ಲಖನೌ:ಸೋಮವಾರ ಎರಡನೇ ಬಾರಿ ನಡೆದ ಕೋವಿಡ್​-19 ಪರೀಕ್ಷೆಯಲ್ಲೂ ಬಾಲಿವುಡ್​ ಪ್ರಖ್ಯಾತ ಸಿಂಗರ್​ ಕನ್ನಿಕಾ ಕಪೂರ್​ಗೆ ಪಾಸಿಟಿವ್​ ವೈರಸ್​ ಸೋಂಕು ಇರುವುದು ಧೃಡಪಟ್ಟಿದೆ.
ಕನಿಕಾ ಕಪೂರ್​ ರಕ್ತದ ಮಾದರಿಯನ್ನು ಸಂಜಯ್​ ಗಾಂಧಿ ಪೋಸ್ಟ್​ ಗ್ರಾಜ್ಯುಯೇಟ್​ ಇನ್ಸ್ಟಿಟ್ಯೂಟ್ ಆಫ್​ ಮೆಡಿಕಲ್​ ಸೈನ್ಸ್​(ಎಸ್​ಜಿಪಿಜಿಐಎಂಎಸ್​​) ಹಾಸ್ಪಿಟಲ್​ನಲ್ಲಿ ಪರೀಕ್ಷಿಸಲಾಯಿತು. ಗಾಯಕಿಯ ಕುಟುಂಬದವರು ಪ್ರಾಥಮಿಕ ಪರೀಕ್ಷಾ ವರದಿಯ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಕ್ಕೆ ಮತ್ತೊಮ್ಮೆ ಪರೀಕ್ಷೆ ನಡೆಸಲಾಯಿತು.​ ಸದ್ಯ ಕನ್ನಿಕಾ ಆರೋಗ್ಯ ಸ್ಥಿತಿ ಸ್ಥಿರವಾಗಿದೆ.
ನನಗೆ ನೀಡಿರುವ ಕೊಠಡಿ ಕೊಳಕಾಗಿದೆ ಮತ್ತು ಸೊಳ್ಳೆಗಳು ತುಂಬಿವೆ ಎಂದು ಕನ್ನಿಕಾ ಮಾಡಿದ್ದ ಆರೋಪವನ್ನು ಅಲ್ಲಗೆಳೆದಿರುವ ಎಸ್​ಜಿಪಿಜಿಐಎಂಎಸ್ ನಿರ್ದೇಶಕ ಡಾ. ಆರ್​.ಕೆ. ಧೀಮನ್​, ಆಕೆಗೆ ಉತ್ತಮವಾದ ಸೌಲಭ್ಯವನ್ನು ನೀಡಲಾಗಿದೆ ಎಂದು ಸ್ಪಷ್ಟನೆ ನೀಡಿದ್ದು, ಆಸ್ಪತ್ರೆಯ ಸಿಬ್ಬಂದಿ ಪ್ರತಿ ನಾಲ್ಕು ಗಂಟೆಗೆ ಒಮ್ಮೆ ಆಕೆಯ ಕೊಠಡಿಯನ್ನು ಶುಚಿಗೊಳಿಸುತ್ತಾರೆ. ಕನಿಕಾ ಆರೋಪ ಆಧಾರಹಿತ ಎಂದು ಹೇಳಿದರು.
ಹಾಸ್ಪಿಟಲ್​ ಕಿಚನ್​ನಿಂದಲೇ ಕನ್ನಿಕಾರಿಗೆ ಆಹಾರವನ್ನು ನೀಡಲಾಗುತ್ತಿದೆ. ಶೌಚಗೃಹ, ಬೆಡ್​ ಮತ್ತು ಟಿವಿ ಒಳಗೊಂಡಂತೆ ಪ್ರತ್ಯೇಕ ಕೊಠಡಿಯನ್ನು ಒದಗಿಸಲಾಗಿದೆ. ವೆಂಟಿಲೇಷನ್​ ಕೂಡ ಸರಿಯಾಗಿದ್ದು, ಸಾಧ್ಯವಾದಷ್ಟು ಗಮನವನ್ನು ಅವರೆಡೆಗೆ ಕೊಡಲಾಗುತ್ತಿದೆ. ಆದರೆ, ಸ್ಟಾರ್​ ಎಂಬುದನ್ನು ಮರೆತು ರೋಗಿಯ ರೀತಿ ವರ್ತಿಸುವುದನ್ನು ಮೊದಲು ಕಲಿಯಬೇಕಿದೆ ಎಂದು ಸಲಹೆ ನೀಡಿದ್ದಾರೆ.
ಕನ್ನಿಕಾ ಹತ್ತು ದಿನಗಳ ಹಿಂದೆ ಯುಕೆ ಇಂದ ಭಾರತಕ್ಕೆ ವಾಪಾಸ್ಸಾದರು. ಮಾರ್ಚ್​ 9ರಂದು ಲಂಡನ್​ನಿಂದ ಮುಂಬೈಗೆ ಮರಳಿದ ಕನ್ನಿಕಾ ಬಳಿಕ ಕೆಲ ಕಾರ್ಯಕ್ರಮಗಳಲ್ಲಿ ಭಾಗಿಯಾಗಲು ಲಖನೌಗೆ ತೆರಳಿದರು. ಈ ಕಾರ್ಯಕ್ರಮದಲ್ಲಿ ಅನೇಕ ರಾಜಕಾರಣಿಗಳು ಸಹ ಭಾಗಿಯಾಗಿದ್ದರು. ಸೋಂಕಿನ ಬಗ್ಗೆ ಮುಚ್ಚಿಟ್ಟ ಆರೋಪದ ಮೇಲೂ ಕನ್ನಿಕಾ ವಿರುದ್ಧ ಪ್ರಕರಣ ದಾಖಲಾಗಿದೆ.(ಏಜೆನ್ಸೀಸ್​)
ಕರೊನಾ ವೈರಸ್​ ಸೋಂಕಿತ ಬಾಲಿವುಡ್​ ಗಾಯಕಿ ವಿರುದ್ಧ ವೈದ್ಯರಿಂದ ಸ್ಪೋಟಕ ಮಾಹಿತಿ ಬಹಿರಂಗ

ಬಾಲಿವುಡ್​ ಪ್ರಖ್ಯಾತ ಗಾಯಕಿಗೆ ಕರೊನಾ ಸೋಂಕು ಧೃಡ: ಕೋವಿಡ್​-19ಗೆ ಗುರಿಯಾದ ಮೊದಲ ಸೆಲೆಬ್ರಿಟಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten − 1 =
Remember me
