ನವದೆಹಲಿ:ಕಳೆದ ಒಂದು ತಿಂಗಳಿನಿಂದಲೂ ಭಾರತದ ಕುಸ್ತಿಪಟುಗಳು ದೆಹಲಿಯಲ್ಲಿ ಬಿಜೆಪಿ ಸಂಸದ, ಡಬ್ಲ್ಯೂಎಫ್​ಐ ಮುಖ್ಯಸ್ಥ ಬ್ರಿಜ್ ಭೂಷಣ್ ಬಂಧನಕ್ಕೆ ಆಗ್ರಹಿಸುತ್ತಿದ್ದಾರೆ. ಈ ಬಗ್ಗೆ ರಾಜ್ಯಸಭಾ ಸದಸ್ಯ, ಸುಪ್ರೀಂಕೋರ್ಟ್​ನ ಹಿರಿಯ ವಕೀಲ ಕಪಿಲ್ ಸಿಬಲ್ ಆಡಳಿತರೂಢ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ನಾವು ಬಿಜೆಪಿ ಜತೆ ಸೇರ್ಕೊಂಡು ಪಿತೂರಿ ಮಾಡ್ತಿದ್ದೇವೆ! ಸರಿ ಬಿಡಪ್ಪ ಎಂದು ಟ್ವೀಟ್ ಮಾಡಿದ್ರು ಕಪಿಲ್ ಸಿಬಲ್​
“ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆ ಅಡಿ ಆರೋಪಿಗಳನ್ನು ಕೂಡಲೇ ಬಂಧಿಸಬೇಕು. ಇದು ಎಲ್ಲಾ ಆರೋಪಿಗಳಿಗೂ ಅನ್ವಯವಾಗುತ್ತದೆ. ಆದ್ರೆ, ಬ್ರಿಜ್ ಭೂಷಣ್ ಸಿಂಗ್​ಗೆ ಮಾತ್ರ ಅನ್ವಯವಾಗುವುದಿಲ್ಲವೇ?, ಯಾಕೆ ಅವರು ಕೇಸರಿ ಪಕ್ಷಕ್ಕೆ ಸೇರುತ್ತಾರೆ ಎಂಬ ಕಾರಣವಾ?” ಎಂದು ಹೇಳಿದ್ದಾರೆ.
ಇದನ್ನೂ ಓದಿ:ವಾಜಪೇಯಿ ಅವರ ಮಾತನ್ನೇ ಕೇಳದ ನೀವು ನಮ್ಮ ಮಾತನ್ನೇಕೆ ಕೇಳುತ್ತೀರಿ? ಬಿಜೆಪಿಗೆ ಕಪಿಲ್​ ಸಿಬಲ್​ ಪ್ರಶ್ನೆ
ಈ ಕುರಿತು ಟ್ವೀಟ್​ ಮಾಡಿರುವ ಕಪಿಲ್ ಸಿಬಲ್, “ಪೋಕ್ಸೋ ಕಾಯ್ದೆ ಅರ್ಜಿ ಸೇರಿದಂತೆ 164 ಹೇಳಿಕೆಗಳು ಬ್ರಿಜ್ ಭೂಷಣ್ ಸಿಂಗ್ ಹೊರತುಪಡಿಸಿ, ಎಲ್ಲಾ ಆರೋಪಿಗಳಿಗೂ ಅನ್ವಯವಾಗುತ್ತದೆ. ಕಾರಣ, ಅವರು ಬಿಜೆಪಿಗೆ ಸೇರುತ್ತಾರೆ, ಮಹಿಳಾ ಕುಸ್ತಿಪಟುಗಳು ಲೆಕ್ಕಕ್ಕಿಲ್ಲ, ಮತಗಳು ಮಾತ್ರ!, ಸರ್ಕಾರದ ಕಾಳಜಿ ವಹಿಸುವುದಿಲ್ಲ. ಇದೇನಾ ನನ್ನ ಹೊಸ ಭಾರತ? ಎಂದು ಪ್ರಶ್ನಿಸಿದ್ದಾರೆ.(ಏಜೆನ್ಸೀಸ್)
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:three + eight =
Remember me
