ಕಾನ್ಪುರ:ಎಂಟು ಪೊಲೀಸರ ಹತ್ಯೆ ನಡೆಸಿ ತಲೆ ಮರೆಸಿಕೊಂಡಿರುವ ಮೋಸ್ಟ್​ ವಾಂಟೆಡ್​ ಕ್ರಿಮಿನಲ್​ ವಿಕಾಸ್​ ದುಬೆಗಾಗಿ ಕಳೆದ ಮೂರು ದಿನಗಳಿಂದ ಶೋಧ ನಡೆಯುತ್ತಲೇ ಇದೆ.
ಬಂಧಿತನಾಗಿರುವ ಆತನ ಸಹಚರ ನೀಡಿರುವ ಮಾಹಿತಿ ಮೇರೆಗೆ ಪೊಲೀಸರಿಂದಲೇ ಆತನಿಗೆ ದಾಳಿಯ ವಿಷಯ ಮುಟ್ಟಿತ್ತು. ಹೀಗಾಗಿ ಪೊಲೀಸರು ಮನೆಗೆ ಬರುವ ಮುನ್ನವೇ ಪ್ರತಿದಾಳಿ ನಡೆಸಲು ಆತ ಸಿದ್ಧತೆ ಮಾಡಿಕೊಂಡಿದ್ದ.
ಇದನ್ನೂ ಓದಿ;ಧರಾಶಾಯಿಯಾಯ್ತು ಬಿಗ್​ ಬಿ ಮನೆಯ 43 ವರ್ಷಗಳ ಇತಿಹಾಸ…!
ಇಷ್ಟಕ್ಕೂ ಆತನಿದ್ದದ್ದು ಬರೀ ಮನೆಯಾಗಿರಲಿಲ್ಲ. ಅದೊಂದು ಮದ್ದುಗುಂಡುಗಳ ಮಿನಿ ಕಾರ್ಖಾನೆಯಾಗಿತ್ತು ಎಂದೇ ಪೊಲೀಸರು ಹೇಳಿದ್ದಾರೆ. ಆತನ ಮನೆಯಿಂದ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಎರಡು ಕೆಜಿ ಸ್ಫೋಟಕಗಳು, ಆರು ನಾಡ ಪಿಸ್ತೂಲ್​ಗಳು, 25 ಕಾಟ್ರಿಡ್ಜ್​ಗಳು ದೊರೆತಿವೆ.
ಮನೆಯಲ್ಲೇ ಬಾಂಬ್​ ತಯಾರಿಕೆ:ವಿಕಾಸ್​ ದುಬೆ ಮನೆಯಲ್ಲೇ ಬಾಂಬ್​ ತಯಾರಿಸುತ್ತಿದ್ದ. ಇದಕ್ಕಾಗಿ ಸ್ಫೋಟಕಗಳೊಂದಿಗೆ ಭಾರಿ ಪ್ರಮಾಣದಲ್ಲಿ ಕಬ್ಬಿಣದ ಮೊಳೆಗಳನ್ನು ಸಂಗ್ರಹಿಸಿಟ್ಟಿದ್ದ. ಇಡೀ ಪ್ರದೇಶವನ್ನೇ ಬಾಂಬ್​ನಿಂದ ಉಡಾಯಿಸುವುದು ಆತನ ಉದ್ದೇಶವಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ. ಈತ ಹಾಗೂ ಸಹಚರರು ಪೊಲೀಸರ ಮೇಲೆ ಎಕೆ-47 ನಂಥ ಶಸ್ತ್ರಾಸ್ತ್ರಗಳಿಂದ ದಾಳಿ ನಡೆಸಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ;ಎದುರು ಬಂದವರ ಧರ್ಮ ಕೇಳಿ ಕೊಂದರು; ಶವಗಳನ್ನು ಚರಂಡಿಗೆಸೆದರು; ಪ್ರತ್ಯಕ್ಷದರ್ಶಿಗಳಿಂದ ಪೈಶಾಚಿಕತೆ ಅನಾವರಣ
ಉತ್ತರಪ್ರದೇಶವೊಂದರಲ್ಲಿಯೇ ವಿಕಾಸ್​ ದುಬೆ ವಿರುದ್ಧ 60 ಪ್ರಕರಣಗಳಿವೆ. ಆತ ರಾಜ್ಯದಿಂದ ಪಲಾಯನ ಮಾಡಿದ್ದಾನೆ ಎನ್ನಲಾಗಿದೆ. ಈತನ ಜತೆ ಗುರುತಿಸಿಕೊಂಡಿದ್ದ 21 ಜನರನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.
ಕರೊನಾ ಸೋಂಕು ಖಚಿತವಾದರೆ… ಮುಂದೇನು? ಈ ವಿಷಯಗಳನ್ನು ಅಗತ್ಯವಾಗಿ ತಿಳಿದಿರಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 2 =
Remember me
