ನವದೆಹಲಿ:ಪ್ರತಿದಿನ ಕೆಲವು ಫೇಕ್ ಸುದ್ದಿಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತವೆ. ಅದು ಕೆಲವೊಮ್ಮೆ ಫಜೀತಿಯನ್ನು ಸೃಷ್ಟಿಸುತ್ತದೆ. ಹೀಗಿರುವಾಗ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಕಪಿಲ್‌ ದೇವ್‌ ವಿಚಾರದಲ್ಲಿ ಇದೇ ರೀತಿಯ ಸುದ್ದಿಯೊಂದು ಹರಿದಾಡುತ್ತಿದೆ.
ವೈರಲ್ ಆಯ್ತು ಕಪಿಲ್ ದೇವ್ ಅವರ ವಿಡಿಯೋಈ ವಿಡಿಯೋ ಬಗ್ಗೆ ಹೆಚ್ಚಿನ ಮಾಹಿತಿ ಯಾರಿಗೂ ಗೊತ್ತಿಲ್ಲ. ಆದರೆ ಕಪಿಲ್ ದೇವ್ ಅವರ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋ ಅಂತರ್ಜಾಲದಲ್ಲಿ ಭಾರೀ ಸಂಚಲನ ಸೃಷ್ಟಿಸಿದ್ದು, ಭಾರತ ತಂಡದ ಮಾಜಿ ಆರಂಭಿಕ ಆಟಗಾರ ಗೌತಮ್ ಗಂಭೀರ್ ತಮ್ಮ ಹಿರಿಯ ಆಟಗಾರನ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.
ವಿಡಿಯೋದಲ್ಲಿ ಏನಿದೆ?ವಿಡಿಯೋದಲ್ಲಿ ಕಪಿಲ್ ದೇವ್ ಬಾಯಿಗೆ ಬಟ್ಟೆ ಕಟ್ಟಲಾಗಿದೆ. ಹಳೆಯ ಮನೆಯೊಂದರಲ್ಲಿ ಇಬ್ಬರು ವ್ಯಕ್ತಿಗಳು ಕಪಿಲ್ ದೇವ್ ಅವರನ್ನು ತೋಳು ಹಿಡಿದು ಕರೆದುಕೊಂಡು ಹೋಗುತ್ತಿದ್ದಾರೆ. ಕಪಿಲ್ ದೇವ್ ಹಿಂತಿರುಗಿ ನೋಡುತ್ತಿದ್ದಾರೆ. ಆದರೆ ಆ ವ್ಯಕ್ತಿಗಳು ಅವರನ್ನು ಬಲವಾಗಿ ಎಳೆದುಕೊಂಡು ಹೋಗುತ್ತಾರೆ.
ಕಳವಳ ವ್ಯಕ್ತಪಡಿಸಿದ ಗಂಭೀರ್ಗೌತಮ್ ಗಂಭೀರ್ ಈ ವಿಡಿಯೋ ಬಗ್ಗೆ ಕಳವಳ ವ್ಯಕ್ತಪಡಿಸಿ ಎಕ್ಸ್ ನಲ್ಲಿ ಮರು ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋ ಬೇರೆ ಯಾರಿಗಾದರೂ ಸಿಕ್ಕಿದೆಯೇ ಎಂದು ಗಂಭೀರ್ ವಿಡಿಯೋ ಜೊತೆಗೆ ಬರೆದುಕೊಂಡಿದ್ದಾರೆ. ಹಾಗೆಯೇ ಈ ವಿಡಿಯೋ ನಿಜವಲ್ಲ, ಕಪಿಲ್ ಭಾಯ್ ಚೆನ್ನಾಗಿದ್ದಾರೆ ಎಂದು ನಾನು ಭಾವಿಸುತ್ತೇನೆ ಎಂದು ತಿಳಿಸಿದ್ದಾರೆ. ಗಂಭೀರ್ ಈ ವಿಡಿಯೋ ಪೋಸ್ಟ್ ಮಾಡಿದ ನಂತರ ಕ್ರಿಕೆಟ್ ಅಭಿಮಾನಿಗಳು ಕೂಡ ಆತಂಕ ವ್ಯಕ್ತಪಡಿಸಿದ್ದಾರೆ.
Anyone else received this clip, too? Hope it’s not actually@therealkapildev🤞and that Kapil Paaji is fine!pic.twitter.com/KsIV33Dbmp
— Gautam Gambhir (@GautamGambhir)September 25, 2023

ಯಾವುದೇ ಸ್ಪಷ್ಟತೆಯಿಲ್ಲ…ಇದು ನಿಜವೇ…ಎಂದು ವಿಡಿಯೋಗೆ ಸಂಬಂಧಿಸಿದಂತೆ ಯಾವುದೇ ಸ್ಪಷ್ಟತೆಯಿಲ್ಲ. ಆದರೆ ಇದಕ್ಕೆ ಸಂಬಂಧಿಸಿದಂತೆ ಜನರು ವಿವಿಧ ರೀತಿಯ ಮೀಮ್‌ಗಳನ್ನು ಸಹ ಮಾಡಿದ್ದಾರೆ. ಅಲ್ಲದೆ ಆಟಗಾರರನ್ನು ಟ್ರೋಲ್ ಮಾಡಿದ್ದಾರೆ. ಹೀಗಿರುವಾಗ ಈ ವಿಡಿಯೋವನ್ನು ಯಾರೋ ಎಡಿಟ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ ಎನ್ನಲಾಗಿದೆ.
ಯಾರು ಈ ಕರಿಮಾ ಬಲೋಚ್?; ಬಲೋಚ್ ಹತ್ಯೆಯ ಕುರಿತು ಮೌನವಹಿಸಿರುವ ಟ್ರುಡೊಗೆ ಪ್ರಶ್ನೆ ಮಾಡಿದ ಬಿಎಚ್‌ಆರ್‌ಸಿ

Sign in to your account
Please enter an answer in digits:six + twenty =
Remember me
