ಬೆಂಗಳೂರು:ಹೊಂಬಾಳೆ ಫಿಲ್ಮ್ಸ್​ ನಿರ್ಮಾಣ, ರಿಷಬ್ ಶೆಟ್ಟಿ ರಚನೆ ಮತ್ತು ನಿರ್ದೇಶನದಲ್ಲಿ ಮೂಡಿಬಂದಿರುವ ‘ಕಾಂತಾರ’ ಸಿನಿಮಾ, ಬಿಡುಗಡೆಯಾದ ದಿನದಿಂದಲೂ ಬಹಳ ಮೆಚ್ಚುಗೆ ಗಳಿಸುತ್ತಿರುವುದು ಮಾತ್ರವಲ್ಲದೆ, ಎಲ್ಲೆಡೆ ಹೌಸ್​ಫುಲ್​ ಪ್ರದರ್ಶನವನ್ನು ಕಾಣುತ್ತಿದೆ.
ಕಾಂತಾರ ಸಿನಿಮಾ ಬರೀ ಕನ್ನಡದಲ್ಲೇ ಜಗತ್ತಿನಾದ್ಯಂತ ಬಿಡುಗಡೆಗೊಂಡಿರುವುದೇ ಒಂದು ವಿಶೇಷ ಆಗಿರುವುದು ಒಂದೆಡೆಯಾದರೆ, ಇನ್ನೊಂದೆಡೆ ಇದು ಮುಂಬೈನಲ್ಲಿ 2 ಪ್ರಮುಖ ಹೆಗ್ಗಳಿಕೆಗೆ ಪಾತ್ರವಾದ ಪ್ರಥಮ ಕನ್ನಡ ಸಿನಿಮಾ ಕೂಡ ಆಗಿದೆ.
ಮುಂಬೈನ ಮರಾಠ ಚಿತ್ರಮಂದಿರಲ್ಲಿ ಇದುವರೆಗೆ ದಕ್ಷಿಣ ಭಾರತದ ಯಾವುದೇ ಸಿನಿಮಾ ಹಿಂದಿಗೆ ಡಬ್ಬಿಂಗ್ ಆಗದೆ ಪ್ರದರ್ಶನಗೊಂಡಿಲ್ಲ. ಆದರೆ ‘ಕಾಂತಾರ’ ಇಲ್ಲಿ ಡಬ್ಬಿಂಗ್ ಆಗದೇ ಪ್ರದರ್ಶನಗೊಳ್ಳುವ ಮೂಲಕ ಈ ಚಿತ್ರಮಂದಿರದಲ್ಲಿ ಹಿಂದಿಗೆ ಡಬ್ಬಿಂಗ್​ ಆಗದೆ ನೇರವಾಗಿ ಪ್ರದರ್ಶನಗೊಂಡ ಪ್ರಪ್ರಥಮ ದಕ್ಷಿಣ ಭಾರತೀಯ ಸಿನಿಮಾ ಎಂದೆನಿಸಿಕೊಂಡಿದೆ. ಇದನ್ನು ಮರಾಠ ಮಂದಿರ್​​ನ ಕಾರ್ಯಕಾರಿ ನಿರ್ದೇಶಕ ಮನೋಜ್ ದೇಸಾಯಿ ಹೇಳಿಕೊಂಡಿದ್ದಾರೆ.
ಅಲ್ಲದೆ ಮುಂಬೈನಲ್ಲಿ ‘ಕಾಂತಾರ’ಗೆ ನಾಳೆ 106 ಶೋಗಳು ಸಿಕ್ಕಿದ್ದು, ಇನ್ನಷ್ಟು ಸೇರ್ಪಡೆಯಾಗುವ ಸಾಧ್ಯತೆಯೂ ಇದೆ. ಹೀಗೆ ನೂರಕ್ಕೂ ಅಧಿಕ ಪ್ರದರ್ಶನಗಳಿಗೆ ಅವಕಾಶ ಸಿಕ್ಕ ಮೊದಲ ಕನ್ನಡ ಸಿನಿಮಾ ಕಾಂತಾರ ಎಂಬುದಾಗಿ ಚಿತ್ರದ ಕಾರ್ಯಕಾರಿ ನಿರ್ಮಾಪಕ ಕಾರ್ತಿಕ್ ಗೌಡ ಹೇಳಿಕೊಂಡಿದ್ದಾರೆ. ಈ ಮೂಲಕ ಮುಂಬೈನಲ್ಲಿ ಎರಡು ಪ್ರಥಮಗಳನ್ನು ಸಾಧಿಸಿದ ಮೊದಲ ಕನ್ನಡ ಸಿನಿಮಾ ಎಂಬ ಹೆಗ್ಗಳಿಕೆಗೆ ‘ಕಾಂತಾರ’ ಪಾತ್ರವಾಗಿದೆ.
ಕಾಂತಾರ: ಒಂದಕ್ಕೂ ನಾಲ್ಕಕ್ಕೂ ನಡುವೆ ಎಷ್ಟು ಅಂತರ!?; ಬದಲಾಯ್ತು ರಿಷಬ್ ‘ಸ್ಟೇಟಸ್​’

‘ಎಲ್ರೂ ನನ್ನ ಶವ ನೋಡಲು ಬನ್ನಿ, ಇಲ್ಲಂದ್ರೆ ದೆವ್ವ ಆಗಿ ಬರ್ತೀನಿ’; ಡೆತ್​ನೋಟ್​ನಲ್ಲಿತ್ತು ಈ ಕೊನೇ ಆಸೆ

ವಾಟ್ಸ್​ಆ್ಯಪ್​ ಬಳಕೆ ಅಪಾಯಕಾರಿಯೇ?; ಇಲ್ಲಿದೆ ಆತಂಕಕಾರಿ ಮಾಹಿತಿ!

ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:5 × four =
Remember me
