ಬೆಂಗಳೂರು:ಅಭಿನಯ ಹಾಗೂ ನಿರ್ದೇಶನದಲ್ಲಿ ಸೈ ಎನಿಸಿಕೊಂಡಿರುವ ಡಿವೈನ್‌ ಸ್ಟಾರ್‌ ಖ್ಯಾತಿಯ ನಟ ರಿಷಬ್ ಶೆಟ್ಟಿ ಇದೀಗ ಜಾಹೀರಾತು ಲೋಕಕ್ಕೂ ಕಾಲಿಟ್ಟಿದ್ದಾರೆ. ಇಲ್ಲಿಯವರೆಗೂ ರಿಷಬ್‌ ಯಾವುದೇ ಜಾಹೀರಾತುಗಳಲ್ಲಿ ಕಾಣಿಸಿಕೊಂಡಿಲ್ಲ. ಇದೀಗ ಚೊಚ್ಚಲ ಜಾಹೀರಾತಿನಲ್ಲಿಯೇ ಎಲ್ಲರ ಗಮನ ಸೆಳೆದಿದ್ದಾರೆ.
ಜಾಹೀರಾತಿನಲ್ಲಿ ತುಳುನಾಡ ಸಂಸ್ಕೃತಿ ಬಿಂಬಿಸುವ ಪಂಚೆಯನ್ನು ಧರಿಸಿರುವ ರಿಷಬ್, ಕಲೆ-ಸಂಸ್ಕೃತಿ ಸೇರಿದಂತೆ ಹತ್ತು ಹಲವು ವಿಚಾರಗಳನ್ನ ನಿರೂಪಿಸುವುದರ ಜೊತೆಗೆ, ಕೆಲವು ವಿಶೇಷತೆಗಳನ್ನೂ ಕೂಡ ಹೇಳಿಕೊಂಡಿದ್ದಾರೆ.
ಈಗಾಗಲೇ ರಾಮ್ ರಾಜ್ ಕಾಟನ್ ಸಂಸ್ಥೆಯ ಜಾಹೀರಾತಿನಲ್ಲಿ ದರ್ಶನ್, ಕಿಚ್ಚ ಸುದೀಪ್, ಶ್ರೀಮುರಳಿ, ಪುನೀತ್ ರಾಜಕುಮಾರ್, ರಾಕಿಂಗ್ ಸ್ಟಾರ್ ಯಶ್ ಹೀಗೆ ಎಲ್ಲರೂ ಕಾಣಿಸಿಕೊಂಡಿದ್ದಾರೆ. ಇದೀಗ ರಿಷಬ್ ಶೆಟ್ಟಿ ಸಹ ಜಾಹೀರಾತಿನಲ್ಲಿ ಕಾಣಿಸಿಕೊಂಡು ಅದರ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲೂ ಪೋಸ್ಟ್ ಮಾಡಿದ್ದಾರೆ.
ರಿಷಬ್ ಆಯ್ಕೆರಾಮರಾಜ್, ಮುಂಡು, ಶರ್ಟ್‌ಗಳು ಮತ್ತು ಕುರ್ತಾಗಳ ಹೊಸ ಬ್ರಾಂಡ್ ಅಂಬಾಸಿಡರ್ ಆಗಿ ರಿಷಬ್ ಶೆಟ್ಟಿಯನ್ನು ನೇಮಿಸಿಕೊಂಡಿದ್ದು, ಉತ್ತರ ಭಾರತದ ಮಾರುಕಟ್ಟೆಗೆ ಮುನ್ನುಗ್ಗುವ ಮುನ್ನ ದಕ್ಷಿಣ ಭಾರತಕ್ಕೆ ರಿಷಬ್ ಶೆಟ್ಟಿ ಅವರನ್ನು ಆಯ್ಕೆ ಮಾಡಿಕೊಂಡಿದೆ.
ರಾಮರಾಜ್ ಕಾಟನ್ ಸಂಸ್ಥೆಯ ನಿರ್ದೇಶಕ ಅರುಣ್ ಈಶ್ವರ್, ರಿಷಬ್ ಶೆಟ್ಟಿ ಅವರೊಂದಿಗಿನ ಒಡನಾಟವು ಬ್ರ್ಯಾಂಡ್ ಅನ್ನು ಹೆಚ್ಚಿನ ಎತ್ತರಕ್ಕೆ ಕೊಂಡೊಯ್ಯುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ರಿಷಬ್ ಶೆಟ್ಟಿ ಅಂಬಾಸಿಡರ್ ಆಗಿರುವುದಕ್ಕೆ ತಮ್ಮ ಸಂತೋಷವನ್ನು ವ್ಯಕ್ತಪಡಿಸಿ, ಇದು ಭಾರತದ ಸಂಸ್ಕೃತಿ ಮತ್ತು ಸಂಪ್ರದಾಯವನ್ನು ಜಗತ್ತಿಗೆ ತಲುಪಿಸುವ ಮಾರ್ಗವಾಗಿದೆ ಎಂದು ನಾನು ಭಾವಿಸುತ್ತೇನೆ ಎಂದು ಹೇಳಿದರು.
ಸದ್ಯ ರಿಷಬ್ ಕಾಂತಾರ ಚಾಪ್ಟರ್-1 ಕೆಲಸದಲ್ಲಿಯೇ ಬ್ಯುಸಿ ಆಗಿದ್ದು, ಮೊನ್ನೆ ಅಯೋಧ್ಯೆಗೂ ಸಹ ಭೇಟಿ ನೀಡಿ, ಬಾಲ ರಾಮನ ಪ್ರಾಣ ಪ್ರತಿಷ್ಠಾಪಣೆಯನ್ನು ಕಣ್ತುಂಬಿಕೊಂಡು ಬಂದಿದ್ದಾರೆ.




ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − nine =
Remember me
