ನವದೆಹಲಿ:ಭಾರತದ ಒಲಿಂಪಿಕ್ಸ್ ಸ್ಪರ್ಧಿಗಳಿಗೆ ಪ್ರಧಾನಿ ನರೇಂದ್ರ ಮೋದಿ ನೀಡಿರುವ ಪ್ರೋತ್ಸಾಹದ ಬಗ್ಗೆ ಕ್ರಿಕೆಟ್ ದಿಗ್ಗಜ ಕಪಿಲ್ ದೇವ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಮೋದಿಗೆ ಮುನ್ನ ದೇಶದ ಯಾವ ಪ್ರಧಾನಿ ಕೂಡ ಕ್ರೀಡಾ ಸಂಸ್ಕೃತಿ ತರುವ ಬಗ್ಗೆ ಮಾತನಾಡಿರಲಿಲ್ಲ. ಮಕ್ಕಳಿಗೆ ಕ್ರೀಡೆಯಲ್ಲಿ ತೊಡಗಿಕೊಳ್ಳಲು ಅವಕಾಶ ನೀಡುವಂತೆ ಪೋಷಕರನ್ನು ಒತ್ತಾಯಿಸಿರಲಿಲ್ಲ. ಅಲ್ಲದೆ ಸ್ವತಃ ಪ್ರಧಾನಿ ಕೂಡ ಕ್ರೀಡಾ ಚಟುವಟಿಕೆ ಮತ್ತು ಕ್ರೀಡಾಪಟುಗಳ ಬಗ್ಗೆ ಇಷ್ಟೊಂದು ಆಸಕ್ತಿ ತೋರಿರಲಿಲ್ಲ ಎಂದು ಕಪಿಲ್ ಶ್ಲಾಸಿದ್ದಾರೆ.
ಕ್ರೀಡಾಪಟುಗಳು ಯಶಸ್ಸು ಕಂಡಾಗ ಹಿಂದೆಯೂ ಸನ್ಮಾನಿಸಲಾಗುತ್ತಿತ್ತು. ಆದರೆ ಸೋತಾಗಲೂ ಕ್ರೀಡಾಪಟುಗಳನ್ನು ಹುರಿದುಂಬಿಸಿರುವುದು ಮತ್ತು ಅವರ ಅತ್ಯುತ್ತಮ ನಿರ್ವಹಣೆಯನ್ನು ಗುರುತಿಸಿರುವುದು ಇದೇ ಮೊದಲು ಎಂದೂ ಕಪಿಲ್ ಹೇಳಿದ್ದಾರೆ.
ಭಾಷಣ, ಔಪಚಾರಿಕತೆ ಇಲ್ಲದೆ ಒಲಿಂಪಿಯನ್‌ಗಳ ಜತೆಗೆ ಮೋದಿ ಸಹಜವಾಗಿಯೇ ಬೆರೆತು ಮಾತನಾಡಿದ ಬಗ್ಗೆಯೂ ಕಪಿಲ್ ಪ್ರಶಂಸಿಸಿದ್ದಾರೆ. ‘ಮೋದಿ ಜೀ, ನೀವು ಇಡೀ ಕ್ರೀಡಾ ಜಗತ್ತಿನ ಹೃದಯ ಗೆದ್ದಿದ್ದೀರಿ’ ಎಂದು 1983ರ ವಿಶ್ವಕಪ್ ವಿಜೇತ ನಾಯಕ ಕಪಿಲ್ ಪತ್ರಿಕಾ ಅಂಕಣವೊಂದರಲ್ಲಿ ಬರೆದಿದ್ದಾರೆ.
ಮಗುವಿನ ಶಸ್ತ್ರಚಿಕಿತ್ಸೆಗಾಗಿ ಒಲಿಂಪಿಕ್ಸ್ ಪದಕ ಹರಾಜು! ಖರೀದಿಸಿದವರು ನೀಡಿದ ಟ್ವಿಸ್ಟ್ ಏನು ಗೊತ್ತೇ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 3 =
Remember me
