| ರಾಘವ ಶರ್ಮ ನಿಡ್ಲೆ ನವದೆಹಲಿ
ವಾರಾಣಸಿಯ ಜ್ಞಾನವಾಪಿ ಮಸೀದಿ ಆವರಣದಲ್ಲಿ ಭಾರತೀಯ ಪುರಾತತ್ವ ಸರ್ವೆಕ್ಷಣಾಲಯ (ಎಎಸ್​ಐ) ನಡೆಸಿದ ಸಮೀಕ್ಷೆಯಲ್ಲಿ ಕನ್ನಡದ ಶಾಸನಗಳು ಪತ್ತೆ ಆಗಿರುವುದರಿಂದ ಕಾಶಿ ಮತ್ತು ಕರ್ನಾಟಕದ ನಡುವಿನ ಸಂಬಂಧ, ಸಂಪರ್ಕಗಳಿದ್ದವು ಎಂಬುದಕ್ಕೆ ಮತ್ತೊಂದು ಸಾಕ್ಷ್ಯ ಸಿಕ್ಕಂತಾಗಿದೆ. ಈಗಾಗಲೇ ಕಾಶಿಯಲ್ಲಿ ಐತಿಹಾಸಿಕ ಜಂಗಮವಾಡಿ ಮಠವಿದ್ದು, ಇದು ನೂರಾರು ವರ್ಷಗಳಿಂದ ಕರ್ನಾಟಕ ಮತ್ತು ಕಾಶಿ ನಡುವಿನ ನಂಟಿಗೆ ಅಸ್ತಿತ್ವದಲ್ಲಿರುವ ಸಾಕ್ಷಿಯಾಗಿದೆ.
ಈಗ ಜ್ಞಾನವಾಪಿ ಮಸೀದಿ ಆವರಣದಲ್ಲಿ ದೊಡರಸಯ್ಯನ ಮತ್ತು ನರಸಂಣನ ಭಿಂನಹ ಎಂಬ ಹೆಸರಿನ ಶಾಸನಗಳು ಪತ್ತೆಯಾಗಿದೆ. ಅಂದರೆ, ಕರ್ನಾಟಕ ಮೂಲದ ವ್ಯಕ್ತಿಗಳು ಒಂದೋ ಇಲ್ಲಿಗೆ ಬಂದು ಹೋಗುತ್ತಿದ್ದರು ಮತ್ತು ಅವರು ಶಾಸನಗಳನ್ನು ರಚನೆ ಮಾಡಿದ್ದಾರೆ. ಅಥವಾ ಅಲ್ಲಿನ ಅರಸು ಮನೆತನದೊಂದಿಗೆ ವಾಸ್ತವ್ಯ ಹೂಡಿದ್ದ ಸಂದರ್ಭದಲ್ಲಿ ಈ ಶಾಸನಗಳನ್ನು ರಚನೆ ಮಾಡಿರಬಹುದು. ಇಂಥಾ ಹಲವು ಅನುಮಾನಗಳು ಕಾಡುತ್ತಿವೆ.
ಸಂಸ್ಕೃತ, ತೆಲುಗು, ಕನ್ನಡ, ಹಿಂದಿ, ದೇವನಾಗರಿ, ಸೇರಿ ಹಲವು ಆ ಭಾಗದಲ್ಲಿ ಚಾಲ್ತಿಯಲ್ಲಿದ್ದ ಸ್ಥಳೀಯ ಭಾಷೆಗಳ ಹಲವು ಭಾಷೆಗಳ ಶಾಸನಗಳೂ ಪತ್ತೆಯಾಗಿದ್ದು, ಇವುಗಳು ಇಲ್ಲಿ ಹಿಂದು ಮಂದಿರವಿತ್ತು ಎನ್ನುವುದರ ಧ್ಯೋತಕವಾಗಿವೆ. ತೆಲುಗು ಭಾಷೆಯಲ್ಲಿ ಸುಮಾರು 14-15 ಪದಗಳಿರುವ ಶಾಸನ ಪತ್ತೆಯಾಗಿದ್ದರೂ, ಅವುಗಳು ಸವೆದು ಹೋಗಿರುವುದರಿಂದ ಸ್ಪಷ್ಟವಾಗಿ ಕಾಣುತ್ತಿಲ್ಲ. ಒಟ್ಟು 32 ಶಾಸನಗಳು ಈ ಆವರಣದಲ್ಲಿ ಕಂಡುಬಂದಿವೆ. ಮೇಲಾಗಿ, ಅಂದಿನ ಕಾಲದ ನಾಣ್ಯಗಳೂ ಪತ್ತೆಯಾಗಿವೆ. ಹಿಂದನ ರಾಜಮನೆತನಗಳ ನಾಣ್ಯಗಳು, ಬ್ರಿಟಿಷರ ಕಾಲದಲ್ಲಿದ್ದ, ಮುಖ್ಯವಾಗಿ ರಾಣಿ ಎಲಿಜಬೆತ್ ಮುಖವಿರುವ ಈಸ್ಟ್ ಇಂಡಿಯಾ ಕಂಪನಿ ನಾಣ್ಯಗಳೂ ಕಂಡುಬಂದಿವೆ.
ಈ ಎಲ್ಲಾ ಶಾಸನಗಳು 12ರಿಂದ 17 ಶತಮಾನಗಳ ಮಧ್ಯೆ ರಚನೆಯಾದವು ಎಂದು ಎಎಸ್​ಐ ವರದಿ ನೀಡಿದ್ದು, ಹಿಂದಿದ್ದ ಪುರಾತನ ಕಟ್ಟಡಗಳನ್ನು ನಾಶ ಮಾಡಿ ಮತ್ತು ಕೆಲವನ್ನು ಇದ್ದ ಹಾಗೆಯೇ ಬಳಸಿಕೊಂಡು ಹೊಸ ಕಟ್ಟಡಗಳನ್ನು ನಿರ್ಮಾಣ ಮಾಡಲಾಯಿತು ಎಂದು ಅಭಿಪ್ರಾಯಪಟ್ಟಿದೆ. ಇಲ್ಲಿ ಹೊಸ ಕಟ್ಟಡ ಎಂದರೆ ಸದ್ಯ ಅಸ್ತಿತ್ವದಲ್ಲಿರುವ ಜ್ಞಾನವಾಪಿ ಮಸೀದಿ. ಇದನ್ನು ಔರಂಗಜೇಬ ನಿರ್ಮಾಣ ಮಾಡಿದ್ದ.
ಪತ್ತೆಯಾದ ಹಲವು ಶಾಸನಗಳು ಸವೆದು ಹೋದ ಸ್ಥಿತಿಯಲ್ಲಿವೆ. ಮತ್ತೆ ಕೆಲ ಶಾಸನಗಳ ಮೇಲೆ ಪೈಂಟ್ ಹಚ್ಚಿರುವುದರಿಂದ ಅವುಗಳ ಹಿಂದಿನ ಸ್ಥಿತಿ ಕಂಡುಕೊಳ್ಳಲು ಸಾಧ್ಯವಾಗಿಲ್ಲ. 34 ಶಾಸನಗಳಲ್ಲಿ 3 ಉತ್ತಮ ಸ್ಥಿತಿಯಲ್ಲಿವೆ. ಎಎಸ್​ಐ ನಡೆಸಿದ ಸಮಗ್ರ ಅವಲೋಕನದ ಪ್ರಕಾರ, ಕಾಶಿಗೆ ಅಂದಿನ ಕಾಲದಲ್ಲಿ ಭೇಟಿ ನೀಡುತ್ತಿದ್ದ ಭಕ್ತರು ಇಲ್ಲಿನ ಬಹುತೇಕ ಶಾಸನಗಳನ್ನು ಕಂಭಗಳ ಮೇಲೆ ರಚನೆ ಮಾಡಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಶಾಸನಗಳಲ್ಲಿ ಸಜಲ, ಆರ್ಯವತಿ, ಸಂಬಾಜಿ, ಸೋನಾಜಿ, ಮಲ್ಲನ-ಭಟ್ಲು, ನಾರಾಯಣ ಭಟ್ಲು, ಜೀವಂತದೇವ, ನಾರಾಯಣ ರಮಣ, ಪಂಡಿತ ಮಾಲಾವಿಧಾರ, ರಘುನಾಥ, ದೊಡರಸಯ್ಯ, ಕಣ್ಹ ಸೇರಿದಂತೆ ಒಟ್ಟು 14 ಹೆಸರುಗಳು ಕಂಡುಬಂದಿವೆ. ಜನಾರ್ದನ, ರುದ್ರ, ಉಮೇಶ್ವರ ಎಂಬ ದೇವರ 3 ಹೆಸರಿನ ಶಾಸನಗಳೂ ಇಲ್ಲಿವೆ. ಪರಮಾಮನಿಯಕದೇವ ಎಂಬ ಗುಣವಾಚಕ ಇಲ್ಲಿ ಪತ್ತೆಯಾಗಿದೆ.
ಮೂರು ಶಾಸನಗಳಲ್ಲಿ ಮಹಾಮುಕ್ತಿ ಮಂಟಪ ಎಂದು ಬರೆಯಲಾಗಿದ್ದು, ಮುಖ್ಯವಾಗಿ ಆ ಸ್ಥಳದಲ್ಲಿ ಭಗವಾನ್ ಈಶ್ವರನ ಅಸ್ತಿತ್ವವಿದ್ದುದನ್ನು ಸಾಕ್ಷೀಕರಿಸುತ್ತದೆ ಎಂದು ಪುರಾತತ್ವ ಸರ್ವೆಕ್ಷಣಾಲಯ ವರದಿ ನೀಡಿದೆ. ವಾಸ್ತುಶಿಲ್ಪಗಳಲ್ಲಿ ಬಳಸಲಾಗುವ ದೀಪಮೋಲಕ ಎಂಬ ಪದವೂ ಶಾಸನ ಸಂಖ್ಯೆ 18ರಲ್ಲಿದ್ದು, ಇದು ಶಿವನ ದೇಗುಲವಿದ್ದುದಕ್ಕೆ ಸಾಕ್ಷಿ ಎಂದು ತಿಳಿಸಲಾಗಿದೆ.
ಇಲ್ಲಿ ಶಾಸನಗಳನ್ನು ಮಾಡಿದ್ದರ ಉದ್ದೇಶ ವನ್ನು ಎಎಸ್​ಐ ಹೀಗೆ ಪಟ್ಟಿ ಮಾಡಿದೆ
2. ಧಾರ್ವಿುಕ ಕೆಲಸ ಮಾಡುವುದು. ಯಾವ ಮಾದರಿಯದ್ದು ಎಂಬ ಸ್ಪಷ್ಟತೆ ಇಲ್ಲ (3 ಶಾಸನಗಳು)
3. ದೀಪದ ಚಿಮಣಿ ಉರಿಸಲು ಅವಕಾಶ ಮಾಡುವುದು (1 ಶಾಸನ)
4. ನಿರಂತರ ಉರಿಯುತ್ತಲೇ ದೀಪ ಬೆಳಗಿಸುವುದು (1 ಶಾಸನ)
ದೂರಾದ ತಂದೆಯಿಂದಾಗಿ ಶಾಲೆಯಲ್ಲಿ ನಿಂದನೆ: ಪುತ್ರನಿಗಾಗಿ ದಿಟ್ಟ ನಿರ್ಧಾರ ತೆಗೆದುಕೊಂಡ ಸಾನಿಯಾ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 + eighteen =
Remember me
