ಮುಂಬೈ:ಪಂಜಾಬ್​ ಗಾಯಕನ ಹತ್ಯೆ ಬಳಿಕ ಬಾಲಿವುಡ್​​ ನಟ ಸಲ್ಮಾನ್​ ಖಾನ್​​ ಹತ್ಯೆಗೆ ಸಂಚು ರೂಪಿಸಿದ್ದ ಬಿಷ್ಣೋಯಿ ಲಿಸ್ಟ್​​ನಲ್ಲಿ ಮತ್ತೊಬ್ಬ ಖ್ಯಾತ ನಿರ್ದೇಶಕನ ಹೆಸರು ಇತ್ತು ಎಂಬ ಮಾಹಿತಿ ತನಿಖೆಯಿಂದ ಬೆಳಕಿಗೆ ಬಂದಿದೆ.
ಸಲ್ಮಾನ್​ ಖಾನ್​ಗೆ ಜೀವಬೆದರಿಕೆ ಪತ್ರ ಹಾಗೂ ಪಂಜಾಬ್​ ಗಾಯಕ ಸಿಧು ಮೂಸೆವಾಲ ಹತ್ಯೆ ಪ್ರಕರಣದಲ್ಲಿ ವಿಚಾರಣೆ ಎದುರಿಸುತ್ತಿರುವ ಲಾರೆನ್ಸ್​ ಬಿಷ್ಣೋಯಿ ಗ್ಯಾಂಗ್​​, ಕರಣ್​ ಜೋಹರ್​ ಹತ್ಯೆಗೂ ಸಂಚು ರೂಪಿಸಿದ್ದರು ಎಂದು ಪೊಲೀಸ್​ ಮೂಲಗಳು ತಿಳಿಸಿವೆ.

ಕರಣ್​ ಜೋಹರ್​​ನನ್ನು ಅಪಹರಿಸಿ 5 ಕೋಟಿ ರೂ. ಬೇಡಿಕೆ ಇಡುವ ಬಗ್ಗೆಯೂ ಈ ಗ್ಯಾಂಗ್​ ಯೋಜನೆ ರೂಪಿಸಿತ್ತು. ಒಂದು ವೇಳೆ ದುಡ್ಡು ಸಿಗಲಿಲ್ಲವೆಂದಾದಲ್ಲಿ ಅವರ ಹತ್ಯೆಗೂ ಯೋಜನೆ ರೂಪಿಸಿದ್ದೇವು ಎಂದು ತಪ್ಪೊಪ್ಪಿಕೊಂಡಿದ್ದಾನೆ.
ಒಟ್ಟಾರೆ ಬಾಲಿವುಡ್​ ನಟರ ಮೇಲೆ ಗ್ಯಾಂಗ್​​ಸ್ಟರ್​​ ಲಾರೆನ್ಸ್​ ಬಿಷ್ಣೋಯಿ ತಂಡ ಸಂಚು ರೂಪಿಸಿದ್ದು, ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಈ ನಡುವೆ ಪಂಜಾಬ್​ ಗಾಯಕ ಸಿಧು ಮೂಸೆವಾಲ ಅವರ ಹತ್ಯೆ ಕುರಿತ ತನಿಖೆಯೂ ಚುರುಕುಗೊಂಡಿದೆ.(ಏಜೆನ್ಸೀಸ್​)
VIDEO: ವಿದ್ಯಾರ್ಥಿನಿಯರೊಂದಿಗೆ ಸರ್ಕಾರಿ ಶಾಲಾ ಶಿಕ್ಷಕಿಯ ಡ್ಯಾನ್ಸ್​​ಗೆ ಭಾರೀ ಪ್ರಶಂಸೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × three =
Remember me
