ಕಾನ್ಪುರ:ಕಾನ್ಪುರ ಸಮೀಪದ ಬಿಕ್ರು ಗ್ರಾಮದಲ್ಲಿ ನಡೆದ ಎಂಟು ಪೊಲೀಸರ ಹತ್ಯಾಕಾಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಗ್ಯಾಂಗ್​ಸ್ಟರ್​​ ವಿಕಾಸ್​ ದುಬೆ ಆಪ್ತ ಅಮರ್​ ದುಬೆ ಎಂಬಾತನ ಪೊಲೀಸ್​ ಎನ್​ಕೌಂಟರ್​ನಲ್ಲಿ ಮೃತಪಟ್ಟಿದ್ದಾನೆ.
ಬುಧವಾರ ಬೆಳಗ್ಗೆ ಹಮೀರ್​ಪುರದ ಮೌದಾಹಾದಲ್ಲಿ ಉತ್ತರ ಪ್ರದೇಶ ವಿಶೇಷ ಕಾರ್ಯಪಡೆ (ಎಸ್​ಟಿಎಫ್​) ನಡೆಸಿದ ಎನ್​ಕೌಂಟರ್​ನಲ್ಲಿ ಅಮರ್​ ದುಬೆ ಅಸುನೀಗಿದ್ದಾನೆ. ಈತನೂ ಸಹ ಕುಖ್ಯಾತ ರೌಡಿಶೀಟರ್​ ಆಗಿದ್ದು, ಅನೇಕ ಅಪರಾಧಗಳಲ್ಲಿ ಮೋಸ್ಟ್​ ವಾಂಟೆಡ್​ ಕ್ರಿಮಿನಲ್​ ಆಗಿದ್ದ.
ಇದನ್ನೂ ಓದಿ:ಕ್ಯಾಮೆರಾಗೆ ಪೋಸ್​ ನೀಡಿ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಟೀಕೆಗೆ ಗುರಿಯಾದ್ರು!
ಕಾನ್ಪುರ ಸಮೀಪದ ಬಿಕ್ರು ಗ್ರಾಮದಲ್ಲಿ ನಡೆದ ಎಂಟು ಪೊಲೀಸರ ಹತ್ಯಾಕಾಂಡದಲ್ಲಿ ಈತನೂ ಸಹ ಪ್ರಮುಖ ಆರೋಪಿಯಾಗಿದ್ದ.
ಎಂಟು ಪೊಲೀಸರ ಹತ್ಯೆಗೆ ವಿಕಾಸ್​ ದುಬೆಯೇ ನೇರ ಹೊಣೆ ಎಂದು ಆರಂಭದ ಪ್ರಾಥಮಿಕ ಮೂಲಗಳು ಬಹಿರಂಪಡಿಸಿದ್ದವು. ಹತ್ಯೆಗೈದು ಆತ ದೆಹಲಿ-ಮಥುರಾ ಹೆದ್ದಾರಿಯ ಹೋಟೆಲ್​ವೊಂದರಲ್ಲಿ ಬಚ್ಚಿಟ್ಟುಕೊಂಡಿದ್ದ. ಫರೀದಾಬಾದ್​ನ ಬಧ್ಕಲ್​ ಚೌಕ ಏರಿಯಾದ ಹೋಟೆಲ್​ನಲ್ಲಿ ತಂಗಿದ್ದ ಎಂದು ತಿಳಿದುಬಂದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ವಿಕಾಸ್​ ದುಬೆಯ ಸಹಚರನೊಬ್ಬನನ್ನು ಬಂಧಿಸಿದಾಗ ದುಬೆ ತನ್ನೊಂದಿಗೆ ಫರೀದಾಬಾದ್​ ಹೋಟೆಲ್​ನಲ್ಲಿ ಇರುವುದಾಗಿ ಹೇಳಿದ್ದ. ಸುಮಾರು 200 ಪೊಲೀಸ್​ ಸಿಬ್ಬಂದಿ ಒಳಗೊಂಡು 20 ತಂಡಗಳನ್ನು ಉತ್ತರ ಪ್ರದೇಶ ಪೊಲೀಸ್ ಇಲಾಖೆ ರಚಿಸಿದ್ದು, ವಿಕಾಸ್​ ದುಬೆಗಾಗಿ ರಾಜ್ಯಾದ್ಯಂತ ಹುಡುಕಾಟ ನಡೆಸುತ್ತಿದ್ದಾರೆ.
ಇದನ್ನೂ ಓದಿ:ಕರೊನಾ ಕ್ವಾರಂಟೈನ್​ಗೆ ಮನನೊಂದು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣು
ಕಾನ್ಪುರ ಸಮೀಪದ ಡಿಕ್ರು ಗ್ರಾಮದಲ್ಲಿ ವಿಕಾಸ್ ದುಬೆ ಎಂಬ ಕ್ರಿಮಿನಲ್ ಅಡಗಿಕೊಂಡಿರುವ ಖಚಿತ ಮಾಹಿತಿ ಮೇರೆಗೆ ಪೊಲೀಸರ ತಂಡ ಆತನ ಬಂಧನಕ್ಕೆ ಬಲೆ ಬೀಸಿತ್ತು. ವಿಕಾಸ್ ದುಬೆ 60 ಅಪರಾಧ ಪ್ರಕರಣಗಳಲ್ಲಿ ಬೇಕಾದವನಾಗಿದ್ದ. ಜುಲೈ 3ರ ತಡ ರಾತ್ರಿ ಕಾರ್ಯಾಚರಣೆ ಆರಂಭವಾಗಿತ್ತು. ಅಂದು ನಸುಕಿನ ವೇಳೆ ವಿಕಾಸ್​ ದುಬೆಯ ಅಡಗುದಾಣದ ರೂಫ್​ ಟಾಪ್​ನಿಂದ ಗುಂಡಿನ ದಾಳಿ ನಡೆದಿತ್ತು. ಇದರಲ್ಲಿ ಡಿಎಸ್​ಪಿ ಸೇರಿದಂತೆ 8 ಪೊಲೀಸರ ಹತ್ಯೆ ನಡೆದಿತ್ತು.(ಏಜೆನ್ಸೀಸ್​)
ಕಾನ್ಪುರ ಪೊಲೀಸ್ ಹತ್ಯೆ ಪ್ರಕರಣ ಮ್ಯಾಜಿಸ್ಟ್ರಿಯಲ್ ತನಿಖೆ: ದುಬೆಯ ಸೊಸೆ ಸಹಿತ ಮೂವರ ಸೆರೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − five =
Remember me
