ಮಧ್ಯಪ್ರಾಚ್ಯರಾಷ್ಟ್ರಗಳಲ್ಲಿ ಕರೊನಾ ಬಾಧೆ ಹೆಚ್ಚುತ್ತಿದ್ದು, ಅಧಿಕ ಸಂಖ್ಯೆಯಲ್ಲಿ ಉದ್ಯೋಗದಲ್ಲಿರುವ ಭಾರತೀಯರು, ಮುಖ್ಯವಾಗಿ ಕರಾವಳಿ ಜನರಲ್ಲಿ ಆತಂಕ ಹೆಚ್ಚಾಗಿದೆ. ಅವರಿಗೆಲ್ಲ ಊರಿನ ಚಿಂತೆ ಕಾಡುತ್ತಿದೆ.
ಕೊಲ್ಲಿ ರಾಷ್ಟ್ರಗಳ ಪರಿಸ್ಥಿತಿ ಬಹುತೇಕ ಎಲ್ಲ ಕಡೆ ಒಂದೇ ಆಗಿದೆ. ಇಲ್ಲಿ ತುರ್ತು ಕೆಲಸಗಳಿಗಾಗಿ ಮಾತ್ರ ಹೊರಗಡೆ ಬರುವ ವಾತಾವರಣ ಸೃಷ್ಟಿಯಾಗಿದೆ. ಬುಧವಾರದಿಂದ ಜನರನ್ನು ನಿಯಂತ್ರಿಸಲು ಪೊಲೀಸರ ಜತೆ ಮಿಲಿಟರಿ ಪಡೆಯನ್ನೂ ವ್ಯವಸ್ಥೆಗೊಳಿಸಲಾಗಿದೆ. ಎಲ್ಲ ರಾಷ್ಟ್ರಗಳ ಪೊಲೀಸ್ ಬಂದೋಬಸ್ತ್ ಕೂಡ
ಒಂದೇ ರೀತಿ ಇದೆ. ಸಾರ್ವಜನಿಕ ಪ್ರದೇಶಗಳಲ್ಲಿ ಜನಸಂಚಾರ ಕಡಿಮೆ ಮಾಡಲು ಆಡಳಿತ ವ್ಯವಸ್ಥೆಗಳು ಕಠಿಣ ಕ್ರಮ ಕೈಗೊಂಡಿವೆ. ಮಸ್ಕತ್​ನಲ್ಲಿ ಮೊದಲ ಪ್ರಕರಣ ದಾಖಲಾಗಿದ್ದು, ಒಮಾನ್​ನಲ್ಲಿ 192 ಪ್ರಕರಣಗಳು ವರದಿಯಾಗಿವೆ. ಇದರಲ್ಲಿ ಒಬ್ಬರು ಬುಧವಾರ ಮೃತಪಟ್ಟಿದ್ದಾರೆ. ಆದರೆ ಕರೊನಾ ಸೋಂಕು ಮತ್ತು ಸಾವಿನ ಸಂಖ್ಯೆ ಅಧಿಕ ಕಂಡುಬರುವುದು ಸೌದಿ ಅರೇಬಿಯಾದಲ್ಲಿ, ಅಲ್ಲಿ ಜನಸಂಖ್ಯೆಯೂ ಅಧಿಕ. ಕತಾರ್, ಯುಎಇ, ಬಹರೈನ್ ರಾಷ್ಟ್ರಗಳಲ್ಲಿ ಕೂಡ ದಿನಂಪ್ರತಿ ಹೊಸ ಪ್ರಕರಣಗಳು ದಾಖಲಾಗುತ್ತಿವೆ.
ಕೊಲ್ಲಿ ರಾಷ್ಟ್ರಗಳಲ್ಲಿ ಎಲ್ಲ ಚಟುವಟಿಕೆಗಳು ಸ್ತಬ್ಧವಾಗಿವೆ. ಹೋಟೆಲ್, ಅಂಗಡಿ-ಮುಂಗಟ್ಟುಗಳು ಬಂದ್ ಆಗಿವೆ. ಮಾಲ್​ಗಳು ಮಾತ್ರ ತೆರೆದಿದ್ದು, ಸಾಮಗ್ರಿ ಖರೀದಿಸಲು ಬರುವವರನ್ನು ಥರ್ಮಲ್ ಸ್ಕ್ಯಾನ್ ನಡೆಸಿ ಒಳಗಡೆ ಬಿಡಲಾಗುತ್ತಿದೆ. ಮಾಲ್​ಗಳ ಒಳಗಡೆಯೂ ತುಂಬ ಹೊತ್ತು ನಿಲ್ಲಲು ಅವಕಾಶ ನೀಡುತ್ತಿಲ್ಲ. ಹೋಟೆಲ್​ಗಳು ಬಂದ್ ಆಗಿದ್ದರೂ ಪಾರ್ಸೆಲ್ ವ್ಯವಸ್ಥೆ ಮಾಡಲಾಗಿದೆ. ಎಲ್ಲರಿಗೂ ಮನೆಯಿಂದಲೇ ಕೆಲಸ ಮಾಡುವಂತೆ ಸರ್ಕಾರ ಸೂಚಿಸಿದೆ. ರಸ್ತೆಗಳಲ್ಲಿ ಮಿಲಿಟರಿ ವ್ಯವಸ್ಥೆ ಇರುವ ಕಾರಣ ಕೆಲಸಕ್ಕೆ ಹೋಗುವವರು ತಂತಮ್ಮ ಕಂಪನಿಗಳ ಧೃಡೀಕರಣ ಪತ್ರದೊಂದಿಗೇ ಹೋಗಬೇಕು. ದೊಡ್ಡ ಆಸ್ಪತ್ರೆಗಳನ್ನು ಮಾತ್ರ ತೆರೆಯಲಾಗಿದ್ದು, ಸಣ್ಣ ಸಣ್ಣ ಆಸ್ಪತ್ರೆಗಳನ್ನು ಬಂದ್ ಮಾಡುವಂತೆ ಸರ್ಕಾರ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಬ್ಯಾಂಕ್​ಗಳು ಕೆಲಸದ ಅವಧಿ ಕಡಿಮೆ ಮಾಡಿವೆ. ಶೇ.5ರಷ್ಟು ವಾಹನಗಳೂ ರಸ್ತೆಗಿಳಿಯುತ್ತಿಲ್ಲ. ಒಂದು ಜಿಲ್ಲೆಯಿಂದ ಇನ್ನೊಂದು ಜಿಲ್ಲೆಗೆ ಹೋಗುವುದನ್ನು ನಿಷೇಧಿಸಲಾಗಿದೆ. ಆಫೀಸ್​ಗಳಲ್ಲೂ ಒಂದು ಮೀಟರ್ ಅಂತರ ಕಾಯ್ದುಕೊಳ್ಳುವಂತೆ ಮಾಡಲಾಗಿದೆ. ಎಲ್ಲ ಶಾಲಾ-ಕಾಲೇಜುಗಳಿಗೆ ರಜೆ ನೀಡಿ, ಪರೀಕ್ಷೆಗಳನ್ನು ಮುಂದೂಡಲಾಗಿದೆ. ಆನ್​ಲೈನ್ ತರಗತಿಗಳು ನಡೆಯುತ್ತಿವೆ. ಹಬ್ಬ, ಉತ್ಸವ, ಸಭೆ ಸಮಾರಂಭ ನಡೆಸದಂತೆ ನಿರ್ಬಂಧ ವಿಧಿಸಲಾಗಿದೆ. ಭಾರತದಂತೆ ಲಾಕ್​ಡೌನ್ ಮಾಡದಿದ್ದರೂ ಇಲ್ಲಿ ಜನರೇ ಸ್ವಯಂ ರಸ್ತೆಗಿಳಿಯುತ್ತಿಲ್ಲ. ಹಾಗಾಗಿ ಸಂಪೂರ್ಣ ಬಂದ್ ಆಗಿದೆ. ಪ್ರವಾಸಿಗರ ಆಕರ್ಷಣಾ ತಾಣ ದುಬೈ ಕೂಡ ಪೂರ್ಣ ಸ್ತಬ್ಧವಾಗಿದೆ. ವರ್ಲ್ಡ್ ಟ್ರೇಡ್ ಮಾರ್ಕೆಟ್ ಬಿಕೋ ಎನ್ನುತ್ತಿದೆ. ಕೊಲ್ಲಿ ರಾಷ್ಟ್ರಗಳಲ್ಲಿ ನೌಕರಿಯಲ್ಲಿ ಇರುವವರಲ್ಲಿ ಹೆಚ್ಚಿನವರು ಅವಿವಾಹಿತರು ಅಥವಾ ವಿವಾಹಿತರಾಗಿದ್ದರೂ ಏಕಾಂಗಿಯಾಗಿ ಇರುವವರು. ಅವರು ತಮಗಿಂತಲೂ ಊರಿನಲ್ಲಿರುವ ತಮ್ಮ ಕುಟುಂಬ ಸದಸ್ಯರ ಯೋಗಕ್ಷೇಮ ಬಗ್ಗೆ ಅಧಿಕ ಕಾಳಜಿ. ಹಾಗಾಗಿ ಅವರಿಗೆ ಊರಿನದ್ದೇ ಚಿಂತೆ.
ಕಳೆದ 2 ವಾರಗಳಿಂದ ಸಾರ್ವಜನಿಕರ ಓಡಾಟಕ್ಕೆ ನಿರ್ಬಂಧಗಳಿವೆ. ಹೋಟೆಲ್​ಗಳಿಂದ ಪಾರ್ಸೆಲ್​ಗಳನ್ನು ಕೊಂಡೊಯ್ಯಲಷ್ಟೇ ಅವಕಾಶ ಇದೆ. ದಿನಬಳಕೆ ವಸ್ತುಗಳ ಖರೀದಿಗೆ ಸಮಸ್ಯೆ ಆಗಿಲ್ಲ. ಕರೊನಾ ಸೋಂಕಿತರಲ್ಲಿ ಹೆಚ್ಚಿನವರು ಯುಕೆ, ಯುಎಸ್​ಎ, ಇರಾನ್​ನಿಂದ ವಾಪಸಾದವರು. ಕರೊನಾ ಸೋಂಕು ಮರಣ ಪ್ರಮಾಣ ಇತರ ದೇಶಗಳಿಗೆ ಇಲ್ಲವೇ ಇಲ್ಲವೆನ್ನುವಷ್ಟು ಕಡಿಮೆ.
| ಜಗದೀಶ ಬಂಗೇರ ಮಸ್ಕತ್ (ಮೂಡುಬಿದರೆ ನಿವಾಸಿ)
| ಡಾ ಮುಕುಂದ ನಾಯಕ್ ಮಸ್ಕತ್
ಕರೊನಾ ಮಣಿಸಲು ಆಯುರ್ವೇದ ಮೂಲಕ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಿ: ಆಯುಷ್​ ಸಚಿವಾಲಯದ ಸಲಹೆಗಳು ಹೀಗಿವೆ…

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:10 − 1 =
Remember me
