ಮುಂಬೈ:ಅಕ್ರಮವಾಗಿ ನಿರ್ಮಿಸಲಾಗಿದೆ ಎಂದು ಮುಂಬೈ ಮಹಾನಗರ ಪಾಲಿಕೆ ನನ್ನ ಕಚೇರಿಯ ಒಂದು ಭಾಗವನ್ನು ನೆಲಸಮ ಮಾಡಿದ್ದು, ಇದರಿಂದ ನನಗೆ ಅವಮಾನ ಆಗಿದೆ ಎಂದಿರುವ ಬಾಲಿವುಡ್​ ನಟಿ ಕಂಗನಾ ರಣಾವುತ್​ ಇದೀಗ ಪರಿಹಾರಕ್ಕಾಗಿ ಆಗ್ರಹಿಸಿದ್ದಾರೆ.
ಕೇಂದ್ರ ಸಚಿವ ರಾಮದಾಸ್​ ಅಠಾವಳೆ ಅವರು ಗುರುವಾರ ಮುಂಬೈನಲ್ಲಿ ಕಂಗನಾ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಈ ಬಗ್ಗೆ ಮಾತನಾಡಿರುವ ಸಚಿವರು, ಸುಮಾರು 1 ಗಂಟೆ ಅವರೊಂದಿಗೆ ಮಾತನಾಡಿದೆ. ಮುಂಬೈನಲ್ಲಿ ಇರಲು ಯಾವುದೇ ಭಯವಿಟ್ಟುಕೊಳ್ಳಬೇಡಿ ಎಂದು ಹೇಳಿದ್ದೇನೆ. ಮುಂಬೈ ದೇಶದ ಆರ್ಥಿಕ ರಾಜಧಾನಿ ಮತ್ತು ಇಲ್ಲಿ ವಾಸಿಸಲು ಎಲ್ಲರಿಗೂ ಹಕ್ಕಿದೆ ಎಂದು ಸಚಿವರು, ನಮ್ಮ ಆರ್​ಪಿಐ (ರಿಪಬ್ಲಿಕನ್​ ಪಾರ್ಟಿ ಆಫ್​ ಇಂಡಿಯಾ) ಪಕ್ಷವು ಸದಾ ನಿಮಗೆ ಬೆಂಬಲವಾಗಿರಲಿದೆ ಎಂದು ಹೇಳಿದರು.
ಇದನ್ನೂ ಓದಿ:ಪತಿ ಅಂಗಡಿಯಲ್ಲಿ, ಅತ್ತೆ-ಮಾವ ದೇವಸ್ಥಾನದಲ್ಲಿ, ಇತ್ತ ಮನೆಯಲ್ಲಿ ಒಂಟಿಯಾಗಿದ್ದ ಮಹಿಳೆಗೆ ಕಾದಿತ್ತು ಶಾಕ್​
ಕಚೇರಿ ನೆಲಸಮ ಘಟನೆಯಿಂದ ಕಂಗನಾಗೆ ಅವಮಾನ ಆಗಿದೆಯಂತೆ. ಕಳೆದ ಜನವರಿಯಲ್ಲಷ್ಟೇ ನಿರ್ಮಿಸಿದ ಅವಳ ಕಚೇರಿ ಇದೀಗ ಹಾನಿಯಾಗಿದೆ. ಕಟ್ಟಡ ನಿರ್ಮಾಣಕಾರರು 2-3 ಇಂಚು ಹೆಚ್ಚಿನ ಜಾಗದಲ್ಲಿ ನಿರ್ಮಿಸಿದ್ದಾರೆಂಬುದು ಅವರಿಗೆ ತಿಳಿದಿರಲಿಲ್ಲವಂತೆ. ಅಕ್ರಮ ಭಾಗವನ್ನು ಮಾತ್ರ ಬಿಎಂಸಿ ನೆಲಸಮ ಮಾಡಬೇಕಿತ್ತು. ಆದರೆ, ಕಚೇರಿ ಒಳಗಿನ ಗೋಡೆ ಮತ್ತು ಫರ್ನಿಚರ್​ಗಳಿಗೂ ಹಾನಿಯಾಗಿವೆ. ಈ ಬಗ್ಗೆ ಕಂಗನಾ ನ್ಯಾಯಾಲಯ ಮೆಟ್ಟಿಲೇರಲಿದ್ದು, ಪರಿಹಾರಕ್ಕಾಗಿ ಬೇಡಿಕೆ ಇಡಲಿದ್ದಾರೆಂದರು.
ಬಿಎಂಸಿಯು ಕಂಗನಾಗೆ ತೀವ್ರ ಅನ್ಯಾಯ ಮಾಡಿದೆ ಮತ್ತು ಪ್ರತೀಕಾರದಿಂದ ವರ್ತಿಸಿದೆ ಎಂದು ನಾನು ಅವಳಿಗೆ ಹೇಳಿದೆ. ಯಾವುದೇ ಅನುಮೋದನೆಯನ್ನು ಪಡೆಯದೇ ಬಿಎಂಸಿ ತಂಡ ಬುಲ್ಡೋಜರ್​ ಮತ್ತು ಎಕ್ಸ್​ಕ್ಯಾವೆಟರ್ಸ್​ ಉಪಯೋಗಿಸಿ ಕಟ್ಟಡವನ್ನು ಹಾನಿಗಳಿಸಿದೆ ಎಂದು ಸಚಿವರು ಆರೋಪಿಸಿದ್ದಾರೆ.
ಆದರೆ, ದಾಖಲಾತಿ ಸಲ್ಲಿಸಲು ನೀಡಿದ್ದ 24 ಗಂಟೆ ಅವಧಿಯಲ್ಲಿ ಕಂಗನಾ ವಿಫಲರಾಗಿದ್ದಾರೆ. ಹೀಗಾಗಿ ಕಚೇರಿಯ ಅಕ್ರಮ ಭಾಗವನ್ನು ಧ್ವಂಸ ಮಾಡಲಾಯಿತು ಎಂದು ಬಿಎಂಸಿ ಮೇಯರ್​ ಸಮರ್ಥನೆ ನೀಡಿದ್ದಾರೆ.(ಏಜೆನ್ಸೀಸ್​)
ಕಂಗನಾ ಕಚೇರಿ ನೆಲಸಮ ವಿರುದ್ಧ ನೆಟ್ಟಿಗರ ಆಕ್ರೋಶ: ಟ್ವಿಟರ್​ನಲ್ಲಿ ಟ್ರೆಂಡ್​ ಆದ ಹ್ಯಾಶ್​ಟ್ಯಾಗ್​ಗಳಿವು…​

ಶಿವಸೇನಾ ಈಗ ಸೋನಿಯಾ ಸೇನಾ ಆಗಿದೆ … ಕಂಗನಾ ಆರೋಪ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 + six =
Remember me
