ಕಾನ್ಪುರ: ಇಲ್ಲಿ ನಡೆದ ಎಂಟು ಪೊಲೀಸರ ಎನ್​ಕೌಂಟರ್​ ಪ್ರಕರಣದ ತನಿಖೆ ನಡೆಸಿದಷ್ಟೂ ಪೊಲೀಸರೇ ಸಿಕ್ಕಿಬೀಳುತ್ತಿದ್ದಾರೆ.ಈಗಾಗಲೇ ನಾಲ್ವರು ಪೊಲೀಸರು ಅಮಾನತುಗೊಂಡಿದ್ದಾರೆ. ಚೌಬೇಪುರ ಠಾಣೆಯಿಂದಲೇ ವಿಕಾಸ್​ ದುಬೆಗೆ ಮಾಹಿತಿ ರವಾನೆಯಾಗಿತ್ತು ಎಂಬ ವಿಷಯ ತನಿಖಾಧಿಕಾರಿಗಳಿಗೆ ಗೊತ್ತಾಗಿದ್ದು, ಅದರ ಅನ್ವಯ ಸುಮಾರು 200 ಪೊಲೀಸರ ಕಾಲ್​ ಡಿಟೇಲ್ಸ್​ಗಳನ್ನು ಪರಿಶೀಲಿಸಲು ಅವರು ಮುಂದಾಗಿದ್ದಾರೆ.
ಇದೀಗ ಮತ್ತೊಂದು ಮಹತ್ವದ ಬೆಳವಣಿಗೆಯಾಗಿದ್ದು, ಸ್ಪೆಶಲ್​ ಟಾಸ್ಕ್​ ಫೋರ್ಸ್​ನ ಡಿಐಜಿ ಅನಂತ್​ ದೇವ್​ ಅವರನ್ನು ಆ ಸ್ಥಾನದಿಂದ ತೆಗೆದುಹಾಕಲಾಗಿದೆ. ಅವರು ಮೊರದಾಬಾದ್​ ವಲಯದ ಡಿಐಜಿಯಾಗಿ ತೆರಳಲಿದ್ದಾರೆ.
ಅನಂತ್​ ದೇವ್​ಗೆ ಕಳೆದ ತಿಂಗಳಷ್ಟೇ ಡಿಐಜಿ ಆಗಿ ಪ್ರಮೋಶನ್​ ಸಿಕ್ಕಿತ್ತು. ವಿಕಾಸ್​ ದುಬೆಯ ಸಹಚರರಿಂದ ಮೃತರಾದ ಡಿಎಸ್​ಪಿ ದೇವೇಂದ್ರ ಮಿಶ್ರಾ ಅವರು ಈ ಹಿಂದೆಯೇ ಚೌಬೆಪುರ ಠಾಣಾಧಿಕಾರಿ ವಿನಯ್​ ತಿವಾರಿಗೆ ಗ್ಯಾಂಗ್​ಸ್ಟರ್​ ವಿಕಾಸ್​ ದುಬೆಯೊಂದಿಗೆ ಸಂಪರ್ಕ ಇದೆ ಎಂದು ಅನಂತ್​ ದೇವ್​ ಅವರಿಗೆ ಪತ್ರ ಬರೆದಿದ್ದರು. ಆದರೆ ದೇವ್​ ಆ ಬಗ್ಗೆ ಯಾವುದೇ ಕ್ರಮವನ್ನೂ ಕೈಗೊಂಡಿರಲಿಲ್ಲ ಎಂಬುದು ತನಿಖೆಯಿಂದ ಗೊತ್ತಾಗಿದೆ. ಆದರೆ ಪೂರ್ತಿ ಸತ್ಯ ಇನ್ನೂ ಗೊತ್ತಾಗಬೇಕಾಗಿರುವ ಕಾರಣ ಅವರನ್ನು ಬೇರೆ ಕಡೆಗೆ ವರ್ಗಾಯಿಸಲಾಗಿದೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.ಇದನ್ನೂ ಓದಿ:ಹಿರಿಯ ನಟಿ ಜಯಂತಿ ಆರೋಗ್ಯದಲ್ಲಿ ಏರುಪೇರು: ಐಸಿಯುವಿನಲ್ಲಿ ಚಿಕಿತ್ಸೆ
ಸಾವಿಗೂ ಒಂದು ವಾರದ ಹಿಂದೆ ಮಿಶ್ರಾ ಬರೆದ ಪತ್ರ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್​ ಆಗುತ್ತಿದ್ದು, ಆ ಪತ್ರವನ್ನು ಕೂಲಂಕುಷವಾಗಿ ಪರಿಶೀಲನೆ ಮಾಡುವ ಸಲುವಾಗಿ ತಂಡವೊಂದು ರಚನೆಯಾಗಿದೆ. ಇದಕ್ಕೆಂದೇ ಐಜಿಯನ್ನೂ ನೇಮಕ ಮಾಡಿಕೊಳ್ಳಲಾಗಿದೆ.(ಏಜೆನ್ಸೀಸ್​)
ಅತ್ಯಂತ ವೇಗವಾಗಿ ಕಾರು ಓಡಿಸುತ್ತಿದ್ದವನ ತಡೆದ ಪೊಲೀಸ್​; ಆತ ಹೇಳಿದ ಹಾವಿನ ವಿಷಯ ಕೇಳಿ ಬೆಚ್ಚಿಬಿದ್ದರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:6 + 7 =
Remember me
