ಮುಂಬೈ:ಬಾಲಿವುಡ್​ ಹಾಗೂ ರಾಜಕೀಯ ವ್ಯಕ್ತಿಗಳ ಕುರಿತು ಆಗ್ಗಾಗ್ಗೆ ಬಹಿರಂಗವಾಗಿ ಕಟುಟೀಕೆ ಮಾಡುವ ನಟಿ ಕಂಗನಾ ರಣಾವತ್​ ಅವರ ಹಳೆ ಟ್ವೀಟ್​ ಈಗ ಭಾರೀ ವೈರಲ್​ ಆಗುತ್ತಿದೆ.
ಹಿಂದೊಮ್ಮೆ ಮುಂಬೈಯಲ್ಲಿರುವ ಕಂಗನಾ ಕಚೇರಿ ಕಟ್ಟಡವನ್ನು ಅಲ್ಲಿನ ಪಾಲಿಕೆ ನೆಲಸಮಗೊಳಿಸಿತ್ತು. ಈ ವೇಳೆ ರೊಚ್ಚಿಗೆದ್ದ ಕಂಗನಾ ಮುಖ್ಯಮಂತ್ರಿ ಉದ್ಧವ್​ ಠಾಕ್ರೆ ವಿರುದ್ಧ ಟ್ವೀಟ್​ ಮೂಲಕ ಟೀಕಿಸಿದ್ದರು.
ಇದೀಗ ಮಹಾರಾಷ್ಟ್ರದಲ್ಲಿ ಸೃಷ್ಟಿಯಾಗಿರುವ ಬಿಕ್ಕಟ್ಟಿಗೂ, ಕಂಗನಾ ಅಂದು ನೀಡಿದ್ದ ಹೇಳಿಕೆಗೂ ಸಾಮ್ಯತೆ ಇರುವುದರಿಂದ ಈ ವಿಡಿಯೋ ಈಗ ಭಾರೀ ವೈರಲ್​ ಆಗುತ್ತಿದೆ. ಕಂಗನಾ ಅಂದು ಹೇಳಿದ್ದ ಮಾತು ಇಂದು ನಿಜವಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಈ ವಿಷಯ ಭಾರೀ ಸದ್ದು ಮಾಡುತ್ತಿದೆ.
#UddhavThackareyOnly#KanganaRanauthas the power to predict 🙄pic.twitter.com/IaatY1Dpgr
— Biraja Prasad Rath (@iambiraja)June 22, 2022

ಸದ್ಯ ಈಗ ಮಹಾರಾಷ್ಟ್ರ ಸರ್ಕಾರ ಇಕ್ಕಟ್ಟಿನಲ್ಲಿ ಸಿಲುಕಿದ್ದು, ಶಿವಸೇನೆ ಮುಖ್ಯಸ್ಥ ಉದ್ಧವ್​ ಠಾಕ್ರೆ ಅವರು ಬಾಂದ್ರಾದ ಮಲಬಾರ್​​ ಹಿಲ್​ನಲ್ಲಿರುವ ಖಾಸಗಿ ನಿವಾಸಕ್ಕೆ ಕುಟುಂಬ ಸಮೇತ ತೆರಳಿದ್ದಾರೆ. ಇದು ಈಗ ಕಂಗನಾ ಅವರ ಹೇಳಿಕೆಯನ್ನೇ ಹಿಡಿದು ಟ್ವಿಟ್ಟಿಗರು ಉದ್ಧವ್​ ಠಾಕ್ರೆ ಸ್ಥಿತಿಗೂ ಯಾವುದೇ ಭಿನ್ನವಿಲ್ಲ ಎಂದು ಪ್ರತಿಕ್ರಿಯಿಸುತ್ತಿದ್ದಾರೆ.
ಅಕ್ರಮ ನಿರ್ಮಾಣದ ಆರೋಪದ ಮೇಲೆ ಮಣಿಕರ್ಣಿಕಾ ಕಚೇರಿಯನ್ನು ಕೆಡವಿದ್ದೀರಿ, ಇಂದು ನನ್ನ ಮೆನೆ ಮುರಿದಿದೆ, ನಾಳೆ ನಿನ್ನ ಅಹಂಕಾರವೂ ಮುರಿಯಲಿದೆ ಎಂದು ನೇರವಾಗಿಯೇ ಅಸಮಾಧಾನ ಹೊರಹಾಕಿದ್ದರು. ಸದ್ಯ ಜಾಲತಾಣದಲ್ಲಿ ಈ ವಿಡಿಯೋ ಭಾರೀ ವೈರಲ್​ ಆಗುತ್ತಿದೆ.(ಏಜೆನ್ಸೀಸ್​)
ಬಳ್ಳಾರಿ ಪಾಲಿಕೆಯಲ್ಲಿ ಹೈಡ್ರಾಮಾ: ಕಮಿಷನರ್​ಗೆ ಕನ್ನಡದಲ್ಲೇ ಮಾತಾಡಿ ಮೇಡಂ ಎಂದು ಪಾಲಿಕೆ ಸದಸ್ಯರಿಂದ ತರಾಟೆ

ಸರ್ಜರಿಯಿಂದ ಬ್ರೆಜಿಲ್​ನ ಮಾಡೆಲ್​​ ಸಾವು: 27ನೇ ವಯಸ್ಸಿಗೆ ಬದುಕಿಗೆ ವಿದಾಯ ಹೇಳಿದ ಚೆಲುವೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 − 3 =
Remember me
