ಮುಂಬೈ:ಇಲ್ಲಿನ ಕನ್ನಡ ಸಂಘಗಳು ಪ್ರಕಟಿಸುತ್ತಿರುವ 9 ಮುಖವಾಣಿಗಳ ಸಂಪಾದಕರೊಂದಿಗೆ ವಿಶೇಷ ಸಂವಾದ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಒಟ್ಟು 9 ಸಂಪಾದಕರು ತಮ್ಮ ಸಂಘ-ಸಂಸ್ಥೆಗಳ ಮುಖವಾಣಿಗಳ ಹುಟ್ಟು, ಬೆಳವಣಿಗೆಯ ಬಗ್ಗೆ ಸೂಕ್ಷ್ಮವಾಗಿ, ಸರಳವಾಗಿ ಹಾಗೂ ಸಂಕ್ಷಿಪ್ತವಾಗಿ ಕಾರ್ಯಕ್ರಮದಲ್ಲಿ ತಿಳಿಸಿದರು.
ಸಂವಾದದಲ್ಲಿ ಪಾಲ್ಗೊಂಡಿದ್ದವರೂ ಸಹ ಮುಖವಾಣಿಯಲ್ಲಿನ ಎಲ್ಲ ವಿಷಯಗಳ ಬಗ್ಗೆಯೂ ಚರ್ಚೆ ನಡೆಸಿದರು. ಈ ಎಲ್ಲ ಸಂಪಾದಕರು ಪ್ರಶ್ನೆ ಪತ್ರಿಕೆಗಳ ಮೂಲಕ ತಮ್ಮ ವಿಚಾರಧಾರೆಗಳನ್ನು ವಿದ್ಯಾರ್ಥಿಗಳಿಗೆ ತಲುಪಿಸಬೇಕು ಎಂಬ ಸಲಹೆಗಳನ್ನೂ ನೀಡಿದರು.
ವಿದ್ಯುನ್ಮಾನ ಹಾಗೂ ಅಂತರ್ಜಾಲ ಮಾಧ್ಯಮಗಳೇ ಹೆಚ್ಚಾಗಿರುವ ಈ ಕಾಲದಲ್ಲಿ ವೃತ್ತಪತ್ರಿಕೆಗಳಿಗೇ ಓದುಗರು ಕಡಿಮೆಯಾಗುತ್ತಿದ್ದಾರೆ. ಇಂತಹ ಸಮಯದಲ್ಲಿ ಕಷ್ಟವಾಗಿದ್ದರೂ ಸಹ ಸಂಘ, ಸಂಸ್ಥೆಗಳ ಒಂದು ಭಾಗವಾಗಿ, ಯಾವುದೇ ಜನಾಂಗ, ಸಮಾಜಕ್ಕೆ ನೋವಾಗದಂತೆ ಮುಖವಾಣಿಗಳನ್ನು ಪ್ರಕಟಿಸುತ್ತಿರುವುದರ ಬಗ್ಗೆ ಕಾರ್ಯಕ್ರಮದಲ್ಲಿ ಅಪಾರ ಮೆಚ್ಚುಗೆ ವ್ಯಕ್ತವಾಯಿತು.
ಈ ಮುಖವಾಣಿಗಳ ಸಂಪಾದಕರು ತಮ್ಮ ಸಂಘ-ಸಂಸ್ಥೆಗಳ ಚಟುವಟಿಕೆಗಳು, ಕಾರ್ಯಕ್ರಮಗಳನ್ನು ದಾಖಲಿಸುವ ಹಾಗೂ ಅದನ್ನು ತಮ್ಮ ಸದಸ್ಯರ, ಜನಾಂಗದ ಜನರಿಗೆ ತಲುಪಿಸುವ ಉದ್ದೇಶ ಹೊಂದಿದ್ದರೂ ಸಹ, ಅದರೊಂದಿಗೆ ಸಾಂಸ್ಕೃತಿಕ, ಸಾಮಾಜಿಕ, ಸಾಹಿತ್ಯಕ, ರಾಜಕೀಯ ಮತ್ತು ಶೈಕ್ಷಣಿಕ ವಿಚಾರಗಳನ್ನೂ ನೀಡುತ್ತಿರುವುದು ತುಂಬ ವಿಶೇಷ. ಸಂಶೋಧನಾ ವಿದ್ಯಾರ್ಥಿಗಳಿಗೂ ಅನುಕೂಲ ಆಗುವ ರೀತಿಯಲ್ಲಿ ವಿಚಾರಗಳನ್ನು ಪ್ರಸ್ತುತಪಡಿಸುತ್ತಿದ್ದಾರೆ.
ಅದರಲ್ಲೂ ಸಹ ಯುವ ಸಂಪಾದಕ ಯ.ಜಯರಾಮ ಶೆಟ್ಟಿ ಅವರು ತಮ್ಮ ಸಂಘದ ಮುಖವಾಣಿಯನ್ನು ವಿಶಿಷ್ಟವಾಗಿ ಪ್ರಕಟಿಸುತ್ತಿದ್ದಾರೆ. ಸಮಾಜಕ್ಕೆ ವರವಾದ ವ್ಯಕ್ತಿಗಳ ಸಾಧನೆಯ ಮುಖವಾಣಿಯಂತೆ ಹೊರತರುತ್ತಿದ್ದಾರೆ. ಇದೊಂದು ಹೊಸ ಪ್ರಯೋಗವೆನಿಸಿದೆ. ಯಾವುದೇ ಲಾಭವನ್ನು ಬಯಸದೆ ಪತ್ರಿಕೋದ್ಯಮದಲ್ಲಿ ವಿಶೇಷ ಚಾಪು ಮೂಡಿಸುವ ಪ್ರಯತ್ನದಲ್ಲಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 − 8 =
Remember me
