– ಕರುನಾಡ ಗತ್ತು ನೀವು ಮತ್ತೆ ಬರ್ತೀರ ಅಂತ ನಮಗೂ ಗೊತ್ತು– ಎಮ್ಮೆ, ಮೇಕೆ ಜೊತೆ ಕಾಣಿಸಿಕೊಂಡ ಡಾ.ಬ್ರೋ
ಬೆಂಗಳೂರು:ಡಾ. ಬ್ರೋ ಎನ್ನುವ ಹೆಸರಿನಲ್ಲಿ ಯೂಟ್ಯೂಬ್​ ಖಾತೆ ತೆರೆದು ತಮ್ಮ ವೀಕ್ಷಕರ ಅಭಿರುಚಿಗೆ ತಕ್ಕಂತೆ ದೇಶ-ವಿದೇಶ ಪ್ರವಾಸ ಮಾಡುತ್ತಾ ತನ್ನ ಪ್ರವಾಸ ವಿಡಿಯೋವನ್ನು ಹಂಚಿಕೊಳುತ್ತಿದ್ದ ಯೂಟ್ಯೂಬರ್​ ಡಾ. ಬ್ರೋ ಖ್ಯಾತಿಯ ಗಗನ್​​ ಶ್ರೀನಿವಾಸ್​ ಅವರು ಕಳೆದ ಒಂದು ತಿಂಗಳಿನಿಂದ ಯಾವುದೇ ವಿಡಿಯೋವನ್ನು ಹಂಚಿಕೊಂಡಿಲ್ಲ. ಡಾ.ಬ್ರೋ ಕಾಣೆಯಾಗಿದ್ದಾರೆ ಎನ್ನುವ ಚರ್ಚೆ ಕಳೆದ ಒಂದು ತಿಂಗಳಿನಿಂದ ಸೋಷಿಯಲ್​ ಮೀಡಿಯಾದಲ್ಲಿ ಸಾಕಷ್ಟು ಸದ್ದು ಮಾಡುತ್ತಲೇ ಇದೆ. ಆದರೆ ಕೊನೆಗೂ ಡಾ. ಬ್ರೋ ಸೋಶಿಯಲ್​​ ಮೀಡಿಯಾದಲ್ಲಿ ಮತ್ತೆ ಪ್ರತ್ಯಕ್ಷರಾಗಿದ್ದಾರೆ.
ನಮಸ್ಕಾರ ದೇವು ಎನ್ನುತ್ತಾ ತಿಂಗಳಿಗೆ ಎರಡು ವಿಡಿಯೋಗಳನ್ನು ತಮ್ಮ ಯೂಟ್ಯೂಬ್ ನಲ್ಲಿ ಅಪ್ಲೋಡ್ ಮಾಡುತ್ತಾ ಸುದ್ದಿ ಮಾಡುತ್ತಿದ್ದರು.ಕಳೆದ ಒಂದು ತಿಂಗಳಿಂದ ಯಾವುದೇ ಸೋಶಿಯಲ್ ಮೀಡಿಯಾದಲ್ಲಿಯೂ ಸಕ್ರಿಯರಾಗಿಲ್ಲ ಇದನ್ನು ಗಮನಿಸಿದಂತಹ ಸಾಕಷ್ಟು ಅಭಿಮಾನಿಗಳು ಹಾಗೂ ನೆಟ್ಟಿಗರು ಡಾ. ಬೋ ನಾಪತ್ತೆಯಾಗಿದ್ದಾರೆ ಎಂಬ ಸುದ್ದಿಯನ್ನು ಹಬ್ಬಿಸುತ್ತಿದ್ದಾರೆ. ಡಾ.ಬ್ರೋ ಕಳೆದ ನವೆಂಬರ್‌ 29 ರಂದು ವಿಡಿಯೋ ಹಂಚಿಕೊಂಡಿದ್ದೇ ಕೊನೆ ಅಲ್ಲಿಂದ ಇಲ್ಲಿವರೆಗೆ ಒಂದೇ ಒಂದು ಅಪ್ಡೇಟ್‌ ಅವರ ಸಾಮಾಜಿಕ ಜಾಲತಾಣದ ಅಕೌಂಟ್‌ನಿಂದ ಹೊರಬಂದಿಲ್ಲ.
A post shared by Dr Bro | Gagan Srinivas (@drbrokannada)
ಸ್ಟಾರ್‌ ಸ್ಪೋರ್ಟ್ಸ್‌ ಕನ್ನಡಕ್ಕೆ ಅಸೈನ್‌ಮೆಂಟ್‌ಗಳಲ್ಲಿ ಡಾ. ಬ್ರೋ ಬಿಜಿಯಾಗಿದ್ದಾರೆ. ಕ್ರಿಕೆಟ್‌ ವಿಶ್ವಕಪ್‌ನಲ್ಲಿ ಬಿಜಿಯಾಗಿದ್ದರು. ಇದಾದ ಬಳಿಕ ವಿದೇಶಗಳಿಗೆ ಹೋಗುವಾಗ ಹಲವಾರು ರೀತಿಯ ತಯಾರಿ ಮಾಡಿಕೊಳ್ಳಬೇಕಾಗಿದ್ದು, ಅವುಗಳಲ್ಲಿ ಡಾ.ಬ್ರೋ ಬಿಜಿಯಾಗಿದ್ದಾರೆ ಎಂದು ಯೂಟ್ಯೂಬ್​ಗಳಿಗೆ ಡಾ.ಬ್ರೋ ತಿಳಿಸುವ ಮೂಲಕ ಅಭಿಮಾನಿಗಳ ಮನಸ್ಸಿಗೆ ಸಮಾಧಾನ ತಂದಿದ್ದಾರೆ. ಆದರೆ ಇದರ ಮಧ್ಯೆಯೇ ತಮ್ಮ ಅಭಿಮಾನಿಗಳು ಗಾಬರಿ ಬೀಳಬಾರದು ಎನ್ನುವ ಕಾರಣಕ್ಕೆ ಹಳೆಯ ವಿಡಿಯೋಗಳ ತುಣುಕುಗಳನ್ನೇ ಗಗನ್​ ಮತ್ತೆ ಮತ್ತೆ ಶೇರ್ ಮಾಡುತ್ತಿದ್ದರು. ಇದೀಗ ಇನ್​ಸ್ಟಾಗ್ರಾಮ್​​ನಲ್ಲಿ ಕೆಲವು ಫೋಟೋ ಶೇರ್​ ಮಾಡಿದ್ದು, ಅಭಿಮಾನಿಗಳಿಗೆ ಸಖತ್​ ಖುಷಿಯಾಗಿದೆ.
ಗಗನ್‌ ಅವರು, ಮೇಕೆ, ಎಮ್ಮೆ, ಆಟೋದ ಮುಂದೆಯೂ ನಿಂತಿರುವ ಫೋಟೋ ಶೇರ್‌ ಮಾಡಿಕೊಂಡಿದ್ದಾರೆ. ನಮಸ್ಕಾರ ದೇವರುComing soon…ಎಂದು ಬರೆದುಕೊಂಡಿದ್ದಾರೆ. ಇದನ್ನು ನೋಡಿ ಡಾ.ಬ್ರೋ ಅಭಿಮಾನಿಗಳು ಕುಣಿದು ಕುಪ್ಪಳಿಸಿದ್ದಾರೆ. ನಮಸ್ಕಾರ ದೇವ್ರು Is Back, ಕರುನಾಡ ಗತ್ತು..ನೀವು ಮತ್ತೆ ಬರ್ತೀರ ಅಂತ ನಮಗೂ ಗೊತ್ತು, ನನ್ನ ದೇವ್ರು ಇಷ್ಟು ದಿನ ಎಲ್ಲಿದ್ರಿ, ನಾವು ಕಾಯುತ್ತಾ ಇದ್ದೇವೆ ನಿಮಗಾಗಿ, ಯಾಕಿಷ್ಟು ನಮ್ಮನ್ನು ವೇಟ್​​ ಮಾಡಿಸ್ತಾ ಇದ್ದೀರಾ? ಎಂದು ಡಾ. ಬ್ರೋ ಫ್ಯಾನ್ಸ್​​ ಕಾಮೆಂಟ್​​ ಮಾಡುತ್ತಿದ್ದಾರೆ.
ವಿದೇಶ ಸುತ್ತಲೂ ಇಂಗ್ಲಿಷ್​ ಬೇಕೇ ಬೇಕು ಎನ್ನುವ ಈ ಕಾಲಘಟ್ಟದಲ್ಲಿ ಅತ್ತ ಇಂಗ್ಲಿಷ್​ ಕೂಡ ಸರಿಯಾಗಿ ಬರದೇ, ಇತ್ತ ಹಿಂದಿಯೂ ಬರದೇ ಇದ್ದರೂ ವಿದೇಶಿಗರಿಗೇ ಕನ್ನಡ ಕಲಿಸಿ ಬರುತ್ತಿರುವ ಸ್ಮಾರ್ಟ್​, ಧೀಮಂತ ಹಾಗೂ ಅಪ್ರತಿಮ ಪ್ರತಿಭೇ ಡಾ. ಬ್ರೋ ಅಲಿಯಾಸ್​ ಗಗನ್​. ಡಾ. ಬ್ರೋ ಖ್ಯಾತಿಯ ಗಗನ್ ಅವರನ್ನು ಅಭಿಮಾನಿಗಳು ಮಿಸ್​​ ಮಾಡಿಕೊಳ್ಳುತ್ತಿದ್ದಾರೆ.
ನಮಸ್ಕಾರ ದೇವ್ರು ಖ್ಯಾತಿಯ ಡಾ. ಬ್ರೋ ಮಿಸ್ಸಿಂಗ್​!; ಅಭಿಮಾನಿಗಳಿಗೆ ಕೊನೆಗೂ ಸಿಕ್ತು ಉತ್ತರ

ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
Sign in to your account
Please enter an answer in digits:13 − 8 =
Remember me
