ಕಾನ್ಪುರ:ಕರೊನಾ ವೈರಸ್​ ಹರಡುವಿಕೆಯ ವೇಗ ತಗ್ಗುತ್ತಿದೆ ಎಂದು ನೆಮ್ಮದಿಯ ಉಸಿರು ಬಿಡುತ್ತಿರುವ ನಡುವೆಯೇ, ಹಲವು ಕಡೆಗಳಲ್ಲಿ ಇದು ರೌದ್ರಾವತಾರ ತೋರುತ್ತಿರುವ ಘಟನೆಗಳು ಅಲ್ಲಲ್ಲಿ ವರದಿಯಾಗುತ್ತಿವೆ.ಇದಕ್ಕೆ ಒಂದು ಉದಾಹರಣೆ ಉತ್ತರ ಪ್ರದೇಶದ ಕಾನ್ಪುರ. ಇಲ್ಲಿ 53 ಮಕ್ಕಳ ದೇಹವನ್ನು ಈ ಮಹಾಮಾರಿ ಹೊಕ್ಕಿದ್ದು, ಪಟ್ಟಣದ ಜನರನ್ನು ಆತಂಕಕ್ಕೀಡು ಮಾಡಿದೆ.ಸಾಮೂಹಿಕವಾಗಿ ಎಲ್ಲಿಯೂ ಸೇರಬಾರದು ಎಂಬ ನಿರ್ಬಂಧಗಳ ನಡುವೆಯೂ ಅಲ್ಲಲ್ಲಿ ಗುಂಪುಗೂಡುವುದು ನಡೆದೇ ಇದೆ. ಇದರ ಪರಿಣಾಮವಾಗಿಯೇ ಇಂಥದ್ದೊಂದು ಘಟನೆ ಸಂಭವಿಸಿದೆ ಎನ್ನಲಾಗಿದೆ. ಏಕೆಂದರೆ ಈ ಎಲ್ಲಾ ಮಕ್ಕಳು ಒಟ್ಟಾಗಿ ಮದರಾಸಾದಲ್ಲಿ ಸೇರಿದ್ದರು.ಅನ್ವರ್​ಜಂಗ್​ ಬಳಿ ಇರುವ ಕೌಲ್​ ಬಜಾರ್​ನ ಮದಾರಾಸಕ್ಕೆ ಈ ಮಕ್ಕಳು ಹೋದ ಕಾರಣ, ಕರೊನಾ ಸೋಂಕು ಬಾಧಿಸಿದೆ ಎಂದು ವರದಿಯಾಗಿದೆ. ಮೂರು ಪ್ರತ್ಯೇಕ ಮದರಸಾಗಳಿಗೆ ಈ ಮಕ್ಕಳು ಹೋಗಿದ್ದರು. ಎಲ್ಲಾ ಮದರಸಾಗಳಿಗೆ ಹೋಗ ಮಕ್ಕಳಿಗೂ ಕರೊನಾ ಪಾಸಿಟಿವ್​ ಬಂದಿರುವ ಹಿನ್ನೆಲೆಯಲ್ಲಿ ಜನರು ಕಂಗಾಲಾಗಿ ಹೋಗಿದ್ದಾರೆ.ಈ ಎಲ್ಲಾ ಮಕ್ಕಳು 10 ರಿಂದ 20 ವರ್ಷ ಒಳಗಿನವರು.ಉತ್ತರ ಪ್ರದೇಶದಲ್ಲಿ ಇಲ್ಲಿಯವರೆಗೆ ಒಟ್ಟು 1,843 ಪ್ರಕರಣಗಳು ದಾಖಲಾಗಿದ್ದು, ಒಬ್ಬರೂ ಗುಣಮುಖರಾಗಿಲ್ಲ. 29 ಮಂದಿ ಈಗಾಗಲೇ ಮೃತಪಟ್ಟಿದ್ದಾರೆ.(ಏಜನ್ಸೀಸ್​)
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:one × three =
Remember me
