ಮುಂಬೈ:ಬಾಲಿವುಡ್​​ ಖ್ಯಾತ ನಿರ್ಮಾಪಕ ಹಾಗೂ ನಿರ್ದೇಶಕ ಕರಣ್​ ಜೋಹರ್​ ಇತ್ತೀಚೆಗೆ ತಮ್ಮ 50ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದು, ತಮ್ಮ ಬರ್ತ್​ ಡೇ ಪಾರ್ಟಿಯಲ್ಲಿ ಪಾಲ್ಗೊಳ್ಳಲು ಬಾಲಿವುಡ್​​ ದಂಡೇ ಹರಿದುಬಂದಿತ್ತು. ಆದರೀಗ ಈ ಪಾರ್ಟಿಯಲ್ಲಿ ಪಾಲ್ಗೊಂಡ 50 ಮಂದಿಗೆ ಕರೊನಾ ಸೋಂಕು ತಗುಲಿದೆ ಎಂಬ ಬಗ್ಗೆ ವರದಿಯಾಗಿದ್ದು, ಇದರ ಸತ್ಯಾಸತ್ಯತೆ ಇಲ್ಲಿದೆ.
ಪ್ರತಿ ವರ್ಷದಂತೆ ಈ ವರ್ಷವೂ  ಕರಣ್​ ಜೋಹರ್​ ಹುಟ್ಟುಹಬ್ಬ ಭಾರೀ ಅದ್ಧೂರಿಯಾಗಿ ನಡೆದಿತ್ತು, ಇದರಲ್ಲಿ ಸಲ್ಮಾನ್​ ಖಾನ್​, ವಿಕ್ಕಿ ಕೌಶಲ್​, ಕತ್ರಿನಾ ಕೈಫ್​​, ಕರೀನಾ ಕಪೂರ್​, ಐಶ್ವರ್ಯಾ ರೈ, ರಾಣಿ ಮುಖರ್ಜಿ, ಪ್ರೀತಿ ಜಿಂಟಾ, ಕಾಜಲ್​ ಹೀಗೇ ಎಲ್ಲಾ ಬಾಲಿವುಡ್​ ತಾರೆಯರು ಪಾಲ್ಗೊಂಡಿದ್ದರು.

ಆದರೀಗ ಈ ಹುಟ್ಟುಹಬ್ಬ ಆಚರಣೆ ವೇಳೆ ಕರೊನಾ ಸ್ಫೋಟಗೊಂಡಿದೆ ಎಂಬ ಆರೋಪ ಕೇಳಿಬಂದಿದೆ. ಪಾರ್ಟಿಯಲ್ಲಿ ಪಾಲ್ಗೊಂಡಿದ್ದ ಬಹುತೇಕ ಸಿನಿಮಾ ತಾರೆಯರಿಗೆ ಕೊವಿಡ್​ ತಗುಲಿದೆ ಎಂದು ಶನಿವಾರ ವರದಿಯಾಗಿತ್ತು. ಆದರೆ ಈ ಬಗ್ಗೆ  ಯಾರಿಗೂ ಕರೊನಾ ತಗುಲಿಲ್ಲ, ಹುಟ್ಟುಹಬ್ಬ ಆಚರಣೆ ವೇಳೆ ಕರೊನಾ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿತ್ತು ಎಂದು  ಹೇಳಲಾಗಿದೆ.
ಕರೊನಾ ಹರಡಿದೆ ಎಂಬುದು ಶುದ್ಧ ಸುಳ್ಳು, ಇದೊಂದು ವದಂತಿ ಎಂದು ಕಾರ್ಯಕ್ರಮ ಆಯೊಜಕರು ಸ್ಪಷ್ಟಪಡಿಸಿದ್ದಾರೆ. ಆದರೆ ಕರಣ್​ ಜೋಹರ್​ ಹುಟ್ಟಹಬ್ಬ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡಿದ್ದ ನಟ ಕಾರ್ತಿಕ್​ ಆರ್ಯನ್​ಗೆ ಕರೊನಾ ಸೋಂಕು ದೃಢವಾಗಿರುವುದು ಮಾತ್ರ ಅನುಮಾನಕ್ಕೆಡೆ ಮಾಡಿಕೊಟ್ಟಿದೆ.(ಏಜೆನ್ಸೀಸ್​)
ಚಡ್ಡಿ ವಾರ್​: ಹಿಂದು ಸಂಘಟನೆಯಿಂದ ಮಾಜಿ ಸಿಎಂ ಸಿದ್ದರಾಮಯ್ಯ, ನಲಪಾಡ್​ಗೆ ಚಡ್ಡಿ ಪಾರ್ಸಲ್​!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen − four =
Remember me
