ಬೆಂಗಳೂರು:‘ಎಲ್ಲಾದರೂ ಇರು ಎಂತಾದರೂ ಇರು’ ಎಂಬ ಕುವೆಂಪು ಅವರ ಮಾತಿನಂತೆ, ಕರುನಾಡಿನಿಂದ ಸರಿಸುಮಾರು 3 ಸಾವಿರ ಕಿ.ಮೀ. ದೂರದಲ್ಲಿರುವ, “ಮೋಡಗಳ ಸ್ಥಳ” ಎಂದೇ ಕರೆಯಲ್ಪಡುವ ಮೇಘಾಲಯದಲ್ಲಿ ದಿನಾಂಕ ನ. 28ರಂದು ರವಿವಾರ ಕನ್ನಡ ರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಈ ಕಾರ್ಯಕ್ರಮವನ್ನು ರಾಜಧಾನಿ ಶಿಲಾಂಗ್​ನಿಂದ 20 ಕಿ.ಮೀ. ದೂರದಲ್ಲಿರುವ ಭಾರತೀಯ ಕೃಷಿ ಅನುಸಂಧಾನ ಪರಿಷತ್​ನ ಅಂಗ ಸಂಸ್ಥೆಯಾದ ಪೂರ್ವೋತ್ತರ ಸಂಶೋಧನ ಸಂಕೀರ್ಣದ ಎಮ್.ಎಸ್ ಸ್ಪಾಮೀನಾಥನ್ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮದಲ್ಲಿ ವಿವಿಧ ಸಂಸ್ಥೆಗಳ ಮತ್ತು ಶ್ರೇಣಿಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕನ್ನಡಿಗರು ಪಾಲ್ಗೊಂಡಿದ್ದರು. ಮುಖ್ಯವಾಗಿ ಈಶಾನ್ಯ ಭಾರತ ವಾಯುಪಡೆಯ ಗ್ರೂಪ್ ಕ್ಯಾಪ್ಟನ್​ ದೀಪಕ್ ಮತ್ತು ಅವರ ಪತ್ನಿ ಡಾ. ಚಂಪಾ, ಕ್ಯಾಪ್ಟನ್ ಶಿವಕುಮಾರ್-ಸ್ವರ್ಣ ದಂಪತಿ ತುಂಬಾ ಉತ್ಸಾಹದಿಂದ ಪಾಲ್ಗೊಂಡಿದ್ದರು. ನಾಗರಿಕ ಸೇವಾ ಅಧಿಕಾರಿಗಳಾದ ಅರುಣ್ ಕುಮಾರ್ ಕೆಂಬಾವಿ, ಮೇಘಾಲಯ ಅರಣ್ಯ ಇಲಾಖೆ ಕಾರ್ಯದರ್ಶಿ ಡಾ.ಮಂಜುನಾಥ್, ಮೇಘಾಲಯ ಯೋಜನಾ ಆಯೋಗದ ಜಂಟಿ ಕಾರ್ಯದರ್ಶಿ ಗುಣಾಂಕ್, ಮಹಾ ಲೆಕ್ಕಾಧಿಕಾರಿ ಸುಬ್ಬಯ್ಯ, ಭಾರತೀಯ ಅಭಿಯಾಂತರ ಸೇವೆಯ ಡಾ.ದಶರಥ್ ಮಾಶ್ಯಲ್, NIGRIMS ಸಂಸ್ಥೆ ಮಾನಸಿಕ ವೈದ್ಯ ಡಾ.ನವೀನ್ ಆನಂದ್ ಮತ್ತು ಅವರ ಪತ್ನಿ ಸ್ತ್ರೀರೋಗ ತಜ್ಞೆ ಡಾ.ಕವಿತಾ, ಐಸಿಎಆರ್ ಕೃಷಿ ವಿಜ್ಞಾನಿ ಡಾ.ಚಿಕ್ಕತಿಮ್ಮೇಗೌಡ ಮತ್ತು ಅವರ ಪತ್ನಿ ಕೃಷಿ ವಿಜ್ಞಾನಿ ಡಾ.ಅಮೃತಾ ಪಾಲ್ಗೊಂಡಿದ್ದರು.
ಇದನ್ನೂ ಓದಿ:ಕಳವಾದ ನಾಯಿಯನ್ನು ಹನ್ನೆರಡೇ ಗಂಟೆಗಳಲ್ಲಿ ಹುಡುಕಿಕೊಟ್ಟ ಪೊಲೀಸರು; ಹುಡುಕಿಕೊಡದಿದ್ದರೆ ಎಸ್​ಪಿಗೆ ತಿಳಿಸುವುದಾಗಿ ಹೇಳಿದ್ದ ದೂರುದಾರರು
ಕೃಷಿ ವಿಜ್ಞಾನಿ ಕುಮಾರಿ ನಿವೇದಿತಾ ಅವರ ಪ್ರಾರಂಭಿಕ ಪ್ರಸ್ತಾವನೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ನಂತರ ಕನ್ನಡ ನಾಡಗೀತೆಯನ್ನು ಎಲ್ಲರೂ ಗುಂಪಿನೊಂದಿಗೆ ಹಾಡಿ ನುಡಿ ನಮನ ಸಲ್ಲಿಸಿದರು. ಕೃಷಿ ವಿಜ್ಞಾನಿ ಡಾ.ಆರ್. ಕೃಷ್ಣಪ್ಪ ಎಲ್ಲ ಸದಸ್ಯರಿಗೆ ಹೃತ್ಪೂರ್ವಕ ಸ್ವಾಗತ ಕೋರಿದರು. ಬಳಿಕ ಕನ್ನಡ ನಾಡಿನ ಸಂಸ್ಕೃತಿಯನ್ನು ಬಿಂಬಿಸಲು ವಿವಿಧ ಚಟುವಟಿಕೆಗಳನ್ನು ನಡೆಸಲಾಯಿತು. ಇದರ ಆಕರ್ಷಕ ಪ್ರಾರಂಭಿಕ ಭರತನಾಟ್ಯವನ್ನು ವಿದುಷಿ ಶಿಲ್ಪಾ ಅರುಣಕುಮಾರ ಕೆಂಭಾವಿ ಪ್ರಸ್ತುತ ಪಡಿಸಿದರು. ಆ ನಂತರ ಕನ್ನಡ ನಾಡು ನುಡಿ ಮತ್ತು ಸಂಸ್ಕೃತಿ ಕುರಿತ ರಸಪ್ರಶ್ನೆ ಕಾರ್ಯಕ್ರಮವನ್ನು ಡಾ. ಅಪೂರ್ವ ಗುಣಾಂಕ್ ನಡೆಸಿಕೊಟ್ಟರು.
ಕೇಂದ್ರೀಯ ಕೃಷಿ ವಿಶ್ವವಿದ್ಯಾಲಯ ಬಾರಾಪಾನಿ ಸ್ನಾತಕೋತ್ತರ ಕ್ಯಾಂಪಸ್ ಕೃಷಿ ವಿದ್ಯಾರ್ಥಿಗಳಾದ ಎಸ್​.ವಿ. ನಂದೀಶ, ಎಸ್​.ಎನ್​. ರವಿಪ್ರಸಾದ್, ಎಂ.ಪಿ.ಶಶಿಧರ, ಕೈಲಾಶ್ ಪಟೇಲ್ ಮತ್ತು ಎಚ್. ಜೀವನ ಅವರು ಕನ್ನಡ ಚಲನಚಿತ್ರ ಗೀತೆಗಳಿಗೆ ನೃತ್ಯ ಪ್ರದರ್ಶನ ನೀಡಿದರು. ಅಲ್ಲದೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲ ಮಕ್ಕಳು ಮತ್ತು ಮಹಿಳೆಯರಿಗೆ ವಿಶೇಷ ಮನೋರಂಜನಾ ಕ್ರೀಡೆಗಳನ್ನು ಆಯೋಜಿಸಲಾಗಿತ್ತು.
ಇದನ್ನೂ ಓದಿ:‘ಇನ್ನು ಮುಂದೆ ನಾನು ಕಣ್ಣೀರು ಹಾಕೋದಿಲ್ಲ’ ಅಂದ್ರು ಮಾಜಿ ಸಿಎಂ ಎಚ್​.ಡಿ. ಕುಮಾರಸ್ವಾಮಿ
ಅಷ್ಟೇ ಅಲ್ಲದೆ, ಪವರ್​ ಸ್ಟಾರ್ ಪುನೀತ್ ರಾಜಕುಮಾರ್ ಅವರನ್ನು ಈ ಕಾರ್ಯಕ್ರಮದಲ್ಲಿ ತುಂಬಾ ಭಾವುಕತೆಯಿಂದ ಸ್ಮರಿಸಲಾಯಿತು. ಅಪ್ಪು ಜೀವನ ಹಾಗೂ ಅವರ ಅಗಲಿಕೆಯ ಕುರಿತು ಡಾ.ಆರ್. ಕೃಷ್ಣಪ್ಪ ಮಾತನಾಡಿದರು. ಪುನೀತ್ ಅಭಿನಯದ ‘ರಾಜಕುಮಾರ’ ಚಿತ್ರದ ‘ಬೊಂಬೆ ಹೇಳುತೈತೆ’ ಗೀತೆಯನ್ನು ಎಲ್ಲ ಸದಸ್ಯರು ಗೌರವಸೂಚಕವಾಗಿ, ಭಾವುಕರಾಗಿ ಹಾಡಿದರು. ಅಂತಿಮವಾಗಿ ಪುನೀತ್ ಆತ್ಮಕ್ಕೆ ಶಾಂತಿ ಕೋರಿ ಒಂದು ನಿಮಿಷ ಮೌನಾಚರಣೆ ನಡೆಸಲಾಯಿತು. ಡಾ.ಎಚ್.ಜಿ. ಕೆಂಚರೆಡ್ಡಿ ಅವರು ವಂದನಾರ್ಪಣೆ ಸಲ್ಲಿಸಿದರು. ಈ ಸಮಾರಂಭವನ್ನು ಯಶಸ್ವಿಯಾಗಿ ನಡೆಸಲು ಅವಕಾಶ ನೀಡಿದ್ದಕ್ಕಾಗಿ ಕನ್ನಡಿಗರು ಪೂರ್ವೋತ್ತರ ಸಂಶೋಧನಾ ಸಂಕೀರ್ಣದ ನಿರ್ದೆಶಕರಾದ ಡಾ.ವಿ. ಕೆ. ಮಿರ್ಶಾ ಮತ್ತು ಆಡಳಿತಾಧಿಕಾರಿ ಸಚಿನ್ ಅವರಿಗೂ ಧನ್ಯವಾದ ಅರ್ಪಿಸಿದರು.

ಎರಡನೇ ಮದ್ವೆ ಆಗಲು ಹೆಂಡ್ತಿ-ಮಕ್ಳನ್ನು ಕೊಂದ, 11 ವರ್ಷಗಳ ಬಳಿಕ ಸಿಕ್ಕಿಬಿದ್ದ; ಈತ ತಪ್ಪಿಸಿಕೊಂಡಿದ್ದು, ಬಳಿಕ ಮಾಡಿದ್ದೆಲ್ಲ ಭಾರಿ ಕಿತಾಪತಿ!

ಜೀವಾವಧಿ ಶಿಕ್ಷೆಗೊಳಗಾಗಿದ್ದವ ನ್ಯಾಯಾಲಯಕ್ಕೆ ಹಾಜರುಪಡಿಸುವಾಗ ಪರಾರಿ; 3 ವರ್ಷಗಳ ಕಾಲ ಸಿಗದೇ ಇರಲು ಹೀಗೆ ಮಾಡಿದ್ದ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × two =
Remember me
