ಕಾನ್ಪುರ:ಇಲ್ಲಿನ 8 ಪೊಲೀಸರ ಹತ್ಯೆ ಪ್ರಕರಣದ ತನಿಖೆ ಚುರುಕಾಗಿ ಸಾಗುತ್ತಿದ್ದು, ನಿನ್ನೆ ಪೊಲೀಸರು ಪ್ರಮುಖ ಆರೋಪಿ, ಗ್ಯಾಂಗ್​ಸ್ಟರ್​ ವಿಕಾಸ್​ ದುಬೆಯ ಸಹಚರ ದಯಾ ಶಂಕರ್​ ಅಗ್ನಿಹೋತ್ರಿಯನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಿದ್ದಾರೆ.
ವಿಕಾಸ್​ ದುಬೆಗೆ ಪೊಲೀಸ್​ ವಲಯದಲ್ಲೇ ಹಲವು ಜನರ ಹಿಂಬಾಲಕರು ಇದ್ದಾರೆ. ಬಂಧನದ ಮಾಹಿತಿಯನ್ನು ಚೌಬೆಪುರ ಪೊಲೀಸ್ ಠಾಣೆಯಿಂದಲೇ ಕರೆ ಮಾಡಿ ತಿಳಿಸಲಾಗಿತ್ತು. ಹಾಗಾಗಿ ಮೊದಲೇ ವಿಕಾಸ್​ ದುಬೆ ತನ್ನ ಜನರನ್ನು, ಮಾರಕಾಸ್ತ್ರಗಳನ್ನು ಸಿದ್ಧಪಡಿಸಿದ್ದ ಎಂದು ಅಗ್ನಹೋತ್ರಿ ತಿಳಿಸಿದ್ದ.
ಇದೀಗ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೂವರು ಪೊಲೀಸ್ ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ. ಇಬ್ಬರು ಸಬ್​ ಇನ್ಸ್​ಪೆಕ್ಟರ್​ಗಳು ಹಾಗೂ ಓರ್ವ ಪೇದೆಯನ್ನು ಸಸ್ಪೆಂಡ್​ ಮಾಡಿ ಆದೇಶ ಹೊರಡಿಸಲಾಗಿದೆ. ಸಬ್​ ಇನ್ಸ್​​ಪೆಕ್ಟರ್​​ಗಳಾದ ಕನ್ವರ್​ಪಾಲ್​, ಕೃಷ್ಣಕುಮಾರ್​ ಶರ್ಮಾ ಮತ್ತು ಪೇದೆ ರಾಜೀವ್​ ಎಂಬುವರನ್ನು ಕರ್ತವ್ಯ ಲೋಪದ ಆರೋಪದಡಿ ಅಮಾನತು ಮಾಡಲಾಗಿದೆ. ವಿಚಾರಣೆಯನ್ನೂ ಪ್ರಾರಂಭಿಸಲಾಗಿದೆ ಎಂದು ಕಾನ್ಪುರ ಎಸ್​ಎಸ್​ಪಿ ದಿನೇಶ್​ ಕುಮಾರ್​ ತಿಳಿಸಿದ್ದಾರೆ.ಇದನ್ನೂ ಓದಿ:ಎಂಟು ಪೊಲೀಸರನ್ನು ಕೊಂದ ವಿಕಾಸ್​ ದುಬೆಯದ್ದು ಮನೆಯಲ್ಲ, ಮದ್ದುಗುಂಡಿನ ಕಾರ್ಖಾನೆ; ಇಡೀ ಪ್ರದೇಶ ಸ್ಫೋಟಕ್ಕೆ ಸಂಚು
8 ಪೊಲೀಸರ ಹತ್ಯೆ ಪ್ರಕರಣದ ವಿಚಾರಣೆಯಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಸ್ವತಃ ಗಮನಹರಿಸುತ್ತಿದ್ದಾರೆ. ಈಗಾಗಲೇ ಚೌಬೇಪುರ ಠಾಣಾಧಿಕಾರಿ ವಿನಯ್​ ತಿವಾರಿ ಎಂಬುವರನ್ನು ಅಮಾನತು ಮಾಡಿ, ವಿಚಾರಣೆಗೆ ಒಳಪಡಿಸಲಾಗಿದೆ. ಈ ಪೊಲೀಸ್​ ಎನ್​ಕೌಂಟರ್​ ಪ್ರಕರಣವನ್ನು ಬಗೆದಷ್ಟೂ ಪೊಲೀಸ್​ ಸಿಬ್ಬಂದಿಯ ಕಾಲಬುಡಕ್ಕೇ ಬರುತ್ತಿದೆ. ಅದಿನ್ನೆಷ್ಟು ಜನರ ಕೈವಾಡ ಇದೆಯೋ ಎಂಬ ಅನುಮಾನ ವ್ಯಕ್ತವಾಗಿದೆ. (ಏಜೆನ್ಸೀಸ್​)
ಪೊಲೀಸರ ಹತ್ಯೆಗೈದ ನನ್ನ ಮಗನನ್ನು ಹೊಡೆದುರುಳಿಸಿ- ಗ್ಯಾಂಗ್​ಸ್ಟರ್ ದುಬೆಯ ಅಮ್ಮ

ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:19 − 14 =
Remember me
