ಉತ್ತರಪ್ರದೇಶ:ವ್ಯಕ್ತಿಯೊಬ್ಬ ಚಪ್ಪಲಿ ಕಳ್ಳತನವಾಗಿದೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ. ಕಾನ್ಪುರ ನಗರದಲ್ಲಿ ವಿಚಿತ್ರ ಕಳ್ಳತನವೊಂದು ಬೆಳಕಿಗೆ ಬಂದಿದೆ.
ದೇವಸ್ಥಾನದ ಹೊರಗಿದ್ದ ಚಪ್ಪಲಿಯನ್ನು ಕದ್ದೊಯ್ದಿದ್ದಾರೆ. 7 ನಂಬರ್​ನ ನೀಲಿ ಬಣ್ಣದ ಚಪ್ಪಲಿಯಾಗಿದೆ. ಆಕ್ಯುಪ್ರೆಶರ್ ಇರುವ ಚಪ್ಪಲಿಯನ್ನು ಕದ್ದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಕೋರಿದರು. ಆ ವ್ಯಕ್ತಿ, ಚಪ್ಪಲಿಗಳನ್ನು ತ್ವರಿತವಾಗಿ ಪತ್ತೆ ಮಾಡಿ, ಆರೋಪಿ ಕಳ್ಳನನ್ನು ಬಂಧಿಸುವಂತೆ ಪೊಲೀಸರನ್ನು ಕೋರಿ ಚಪ್ಪಲಿ ಕಳ್ಳತನದ ಬಗ್ಗೆ ಪೊಲೀಸರೊಂದಿಗೆ ಎಫ್‌ಐಆರ್ ದಾಖಲಿಸಿದ್ದಾರೆ.
ಇದನ್ನೂ ಓದಿ:ಜುಲೈ 16ರಂದು ಬೆಂ.ವಿವಿ ಪಿಎಚ್.ಡಿ. ಪ್ರವೇಶ ಪರೀಕ್ಷೆ
ಚಪ್ಪಲಿ ಕಳ್ಳತನವಾಗಿರುವ ಘಟನೆ ಸಿವಿಲ್ ಲೈನ್ ನ ಭೈರವ ಬಾಬಾ ದೇವಸ್ಥಾನದಲ್ಲಿ ನಡೆದಿದೆ. ದಬೌಲಿ ನಿವಾಸಿ ಕಾಂತಿಲಾಲ್ ನಿಗಮ್ ಭಾನುವಾರ ಬೆಳಗ್ಗೆ ದೇವರ ದರ್ಶನ ಪಡೆಯಲು ದೇವಸ್ಥಾನಕ್ಕೆ ತೆರಳಿದ್ದರು. ಚಪ್ಪಲಿಯನ್ನು ದೇವಸ್ಥಾನದ ಹೊರಗೆ ಬಿಟ್ಟು, ಹತ್ತಿರದಲ್ಲೇ ಇದ್ದ ಅಂಗಡಿಯೊಂದರಿಂದ ಪೂಜಾ ಸಾಮಗ್ರಿ ತೆಗೆದುಕೊಂಡು ಹೋಗಿದ್ದಾರೆ. ಅವರು ಪೂಜೆ ಮುಗಿಸಿ ಮರಳಿ ಅಂಗಡಿಗೆ ಬಂದಾಗ ಅಲ್ಲೇ ಇಟ್ಟಿದ್ದ ಚಪ್ಪಲಿ ಕಳ್ಳತನವಾಗಿತ್ತು.
ಹತ್ತಿರದಲ್ಲಿದ್ದ ಚಪ್ಪಲಿಗಳನ್ನೆಲ್ಲ ಹುಡುಕಿ ಸುತ್ತಮುತ್ತಲಿನವರನ್ನೂ ಕೇಳಿದರು. ಆದರೆ ಚಪ್ಪಲಿಗಳ ಯಾವುದೇ ಕುರುಹು ಪತ್ತೆಯಾಗಿಲ್ಲ. ಇದಾದ ನಂತರ ಕಾಂತಿಲಾಲ್ ಕಾನ್ಪುರ ಪೊಲೀಸ್ ಇ-ಪೊಲೀಸ್ ಠಾಣೆಯಲ್ಲಿ ಚಪ್ಪಲಿ ಕಳ್ಳತನದ ಬಗ್ಗೆ ದೂರು ದಾಖಲಿಸಿದ್ದಾರೆ.
ಅಸಲಿ‌ ಚಿನ್ನ ಕದ್ದು‌ ಅದೇ ಜಾಗಕ್ಕೆ ನಕಲಿ ಬಂಗಾರ ಇಟ್ಟ ಖದೀಮರು ಅರೆಸ್ಟ್​​


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − seventeen =
Remember me
