ಕಣ್ಣೂರು:ಮಗು ಸತ್ತೇ ಹೋಗಿದೆ ಅಂದುಕೊಂಡಿದ್ದರು. ಆದರೆ ಪೊಲೀಸ್​ ಅಧಿಕಾರಿಯೊಬ್ಬರು ಕೊನೇ ಕ್ಷಣದಲ್ಲಿ ಸಿಪಿಆರ್​ ಮಾಡುವ ಮೂಲಕ 9 ತಿಂಗಳ ಮಗುವಿನ ಮರುಜನ್ಮ ನೀಡಿದ್ದಾರೆ.
ಮುಹಮ್ಮದ್​ ಫಾಜಿಲ್​ ಅವರು ಕೊಲಚೇರಿಯ ಪಟ್ಟಾಯಂನಲ್ಲಿ ಹೊಸ ಪಾಸ್​ಪೋರ್ಟ್ಸ್​ ಪರಿಶೀಲನೆ ನಡೆಸುತ್ತಿದ್ದು. ಈ ವೇಳೆ ಮನೆಯೊಂದರಿಂದ ಜೋರಾಗಿ ಅಳುವ ಶಬ್ದ ಕೇಳಿಸಿತು. ತಕ್ಷಣ ಫಾಜಿಲ್​ ಅಲ್ಲಿಗೆ ಹೋದರು. ಆ ಕ್ಷಣದಲ್ಲಿ 9 ತಿಂಗಳು ಮಗು ಪ್ರಜ್ಞೆಯಿಲ್ಲದೆ ಬಿದ್ದಿತ್ತು. ಕುಟುಂಬಸ್ಥರು ಮತ್ತು ಪಾಲಕರು ಮಗು ಸತ್ತಿದೆ ಎಂದು ಭಾವಿಸಿ ಅಳುತ್ತಿದ್ದರು.
ಇದನ್ನೂ ಓದಿ:ಮದ್ವೆ ದಿನವೇ ಹೃದಯಾಘಾತಕ್ಕೆ ವಧು ಸಾವು: ನಿಲ್ಲದ ವಿವಾಹ, ಮೃತಳ ತಂಗಿಗೆ ತಾಳಿ ಕಟ್ಟಿದ ವರ!
ಎಲ್ಲರು ಅಳುತ್ತಿರುವಾಗ ಪೊಲೀಸ್​ ಅಧಿಕಾರಿ ಫಾಜಿಲ್​ ಒಂದು ಪ್ರಯತ್ನ ಮಾಡೇ ಬಿಡೋಣ ಅಂತಾ ಮಗುವಿಗೆ ಸಿಪಿಆರ್​ ಮಾಡಿದರು. ಪವಾಡ ಎಂಬಂತೆ ಮಗು ಸಿಪಿಆರ್​​ಗೆ ಸ್ಪಂದಿಸಿ, ಮತ್ತೆ ಉಸಿರಾಡಲು ಆರಂಭಿಸಿತು. ಈ ವೇಳೆ ಅಳುತ್ತಿದ್ದವರಲ್ಲ ತಕ್ಷಣ ಅಳು ನಿಲ್ಲಿಸಿ ಮಗುವನ್ನು ನೋಡಲು ಧಾವಿಸಿದರು.
ಸಿಪಿಆರ್​ ಬಳಿಕ ಮಗುವನ್ನು ತಕ್ಷಣ ಸಮೀಪದ ಆಸ್ಪತ್ರೆಗೆ ದಾಖಲಿಸಲಾಯಿತು. ಇದೀಗ ಮಗು ಚೇತರಿಸಿಕೊಳ್ಳುತ್ತಿದೆ. ಸಮಯ ಪ್ರಜ್ಞೆ ಮೆರೆದ ಫಾಜಿಲ್​ಗೆ ಪೊಲೀಸ್​ ಇಲಾಖೆ ಸೇರಿದಂತೆ ಕೇರಳದ ಜನರು ಮೆಚ್ಚುಗೆಯ ಮಹಾಪೂರವನ್ನೇ ಹರಿಸುತ್ತಿದ್ದಾರೆ.(ಏಜೆನ್ಸೀಸ್​)
7.9 ಲಕ್ಷ ರೂ. ಖರ್ಚು ಮಾಡಿ ವಿಶ್ವದಲ್ಲೇ ಅತಿ ದೊಡ್ಡ ತುಟಿ ಪಡೆದ ಯುವತಿ!

ಸಲಿಂಗ ಕಾಮದ ಅನುಭವವಿದೆಯೇ? ನೆಟ್ಟಿಗನ ಪ್ರಶ್ನೆಗೆ ಅನಸೂಯ ಕೊಟ್ಟ ಬೋಲ್ಡ್​ ಉತ್ತರ ವೈರಲ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − 5 =
Remember me
