ಮುಂಬೈ:ಬಾಲಿವುಡ್​ ಪ್ರಖ್ಯಾತ ಗಾಯಕಿ ಕನ್ನಿಕಾ ಕಪೂರ್ ಅವರಿಗೆ​ ಕರೊನಾ ಸೋಂಕು ತಗುಲಿರುವುದಾಗಿ ವರದಿಯಾಗಿದೆ. ಈ ಮೂಲಕ ಕಿಲ್ಲರ್​ ಕರೊನಾ ಸೋಂಕಿಗೆ ಗುರಿಯಾದ ಮೊದಲ ಸೆಲೆಬ್ರಿಟಿ ಎನಿಸಿಕೊಂಡಿದ್ದಾರೆ.
ಸೋಂಕಿನ ಬಗ್ಗೆ ಸ್ವತಃ ಕನ್ನಿಕಾ ಕಪೂರ್​ ಅವರೇ ಇನ್​ಸ್ಟಾಗ್ರಾಂನಲ್ಲಿ ಖಚಿತಪಡಿಸಿದ್ದಾರೆ. ಕಳೆದ ನಾಲ್ಕು ದಿನಗಳಿಂದ ನಾನು ಜ್ವರದಿಂದ ಬಳಲುತ್ತಿದ್ದೆ. ಬಳಿಕ ಪರೀಕ್ಷೆಗೆ ಒಳಗಾದಾಗ ಕೋವಿಡ್​-19 ಪಾಸಿಟಿವ್​ ವರದಿ ಬಂದಿದೆ. ಇದೀಗ ನಾನು ಮತ್ತು ನನ್ನ ಕುಟುಂಬ ಸಂಪೂರ್ಣ ಪ್ರತ್ಯೇಕವಾಗಿದ್ದು, ವೈದ್ಯಕೀಯ ಸಲಹೆಯನ್ನು ಅನುಸರಿಸುತ್ತಿದ್ದೇವೆ. ನಾನು ಸಂಪರ್ಕದಲ್ಲಿದ್ದ ಜನರ ಮ್ಯಾಪಿಂಗ್​ ಸಹ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.
ಕಾಯಿಲೆಯ ಲಕ್ಷಣಗಳು ಇದ್ದರೆ ಪರೀಕ್ಷೆಗೆ ಒಳಗಾಗಿ ಮತ್ತು ಪ್ರತ್ಯೇಕವಾಗಿ ಜೀವಿಸಲು ಅಭ್ಯಾಸ ಮಾಡಿಕೊಳ್ಳಿ ಎಂದು ಈ ಸಮಯದಲ್ಲಿ ನಾನು ನಿಮ್ಮೆಲ್ಲರನ್ನು ಒತ್ತಾಯಿಸುತ್ತೇನೆ. ಮಾಮೂಲಿ ಜ್ವರದಂತೆ ನಾನೀಗ ಆರಾಮವಾಗಿದ್ದೇನೆ. ಯಾವುದೇ ವದಂತಿಗೆ ಕಿವಿಗೊಟ್ಟು ಭಯಭೀತರಾಗಬೇಡಿ. ಪರಿಣಿತ ವೈದ್ಯರ ಸಲಹ ಹಾಗೂ ಕೇಂದ್ರ ಸರ್ಕಾರ ನೀಡಿರುವ ಮಾರ್ಗಸೂಚಿಗಳನ್ನು ಅನುಸರಿಸಿ. ಎಲ್ಲರಿಗೂ ಒಳ್ಳೆಯ ಆರೋಗ್ಯ ಸಿಗಲೆಂದು ಬಯಸುವುದಾಗಿ ಕನ್ನಿಕಾ ಕಪೂರ್​ ಹೇಳಿದ್ದಾರೆ.
ಸದ್ಯ ಭಾರತದಲ್ಲಿ ಕರೊನಾ ಸೋಂಕಿತರ ಪ್ರಕರಣ 200ರ ಗಡಿ ದಾಟಿದ್ದು, ಓರ್ವ ಇಟಲಿಯನ್​ ಪ್ರಜೇ ಸೇರಿದಂತೆ 5 ಮಂದಿ ಬಲಿಯಾಗಿದ್ದಾರೆ.(ಏಜೆನ್ಸೀಸ್​)
ಕರೊನಾ ಸೋಂಕಿನ ಬಗ್ಗೆ ಭಯವೇ?: ವೃಷಭ ರಾಶಿಯವರು ಹೀಗೆ ಮಾಡಿದರೆ ಬೇಸರದೊಂದಿಗೆ ಕಷ್ಟವೂ ಕರಗಲಿದೆ ನೋಡಿ…

https://www.instagram.com/p/B98tXqnFqE2/
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:16 − thirteen =
Remember me
