ನವದೆಹಲಿ:ಆಸ್ಟ್ರೇಲಿಯಾ ವಿರುದ್ಧ 6 ವಿಕೆಟ್‌ಗಳಿಂದ ಪರಾಭವಗೊಂಡು ಕೋಟ್ಯಂತರ ಭಾರತೀಯರ ಕನಸುಗಳನ್ನು ಭಗ್ನಗೊಳಿಸಿದ ಟೀಂ ಇಂಡಿಯಾ ಕುರಿತು ತಂಡದ ಮಾಜಿ ಕ್ಯಾಪ್ಟನ್, ಕ್ರಿಕೆಟ್​ ದಂತಕಥೆ ಎನಿಸಿರುವ ಕಪಿಲ್ ದೇವ್ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ, ಅಷ್ಟೇ ಅಲ್ಲ ಅವರು ಸಲಹೆಯನ್ನೂ ನೀಡಿದ್ದಾರೆ.
ಇದನ್ನೂಓದಿ:ಭಯೋತ್ಪಾದನೆ, ಹಿಂಸಾಚಾರದ ವಿರುದ್ಧ ನಿಲುವು ತಳೆದ ಭಾರತ-ವಿಶ್ವಸಂಸ್ಥೆಯಲ್ಲಿ ರಾಯಭಾರಿ ಕಾಂಬೋಜ್ ಹೇಳಿದ್ದೇನು?
“ಆಟಗಾರರು ಏನಾಯಿತು ಎಂಬುದನ್ನು ಮರೆತುಬಿಡಬೇಕು. ಇದು ನಿಮ್ಮ ಜೀವನದಲ್ಲಿ ಕಳೆದುಹೋದ ಕಹಿಗಳಿಗೆಯಾಗಿದ್ದು, ಆಘಾತವಲ್ಲ. ಆಟಗಾರರು ಧೈರ್ಯದಿಂದ ಮುಂದುವರಿಯಬೇಕು. ಈಗ ನೀವು ನಿಮ್ಮ ಮುಂದಿನ ದಿನವನ್ನು ಯೋಜಿಸಬೇಕಾಗಿದೆ. ಹಿಂದೆ ಏನಾಯಿತು ಎಂಬುದನ್ನು ನಾವು ಅಲ್ಲಗಳೆಯಲು ಸಾಧ್ಯವಿಲ್ಲ, ಆದರೆ ನೀವು ಕಷ್ಟಪಟ್ಟು ಕೆಲಸ ಮಾಡಬೇಕು. ಸೋಲಿನ ನಂತರ ಏನು ಬೇಕಾದರೂ ಹೇಳಬಹುದು, ಆದರೆ ಗೆದ್ದ ನಂತರ ಎಲ್ಲವೂ ಮುಗಿಯುತ್ತದೆ. ಭಾರತ ತಂಡವು ವಿಶ್ವಕಪ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿತು. ಆದರೆ ಅಂತಿಮ ಪಂದ್ಯವನ್ನು ಗೆಲ್ಲಲು ಸಾಧ್ಯವಾಗಲಿಲ್ಲ. ಆದರೆ ನಿಜವಾದ ಆಟಗಾರನು ತಪ್ಪುಗಳಿಂದ ಕಲಿಯುವವನು” ಎಂದು 1983ರಲ್ಲಿ ತಂಡದ ನಾಯಕ ನಾಗಿ ವಿಶ್ವಕಪ್​ ಗೆದ್ದ ಕಪಿಲ್ ದೇವ್ ಟೀಂ ಇಂಡಿಯಾ ಆಟಗಾರರಿಗೆ ಧೈರ್ಯ ತುಂಬಿದ್ದಾರೆ.
ಫೈನಲ್​ ಪಂದ್ಯಕ್ಕೆ ಕಪಿಲ್​ಗೆ ಆಹ್ವಾನಿಸಲಿಲ್ಲವೇ?:ವಿಶ್ವಕಪ್ ಫೈನಲ್‌ಗೆ ಕಪಿಲ್ ದೇವ್ ಅವರನ್ನು ಆಹ್ವಾನಿಸಿರಲಿಲ್ಲ. ಈ ಕುರಿತ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಭಾರತದ ಮಾಜಿ ನಾಯಕ ಕಪಿಲ್ ದೇವ್ ಅವರು ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ವಿಶ್ವಕಪ್ ಫೈನಲ್ ವೀಕ್ಷಿಸಲು ನನಗೆ ಆಹ್ವಾನವಿಲ್ಲ ಎಂದು ಹೇಳುತ್ತಾರೆ. ಈ ವಿಡಿಯೋಗೆ ಮಿಶ್ರ ಪ್ರತಿಕ್ರಿಯೆ ನೀಡುವ ಮೂಲಕ ಸಾಮಾಜಿಕ ಜಾಲತಾಣ ಬಳಕೆದಾರರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಭಾರತ-ಆಸ್ಟ್ರೇಲಿಯಾ ಫೈನಲ್‌ಗೆ ಮಾಜಿ ಕ್ರಿಕೆಟಿಗರು ಸೇರಿದಂತೆ ಹಲವು ಗಣ್ಯರನ್ನು ಆಹ್ವಾನಿಸಲಾಗಿತ್ತು. ಸಚಿನ್ ತೆಂಡೂಲ್ಕರ್, ಶಾರುಖ್ ಖಾನ್, ರಣವೀರ್ ಸಿಂಗ್, ದೀಪಿಕಾ ಪಡುಕೋಣೆ ಸೇರಿದಂತೆ ಅನೇಕ ಪ್ರಸಿದ್ಧ ಮುಖಗಳು ಮೈದಾನದಲ್ಲಿ ಟೀಮ್ ಇಂಡಿಯಾವನ್ನು ಹುರಿದುಂಬಿಸುತ್ತಿರುವುದು ಕಂಡುಬಂದಿತ್ತು. ಆದರೆ ಮಾಜಿ ದಂತಕಥೆ ಕಪಿಲ್ ದೇವ್ ಅವರಿಗೆ ಆಹ್ವಾನ ನೀಡಿಲ್ಲ ಎಂದಿದ್ದಾರೆ.
ಟೀಂ ಇಂಡಿಯಾವನ್ನು ಸಂತೈಸಿದ ಪ್ರಧಾನಿ ಮೋದಿ ಅವರನ್ನು ಕೆಟ್ಟ ಶಕುನ ಎಂದ ರಾಹುಲ್​ ಗಾಂಧಿ; ವ್ಯಾಪಕ ಆಕ್ರೋಶ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × three =
Remember me
