ನಾಗಪುರ:ಶಿವಸೇನಾ ನಾಯಕ ನಿತಿನ್ ನಂದಗಾಂವ್ಕರ್ ಫೇಸ್​ಬುಕ್​ ವಿಡಿಯೋದಲ್ಲಿ ‘ಕರಾಚಿ ಸ್ವೀಟ್ಸ್/ಕರಾಚಿ ಬೇಕರಿ’ ಹೆಸರು ಬದಲಾಯಿಸುವಂತೆ 15 ದಿನಗಳ ಗಡುವು ನೀಡಿರುವುದು ರಾಜಕೀಯವಾಗಿ ಸದ್ದು ಉಂಟುಮಾಡಿದೆ. ಅವರ ವಿಡಿಯೋ ಅಪ್ಲೋಡ್ ಆದ ಕೆಲವೇ ಗಂಟೆಗಳಲ್ಲಿ ಶಿವಸೇನೆ ಅದು ಪಕ್ಷದ ನಿಲುವಲ್ಲ, ನಿತಿನ್ ಅವರ ವೈಯಕ್ತಿಕ ನಿಲುವು ಎಂದು ಅಂತರ ಕಾಯ್ದುಕೊಂಡಿತ್ತು.
ಈ ಬಗ್ಗೆ ಮಹಾರಾಷ್ಟ್ರದ ಮಾಜಿ ಸಿಎಂ ದೇವೇಂದ್ರ ಫಡ್ನಾವೀಸ್ ಪ್ರತಿಕ್ರಿಯಿಸಿದ್ದು, ‘ಕರಾಚಿ’ಯೂ ಭಾರತದ ಭಾಗವಾಗಲಿದೆ ಎಂದು ವಿರೋಧಿಗಳ ಕಣ್ಣು ಕೆಂಪಾಗುವಂತೆ ಮಾಡಿದ್ದಾರೆ. ನಿತಿನ್ ಗಾಂವ್ಕರ್ ಮುಂಬೈನ ಬಾಂದ್ರಾದಲ್ಲಿರುವ ಕರಾಚಿ ಸ್ವೀಟ್ಸ್ ಶಾಪ್​ಗೆ ತೆರಳಿ ಕರಾಚಿ ಪಾಕಿಸ್ಥಾನದ ನಗರವಾಗಿದ್ದು, ಅದನ್ನು ಬದಲಾಯಿಸಿ ಎಂದು ಹದಿನೈದು ದಿನಗಳ ಗಡುವು ನೀಡಿದ್ದು ವಿಡಿಯೋದಲ್ಲಿ ದಾಖಲಾಗಿದೆ.
ಇದನ್ನೂ ಓದಿ:ಕಾಂಗ್ರೆಸ್ ಸೋಲೋದಕ್ಕೆ 5 ಸ್ಟಾರ್ ಸಂಸ್ಕೃತಿ ಕಾರಣ- ಗುಲಾಂ ನಬಿ ಆಜಾದ್ ನೇರ ಮಾತು!
ಈ ವಿಚಾರವಾಗಿ ಪ್ರತಿಕ್ರಿಯಿಸಿದ ದೇವೇಂದ್ರ ಫಡ್ನಾವೀಸ್, ಅಖಂಡ ಭಾರತದ ಪರಿಕಲ್ಪನೆಯಲ್ಲಿ ನಂಬಿಕೆ ಉಳ್ಳವರು ನಾವು. ಅದೇ ರೀತಿ ಕರಾಚಿಯೂ ಭಾರತದ ಭಾಗವಾಗಿರಲಿದೆ ಎಂದೂ ನಂಬಿದ್ದೇವೆ ಎಂದು ಕುಟುಕು ಪ್ರತಿಕ್ರಿಯೆ ನೀಡಿ ಗಮನಸೆಳೆದ್ದಿದ್ದಾರೆ. (ಏಜೆನ್ಸೀಸ್)
ಶಿವಸೇನಾ ಕಾರ್ಯಕರ್ತ ‘ಕರಾಚಿ’ ಸ್ವೀಟ್ಸ್ ಹೆಸರು ಬದಲಿಸಿ ಅಂದ: ಆ ಬೇಡಿಕೆ ಪಕ್ಷದ್ದಲ್ಲ ಎಂದ ಶಿವಸೇನೆ !

ಗೋಪಾಷ್ಟಮಿ ದಿನವೇ ಅಸ್ಸಾಂನಲ್ಲಿ ಶುರುವಾಯಿತೊಂದು ಗೋಆಸ್ಪತ್ರೆ !: ಈಶಾನ್ಯ ರಾಜ್ಯಗಳಲ್ಲಿ ಮೊದಲನೇಯದು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × three =
Remember me
