ನವದೆಹಲಿ :ಆರೋಗ್ಯ ಮತ್ತು ಬದುಕಿನ ಹಕ್ಕು ಎಲ್ಲಕ್ಕೂ ಮಿಗಿಲಾದುದು ಎಂದು ಸುಪ್ರೀಂ ಕೋರ್ಟ್ ಇಂದು ಅಭಿಪ್ರಾಯಪಟ್ಟಿತು. ಕರೊನಾ ಆತಂಕದ ನಡುವೆ ಕನ್ವರ್​ ಯಾತ್ರೆ ನಡೆಸಲು ಅನುಮತಿ ನೀಡಿರುವ ತನ್ನ ನಿರ್ಧಾರವನ್ನು ಪುನರ್​ಪರಿಶೀಲಿಸಲು, ಉತ್ತರ ಪ್ರದೇಶ ಸರ್ಕಾರಕ್ಕೆ ಸೋಮವಾರದವರೆಗೆ ಸಮಯ ನೀಡಿತು.
“ನಾವೆಲ್ಲಾ ಭಾರತದ ನಾಗರೀಕರು. ಸಂವಿಧಾನದ ಪರಿಚ್ಛೇದ 21 – ಬದುಕುವ ಹಕ್ಕು – ಎಲ್ಲರಿಗೂ ಅನ್ವಯಿಸುತ್ತದೆ. ಕನ್ವರ್​ ಯಾತ್ರೆ ನಡೆಸುವ ನಿರ್ಧಾರದೊಂದಿಗೆ ಯುಪಿ ಸರ್ಕಾರ ಮುಂದುವರೆಯಲು ಸಾಧ್ಯವಿಲ್ಲ. ನೂರಕ್ಕೆ ನೂರು ಭಾಗ” ಎಂದು ಕನ್ವರ್ ಯಾತ್ರೆ ಆಯೋಜನೆಯ ವಿಚಾರವನ್ನು ಸುಯೋ ಮೋಟೋ ಕೈಗೆತ್ತಿಕೊಂಡಿರುವ ನ್ಯಾಯಮೂರ್ತಿ ಆರ್​.ಎಫ್​.ನಾರೀಮನ್​ ಖಡಕ್​ ಆಗಿ ಹೇಳಿದರು.
ಇದನ್ನೂ ಓದಿ:ಕನ್ವರ್ ಯಾತ್ರೆ : ಕೇಂದ್ರ ಮತ್ತು ಯುಪಿ ಸರ್ಕಾರಕ್ಕೆ ಸುಪ್ರೀಂ ನೋಟೀಸು
ಪ್ರಕರಣದ ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿದ ನ್ಯಾಯಮೂರ್ತಿ ನಾರಿಮನ್ ಮತ್ತು ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರ ವಿಭಾಗೀಯ ಪೀಠ, ಭೌತಿಕವಾಗಿ ಯಾತ್ರೆಯನ್ನು ನಡೆಸುವ ಬಗೆಗಿನ ತನ್ನ ನಿರ್ಧಾರವನ್ನು ಮತ್ತೆ ಪರಿಗಣಿಸಲು ರಾಜ್ಯಕ್ಕೆ ಮತ್ತೊಂದು ಅವಕಾಶ ನೀಡುತ್ತಿರುವುದಾಗಿಯೂ, ಇಲ್ಲದಿದ್ದರೆ ತನ್ನ ಆದೇಶವನ್ನು ಹೊರಡಿಸುವುದಾಗಿಯೂ ಹೇಳಿತು.
“ನಮ್ಮ ಅಭಿಪ್ರಾಯವೆಂದರೆ, ಇದು ನಮ್ಮೆಲ್ಲರಿಗೂ ಸಂಬಂಧಪಟ್ಟಿದ್ದು, ಮತ್ತು ಬದುಕುವ ಹಕ್ಕಿನ ಮೇಲೆ ಮಹತ್ವದ ಪರಿಣಾಮ ಬೀರುವಂಥದ್ದು. ಭಾರತದ ನಾಗರೀಕರ ಆರೋಗ್ಯಮತ್ತು ಬದುಕುಳಿಯುವ ಹಕ್ಕು ಪರಮೋಚ್ಛವಾದುದು. ಉಳಿದೆಲ್ಲಾ ಭಾವನೆಗಳು, ಧಾರ್ಮಿಕವಾದುದೇ ಆಗಲಿ, ಈ ಹಕ್ಕಿನ ನಂತರ ಬರುವಂಥವು” ಎಂದು ನ್ಯಾಯಪೀಠ ಹೇಳಿತು.
ವಿಚಾರಣೆಯ ವೇಳೆ ಯುಪಿ ಸರ್ಕಾರವು, ಸಾಂಕೇತಿಕ ಯಾತ್ರೆಗೆ ಅವಕಾಶ ನೀಡಲಿದ್ದು, ಕೇವಲ ಪೂರ್ಣವಾಗಿ ಲಸಿಕೆ ಪಡೆದಿರುವ ಜನರು ಮಾತ್ರ ಭಾಗವಹಿಸಬಲ್ಲರು ಎಂದು ಹೇಳಿತು. ಕೇಂದ್ರ ಸರ್ಕಾರ, ಧಾರ್ಮಿಕ ಭಾವನೆಗಳನ್ನು ಪರಿಗಣಿಸಿ, ರಾಜ್ಯಗಳು ಗಂಗಾ ಜಲವನ್ನು ಟ್ಯಾಂಕರ್​ಗಳಲ್ಲಿ ಭಕ್ತರಿಗೆ ಒದಗಿಸಬೇಕು. ಸಾಮಾಜಿಕ ಅಂತರ ಮತ್ತು ಇತರ ಕೋವಿಡ್ ಪ್ರೋಟೋಕಾಲ್​ಗಳನ್ನು ಪಾಲಿಸಬೇಕು ಎಂದಿತು.(ಏಜೆನ್ಸೀಸ್)
ಎಸ್ಸೆಸ್ಸೆಲ್ಸಿ: “ಯಾವುದೇ ಭಯ ಪಡದೆ ಪರೀಕ್ಷೆ ಬರೆಯೋಕೆ ಬನ್ನಿ”

ಮೇಕೆದಾಟು ಯೋಜನೆ ಅನುಷ್ಠಾನ ಶತಸ್ಸಿದ್ಧ : ದೆಹಲಿಯಲ್ಲಿ ಬಿಎಸ್​ವೈ

ಮಕ್ಕಳಿಗೆ ಕರೊನಾ ಲಸಿಕೆ : ‘ಮುಗಿಯುವ ಹಂತದಲ್ಲಿ ಕ್ಲಿನಿಕಲ್ ಟ್ರಯಲ್ಸ್​’

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × one =
Remember me
