು ಸ್ವತಃ ಕಂಗನಾ ಅವರ ತಂದೆ ಅಮರ್​ದೀಪ್​ ಅವರೇ ಖಚಿತಪಡಿಸಿದ್ದಾರೆ.
ನಟಿ ಕಂಗನಾ ರಣಾವತ್ ತಮ್ಮ ತೀಕ್ಷ್ಣ ವ್ಯಕ್ತಿತ್ವಕ್ಕೆ ಹೆಸರುವಾಸಿಯಾಗಿದ್ದಾರೆ. ಅದು ರಾಜಕೀಯ ಅಥವಾ ಸಾಮಾಜಿಕವಾಗಿರಲಿ ಪ್ರತಿ ವಿಷಯದಲ್ಲೂ ತಮ್ಮ ಅಭಿಪ್ರಾಯವನ್ನು ಬಹಿರಂಗವಾಗಿ ವ್ಯಕ್ತಪಡಿಸುತ್ತಾರೆ. ಕಂಗನಾಗೆ ರಾಜಕೀಯ ಪ್ರವೇಶದ ಬಗ್ಗೆ ಪದೇ ಪದೇ ಪ್ರಶ್ನೆಗಳನ್ನು ಕೇಳಲಾಗುತ್ತಿತ್ತು. ಇಲ್ಲಿಯವರೆಗೂ ಆಕೆ ಅದನ್ನು ನಿರಾಕರಿಸುತ್ತಲೇ ಬಂದಿದ್ದಾರೆ. ಆದರೆ, ಈ ಬಾರಿ ಅವರು ಸಕಾರಾತ್ಮಕ ಪ್ರತಿಕ್ರಿಯೆ ಕೇಳಿ ಬಂದಿದೆ.
ಇದನ್ನೂ ಓದಿ:ನಾಯಕತ್ವದಿಂದ ರೋಹಿತ್​ ಶರ್ಮಾಗೆ ಕೊಕ್; ಮುಂಬೈ ಇಂಡಿಯನ್ಸ್​ ಕೊಟ್ಟ ಸ್ಪಷ್ಟನೆ ಹೀಗಿತ್ತು
ಈ ಕುರಿತು ಮಾತನಾಡಿರುವ ಅಮರ್​ದೀಪ್​ ರಣಾವತ್, ಮಗಳು 2024 ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ ಎಂದು ಹೇಳಿದ್ದರು. ಆದರೆ, ಯಾವ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎನ್ನುವುದನ್ನು ಹೇಳಿರಲಿಲ್ಲ. ಈ ಕುರಿತಂತೆ ನಡ್ಡಾ ಜೊತೆ ಕಂಗನಾ ಮಾತನಾಡಿದ್ದಾರೆ. ಮುಂದಿನ ದಿನಗಳಲ್ಲಿ ಎಲ್ಲವೂ ತಿಳಿಯಲಿದೆ ಎಂದು ಕಂಗನಾ ತಂದೆ ಅಮರ್​ದೀಪ್​ ತಿಳಿಸಿದ್ದಾರೆ.
ಈ ಹಿಂದೆ ದ್ವಾರಕಾಗೆ ಭೇಟಿ ನೀಡಿದ್ದ ನಟಿ ಕಂಗನಾ ಶ್ರೀಕೃಷ್ಣ ಆಶೀರ್ವದಿಸಿದರೆ ಎಲೆಕ್ಷನ್​ನಲ್ಲಿ ಸ್ಪರ್ಧಿಸುವುದಾಗಿ ಪರೋಕ್ಷವಾಗಿ ಚುನಾವಣಾ ರಾಜಕೀಯಕ್ಕೆ ಎಂಟ್ರಿ ಕೊಡುವುದಾಗಿ ಸುಳಿವು ನೀಡಿದ್ದರು. ಬಿಜೆಪಿ ಸರ್ಕಾರದ ಸತತ ಪ್ರಯತ್ನದಿಂದಾಗಿ 600 ವರ್ಷಗಳ ಹೋರಾಟದ ಬಳಿಕ, ಭಾರತೀಯರಾದ ನಾವುಗಳು ಈ ದಿನವನ್ನು ಎದುರು ನೋಡುತ್ತಿದ್ದೇವೆ. ವಿಜೃಂಭಣೆಯಿಂದ ನಾವು ಅಲ್ಲಿ ದೇವಸ್ಥಾನವನ್ನು ಸ್ಥಾಪಿಸುತ್ತಿದ್ದೇವೆ. ಸನಾತನ ಧರ್ಮದ ಧ್ವಜವು ಪ್ರಪಂಚದಾದ್ಯಂತ ಹಾರಿಸಬೇಕು ಎಂದು ನಟಿ ಹೇಳಿದ್ದರು.
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:two × two =
Remember me
