ಲಖನೌ:ಯಾಕೋ ಬಾಲಿವುಡ್​ ಪ್ರಖ್ಯಾತ ಸಿಂಗರ್​ ಕನ್ನಿಕಾ ಕಪೂರ್​ ಅವರನ್ನು ಕರೊನಾ ವೈರಸ್​ ಬಿಡುವಂತೆ ಕಾಣುತ್ತಿಲ್ಲ. ಈವರೆಗೂ ಎದುರಿಸಿದ ನಾಲ್ಕು ಪರೀಕ್ಷೆಗಳಲ್ಲೂ ಕನ್ನಿಕಾರಿಗೆ ಕರೊನಾ ಪಾಸಿಟಿವ್​ ಫಲಿತಾಂಶ ವರದಿಯಾಗಿರುವುದು ಕುಟುಂಬಕ್ಕೆ ಆಘಾತವಾಗಿದೆ.
ಮಾರ್ಚ್​ 9ರಂದು ಲಂಡನ್​ನಿಂದ ಮುಂಬೈಗೆ ಮರಳಿದ ಕನ್ನಿಕಾ ಕಾನ್ಪುರ ಮತ್ತು ಲಖನೌಗೆ ಪ್ರಯಾಣ ಬೆಳೆಸಿ ಮನೆಯಲ್ಲಿ ಉಳಿದಿದ್ದರು. ಅದಾದ ಕೆಲವೇ ದಿನಗಳಲ್ಲಿ ಕೆಮ್ಮು ಮತ್ತು ಜ್ವರ ಲಕ್ಷಣಗಳು ಕಾಣಿಸಿಕೊಳ್ಳಲು ಆರಂಭವಾಯಿತು. ಮಾರ್ಚ್​ 20ರಂದು ಆಸ್ಪತ್ರೆಗೆ ದಾಖಲಾದ ಕನ್ನಿಕಾರಿಗೆ ಕರೊನಾ ಸೋಂಕು ತಗುಲಿರುವುದು ದೃಢವಾಗಿತ್ತು.
ಇದಾದ ಬೆನ್ನಲ್ಲೇ ಲಂಡನ್​ನಿಂದ ಮರಳಿದ ಬಳಿಕ ಕ್ವಾರಂಟೈನ್​ನಲ್ಲಿ ಇರದೆ ಪಾರ್ಟಿಗಳಲ್ಲಿ ಭಾಗವಹಿಸಿದ್ದ ಅವರನ್ನು ಸಾಮಾಜಿಕ ಜಾಲತಾಣದಲ್ಲಿ ತರಾಟೆಗೆ ತೆಗದುಕೊಂಡರು. ಅಲ್ಲದೆ, ಕರೊನಾ ನಿರ್ಲಕ್ಷಿಸಿದ್ದಕ್ಕೆ ಕನ್ನಿಕಾ ವಿರುದ್ಧ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಸೂಚನೆಯಂತೆ ಪ್ರಕರಣ ಕೂಡ ದಾಖಲಾಯಿತು.
ಸದ್ಯ ಲಖನೌದಲ್ಲಿರುವ ಸಂಜಯ್​ ಗಾಂಧಿ ಪೋಸ್ಟ್​ ಗ್ರಾಜ್ಯುಯೇಟ್​ ಇನ್ಸ್ಟಿಟ್ಯೂಟ್ ಆಫ್​ ಮೆಡಿಕಲ್​ ಸೈನ್ಸ್​(ಎಸ್​ಜಿಪಿಜಿಐಎಂಎಸ್​​) ಹಾಸ್ಪಿಟಲ್​ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆಸ್ಪತ್ರೆಯ ಆಡಳಿತ ಮಂಡಳಿ ಜತೆಯೂ ಕಿರಿಕ್​ ಮಾಡಿಕೊಂಡಿರುವ ಕನ್ನಿಕಾ ಟೀಕೆಗೆ ಗುರಿಯಾಗಿದ್ದರು.(ಏಜೆನ್ಸೀಸ್​)
2ನೇ ಪರೀಕ್ಷೆಯಲ್ಲೂ ಕನ್ನಿಕಾಗೆ ಕರೊನಾ ಕಂಟಕ: ವರದಿ ತಪ್ಪು ಎಂದಿದ್ದ ಪಾಲಕರಿಗೆ ವಿಷಯ ಕೇಳಿ ಶಾಕ್​

ಕರೊನಾ ಸೋಂಕಿತ ಬಾಲಿವುಡ್​ ಸಿಂಗರ್​ ಕನ್ನಿಕಾ ಇದ್ದಕ್ಕಿದ್ದಂತೆ ಇನ್​ಸ್ಟಾಗ್ರಾಂ ಪೋಸ್ಟ್​ ಡಿಲೀಟ್​ ಮಾಡಿದ್ದೇಕೆ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight + 15 =
Remember me
