ಬೆಂಗಳೂರು:ಕಳೆದ ಕೆಲವು ದಿನಗಳಿಂದ ನಾನಾ ವಿವಾದಗಳಿಂದ ಸುದ್ದಿಯಲ್ಲಿರುವ, ಮಹಾರಾಷ್ಟ್ರ ಸರ್ಕಾರದ ವಿರುದ್ಧ ಕದನಕ್ಕಿಳಿದಿರುವ ಹಾಗೂ ವಿವಾದಾತ್ಮಕ ಹೇಳಿಕೆಗಳಿಂದ ತಮ್ಮ ವಿರುದ್ಧ ದಾಖಲಾಗಿರುವ ಕೇಸ್​ಗಳ ವಿರುದ್ಧ ಹೋರಾಡುತ್ತಿರುವ ಬಾಲಿವುಡ್ ನಟಿ ಕಂಗನಾ ರಣಾವತ್ ಇದೀಗ ಯುದ್ಧ ಎಂದರೇನು ಎಂಬುದನ್ನು ವ್ಯಾಖ್ಯಾನಿಸಿದ್ದಾರೆ.
ನಿಮ್ಮ ಎದುರಾಳಿ ಎಷ್ಟು ಶಕ್ತಿಶಾಲಿ ಎಂಬುದರ ಮೇಲೆ ಯುದ್ಧದ ಗತಿ ಬದಲಾಗುವುದಿಲ್ಲ. ಯುದ್ಧ ಇರುವುದು ನಿಮ್ಮ ಎದುರಾಳಿಯನ್ನು ಪರೀಕ್ಷಿಸುವುದಕ್ಕಲ್ಲ. ನಿಮ್ಮ ನಿಜವಾದ ಸ್ವಭಾವ, ಸಾಮರ್ಥ್ಯವನ್ನು ನಿಮಗೆ ತಿಳಿಸಲಿಕ್ಕೆಂದೇ ಯುದ್ಧ ಇರುವುದು. ಅಂಥ ಯುದ್ಧದಲ್ಲಿ ಎದುರುಗಡೆ ಯಾರಿದ್ದಾರೆ ಎಂಬುದು ಮುಖ್ಯವೇ ಅಲ್ಲ, ನಿಮ್ಮೊಳಗೆ ಯಾರಿದ್ದಾರೆ ಎಂಬುದೇ ಯುದ್ಧದಲ್ಲಿ ಅತಿಮುಖ್ಯವಾದದ್ದು ಎಂದು ಕಂಗನಾ ಹೇಳಿದ್ದಾರೆ.
ಪತ್ರಕರ್ತ ಅರ್ನಾಬ್​ ಗೋಸ್ವಾಮಿ ಅವರನ್ನು ಮಹಾರಾಷ್ಟ್ರ ಪೊಲೀಸರು ಬಂಧಿಸಿರುವ ಪ್ರಕರಣದ ಸಂದರ್ಭದಲ್ಲೇ ಕಂಗನಾ ನೀಡಿರುವ ಈ ಯುದ್ಧದ ವ್ಯಾಖ್ಯಾನ ಕುತೂಹಲ ಕೆರಳಿಸಿದೆ.
https://twitter.com/KanganaTeam/status/1324317149939212289?s=20
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − seven =
Remember me
