ನವದೆಹಲಿ:ಮಾರ್ಗಸೂಚಿಗಳನ್ನು ಉಲ್ಲಂಘಿಸಲಾಗಿದೆ ಎಂಬ ಕಾರಣ ನೀಡಿ ಬಾಲಿವುಡ್​ ನಟಿ ಕಂಗನಾ ರಣಾವತ್‌ ಅವರ ಖಾತೆಯನ್ನು ಟ್ವಿಟರ್​ ಕೆಲ ಕಾಲ ಅಮಾನತ್ತಿನಲ್ಲಿ ಇಟ್ಟಿದೆ.
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕುರಿತು ಸರಣಿ ಟ್ವೀಟ್​ ಮಾಡಿದ್ದ ಕಂಗನಾ, ಮಮತಾ ಕುರಿತು ಆಕ್ಷೇಪಾರ್ಹ ಕಾಮೆಂಟ್​ ಮಾಡಿದ್ದಾರೆ. ಮೇ 2ರಂದು ಹೊರಬಿದ್ದ ಪಶ್ಚಿಮ ಬಂಗಾಳ ಚುನಾವಣಾ ಫಲಿತಾಂಶ ಬಳಿಕ ಬಂಗಾಳದಲ್ಲಿ ಉಂಟಾಗಿರುವ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಮಮತಾರನ್ನು ಟೀಕಿಸಿ ಕಂಗನಾ ಟ್ವೀಟ್​ ಮಾಡಿದ್ದರು.

ಫಲಿತಾಂಶದಲ್ಲಿ ಮಮತಾ ನೇತೃತ್ವದ ಟಿಎಂಸಿ ಗೆದ್ದ ಬೆನ್ನಲ್ಲೇ ಬಂಗಾಲದಲ್ಲಿ ರಾಷ್ಟ್ರಪತಿ ಆಡಳಿತಕ್ಕೆ ಕಂಗನಾ ಒತ್ತಾಯಿಸಿದ್ದರು. ಅಲ್ಲದೆ, ಮಮತಾರನ್ನು ರಾಕ್ಷಸಿಗೆ ಹೋಲಿಸಿ ಕಂಗನಾ ಟ್ವೀಟ್​ ಮಾಡಿದ್ದರು. ಬಿಜೆಪಿ ಗೆಲುವು ಸಾಧಿಸಿದ ಅಸ್ಸಾಂ ಮತ್ತು ಪುದುಚೇರಿಯಲ್ಲಿ ಯಾವುದೇ ಹಿಂಸಾಚಾರ ನಡೆಯುತ್ತಿಲ್ಲ. ಆದರೆ, ನೂರಾರ ಕೊಲೆಗಳು ಟಿಎಂಸಿ ಗೆದ್ದ ಬಳಿಕ ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿದೆ ಎಂದು ದೂಷಿಸಿ ಬಂಗಾಳ ಸುಡುತ್ತಿದೆ (#Bengalisburning) ಎಂದು ಟ್ವೀಟ್​ ಮಾಡಿದ್ದರು.
ವಿರಾಟ ರೂಪವನ್ನು ಉಪಯೋಗಿಸಿ ಮಮತಾ ಬ್ಯಾನರ್ಜಿ ಅವರನ್ನು ಪಳಗಿಸಿ ಎಂದು ಪ್ರಧಾನಿ ಮೋದಿಯನ್ನು ಕಂಗನಾ ಕೇಳಿಕೊಂಡಿದ್ದಾರೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 + 5 =
Remember me
